Advertisement

ಬಿಜೆಪಿ ಎಂದಿಗೂ ದಲಿತರ ವಿರೋಧಿಯಲ್ಲ : ನಾರಾಯಣಸ್ವಾಮಿ

01:23 PM Sep 03, 2020 | sudhir |

ಚಾಮರಾಜನಗರ: ಬಿಜೆಪಿ ಪಕ್ಷ ದಲಿತ ವಿರೋಧಿಯಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ದಲಿತರ ಸಂಗಮ ಸ್ಥಳವಾಗಲಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು. ನಗರದ ನಿಜಗುಣ ರೆಸಿಡೆಸ್ಸಿ ಹಾಲ್‌ನಲ್ಲಿ ನಡೆದ ಬಿಜೆಪಿ ಜಿಲ್ಲಾ ಎಸ್‌ಸಿ ಮೋರ್ಚಾದ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ
ಬಂದಾಗಿನಿಂದಲೂ ಆಡಳಿತ ನಡೆಸಿರುವ ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳು ಸುಳ್ಳು ಹೇಳಿ ಬಿಜೆಪಿ ದಲಿತರ ವಿರೋಧಿ ಎಂಬ ಭಾವನೆ ಮೂಡಿಸಿ, ದಲಿತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದೆ.

Advertisement

ಕಾಂಗ್ರೆಸ್‌ 70 ವರ್ಷಗಳಿಂದ ಮಾಡದ ದಲಿತರ ಪರ ಕೆಲಸಗಳನ್ನು ಬಿಜೆಪಿ ಕೇವಲ 6 ವರ್ಷಗಳಲ್ಲಿ ಮಾಡಿದೆ. ದಲಿತರ ಕಲ್ಯಾಣಕ್ಕಾಗಿ ಹೆಚ್ಚು ಹೆಚ್ಚು ಅನುದಾನವನ್ನು ಮೀಸಲಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್‌ ಅವರಿಗೆ ಹೆಚ್ಚು
ಗೌರವ ತಂದು ಕೊಡುವ ಕೆಲಸಗಳನ್ನು ಮಾಡಿದ್ದಾರೆ ಎಂದರು.

ಪಕ್ಷ ಸಂಘಟನೆ ಪ್ರಥಮಸ್ಥಾನ: ಬಿಜೆಪಿ ಎಸ್‌ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಜಿ. ಎನ್‌. ನಂಜುಂಡಸ್ವಾಮಿ ಮಾತನಾಡಿ, ಬಿಜೆಪಿ ಸಂಘಟನೆ ವೈಶಿಷ್ಠತೆಯಿಂದ ಕೂಡಿದ್ದು, ಇಡೀ ವಿಶ್ವದಲ್ಲಿ ಪಕ್ಷದ ಸಂಘಟನೆ ಪ್ರಥಮ
ಸ್ಥಾನದಲ್ಲಿದೆ. ಸಂಘಟನೆಯಲ್ಲಿ ಬಿಜೆಪಿ ಮೀರಿಸುವ ಸಂಘಟನೆ ಬೇರೊಂದಿಲ್ಲ. ವಿಶ್ವದಲ್ಲಿ ಆಗ್ರಗಣ್ಯನಾಯಕರ ಸ್ಥಾನದಲ್ಲಿ ಪ್ರಧಾನಿ ಮೋದಿ ಅವರು ನಿಲ್ಲುತ್ತಾರೆ. ದಲಿತರ ಪರವಾಗಿ ಧ್ವನಿ ಎತ್ತಿದ್ದಾರೆ. ಅದೇ ರೀತಿಯಲ್ಲಿ ರಾಜ್ಯದಲ್ಲೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೂಡ ದಲಿತರ ಕಲ್ಯಾಣಕ್ಕಾಗಿ ಹೆಚ್ಚು ಒತ್ತು ನೀಡಿದ್ದಾರೆ ಎಂದರು.

ಸಂಘಟಿಸಲು ಶ್ರಮ: ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಎಸ್‌ಸಿಮೋರ್ಚಾದ ಅಧ್ಯಕ್ಷ ಕಿನಕಹಳ್ಳಿ ರಾಚಯ್ಯ ಮಾತನಾಡಿ, ಜಿಲ್ಲೆಯಲ್ಲಿ ತಳಮಟ್ಟದಿಂದ ಬಿಜೆಪಿ ಸಂಘಟಿಸಲು ಶ್ರಮವಹಿಸಲಾಗುತ್ತಿದೆ. ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು
ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಲು ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಸಭೆಯಲ್ಲಿ ಮೈಸೂರು ವಿಭಾಗೀಯ ಸಂಘಟನಾ ಕಾರ್ಯದರ್ಶಿ ಮೈ.ವಿ.ರವಿಶಂಕರ್‌, ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಸುಂದರ್‌, ಉಪಾಧ್ಯಕ್ಷ ದತ್ತೇಶ್‌ ಕುಮಾರ್‌, ಎಸ್‌ಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್‌, ಕಾರ್ಯಾಲಯ ಕಾರ್ಯದರ್ಶಿ ಅರುಣ್‌, ಕಾರ್ಯದರ್ಶಿ ಪರಮಾನಂದ, ಜಿಪಂ ಸದಸ್ಯ ಆರ್‌.ಬಾಲರಾಜ್‌, ಜಿಪಂ ಮಾಜಿ ಅಧ್ಯಕ್ಷ ಎಸ್‌.ಮಹದೇವಯ್ಯ,
ಎಸ್‌ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್‌, ಶ್ರೀನಾಥ್‌, ಜಿಲ್ಲಾ ಕಾರ್ಯದರ್ಶಿ ಕೆರೆಹಳ್ಳಿ ಮಹದೇವ ಸ್ವಾಮಿ, ನಗರ ಮಂಡಲ ಅಧ್ಯಕ್ಷ ರಾಜು, ಗ್ರಾಮಾಂತರ ಮಂಡಲ ಅಧ್ಯಕ್ಷ ಜಿ.ಪ್ರಶಾಂತ್‌, ಮುಖಂಡರಾದ
ನಾರಾಯಣಪ್ರಸಾದ್‌, ನಿಜಗುಣರಾಜು, ವೆಂಕಟರಮಣ ಸ್ವಾಮಿ, ಡಿ.ಎನ್‌.ನಟರಾಜು, ಕಬ್ಬಹಳ್ಳಿ ರೇವಣ್ಣ, ಜಿಲ್ಲಾ ಮಾಧ್ಯಮ ಪ್ರಮುಖ್‌ ಎನ್‌.ಮಂಜುನಾಥ್‌ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next