ನಾರಾಯಣಪುರ: ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಪಾಡಲು ಮುಂದಾಗಿರುವ ಸಿ.ಎಂ ಸಿದ್ದರಾಮಯ್ಯ ಅವರು ಡಿಸಿಎಂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ ಅವರ ನೇತೃತ್ವದ ಸರ್ಕಾರವು ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆಗಳಿಗೆ ಚಾಲು ಬಂದ್ ಪದ್ದತಿಯಲ್ಲಿ ಕಾಲುವೆಗಳಿಗೆ ನೀರು ಬಂದ್ ಮಾಡುವ 10 ದಿನಗಳ ಬದಲು 8 ದಿನಗಳಿಗೆ ಇಳಿಸಿದ್ದು, ಜೊತೆಗೆ ಕಾಲುವೆಗಳಿಗೆ ನ.23 ರವರಗೆ ನೀರು ಹರಿಸಿ ಬಳಿಕ ಸ್ಥಗಿತಗೊಳಿಸುವ ನಿರ್ಣಯಕ್ಕೆ ಬದಲಾಗಿ ನೀರು ಹರಿಸುವ ದಿನಗಳನ್ನು 17 ದಿನಗಳಿಗೆ ಹೆಚ್ಚಿಸಿ ಡಿ.10 ರವರಗೆ ಕಾಲುವೆ ಜಾಲಗಳಿಗೆ ನೀರು ಹರಿಸುವಂತೆ ಬೆಂಗಳೂರಿನಲ್ಲಿ ನಡೆದ ಯುಕೆಪಿ ಐಸಿಸಿ ತುರ್ತು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಯುಕೆಪಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾಗಿರುವ ಅಬಕಾರಿ ಸಚಿವರು ಆರ್.ಬಿ ತಿಮ್ಮಾಪುರ ಆದೇಶ ಮಾಡಿದ್ದಾರೆ ಎಂದು ನಾರಾಯಣಪುರ ಆಣೆಕಟ್ಟು ವಲಯದ ಸಿಇ ಆರ್.ಮಂಜುನಾಥ ತಿಳಿಸಿದರು.
ಪತ್ರಿಕೆಗೆ ಮಾಹಿತಿ ನೀಡಿರುವ ಅವರು, ಈಗಾಗಲೇ ಅಚ್ಚುಕಟ್ಟು ಭಾಗದ ಶಾಸಕರು, ರೈತರು ಪ್ರಸ್ತುತ ಮಳೆ ಕೊರತೆ ಹಾಗೂ ರೈತರು ಬೆಳೆದ ಬೆಳೆಗೆ ನೀರಿನ ಅವಶ್ಯಕತೆ ಇದೆ. ರೈತರಿಗೆ ತೊಂದರೆ ಇರುವ ಬಗ್ಗೆ ಸಿಎಂ, ಡಿಸಿಎಂ ಹಾಗೂ ಯುಕೆಪಿ ಐಸಿಸಿ ಅಧ್ಯಕ್ಷರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ನಾರಾಯಣಪುರ ಬಸವಸಾಗರ ಮತ್ತು ಆಲಮಟ್ಟಿ ಲಾಲ್ ಬಹದ್ಧೂರ ಶಾಸ್ತ್ರೀ ಉಭಯ ಜಲಾಶಗಳಲ್ಲಿ ಸಂಗ್ರಹವಿರುವ ನೀರಿನ ಲಭ್ಯತೆ ಸಂಪೂರ್ಣ ಮಾಹಿತಿ ಪಡೆದು ಸುದೀರ್ಘ ಚರ್ಚೆ ನಡೆಸಿ, ಈ ಹಿಂದಿನ ಜಲಾಶಯಗಳಿಗೆ ಒಳ ಹರಿವು ಸ್ಥಗಿತಗೊಂಡರೆ ಚಾಲು ಬಂದ್ ಪದ್ದತಿ ಅನುಸರಿಸುವ ನಿರ್ಣಯದಂತೆ ಅ.17ಕ್ಕೆ ಕಾಲುವೆ ಜಾಲಗಳಿಗೆ ನೀರು ಹರಿಸಬೇಕಾಗಿತ್ತು ಅದನ್ನು ಬದಲಿಗೆ ಅ.14 ರಿಂದಲೆ ಕಾಲುವೆ ಜಾಲಗಳಿಗೆ ನೀರು ಹರಿಸಲು ನಿರ್ಣಯ ಕೈಗೊಳ್ಳಲಾಗಿದೆ.
ಪರಿಷ್ಕರಿಸಲಾದ ವೇಳಾಪಟ್ಟಿಯಂತೆ ಅಚ್ಚುಕಟ್ಟು ಕಾಲುವೆಗಳಿಗೆ ಮುಂದಿನ ಅ.14 ರಂದು ನೀರು ಹರಿಸಲು ಆರಂಭಿಸಿ ಅ.27ರವರಗೆ 14 ದಿನ ನೀರು ಹರಿಸುವುದು ನಂತರದಲ್ಲಿ ಅ.28 ರಿಂದ ನ.4 ರವರಗೆ ಅಂದರೆ 8 ದಿನಗಳು ಬಂದ್ ಮಾಡುವುದು. ಈ ನಂತರದಲ್ಲಿ ನ.5 ರಿಂದ ನೀರು ಹರಿಸಲು ಆರಂಭಿಸಿ ನ.18 ರವರಗೆ, ಮುಂದುವರೆದು ನ.19 ರಿಂದ ನ.26 ರವರಗೆ ಬಂದ್ ಮಾಡುವುದು ನ.27 ರಿಂದ ಡಿ.10 ರವರೆಗೆ ನೀರು ಹರಿಸಲಾಗುತ್ತದೆ ಎಂದು ತಿಳಿಸಿದರು.
ಪ್ರಸ್ತುತ ನ.11 ರವರೆಗೆ ಆಲಮಟ್ಟಿ ಹಾಗೂ ನಾರಾಯಣಪುರ ಉಭಯ ಜಲಾಶಯಗಳಲ್ಲಿ ನೀರಾವರಿಗಾಗಿ 59.969 ಟಿಎಂಸಿ ಅಡಿಗಳಷ್ಟು ನೀರಿದ್ದು, ಬಾಕಿ ಉಳಿದಿರುವ ದಿನಗಳಿಗೆ ಚಾಲು ಬಂದ್ ಪದ್ದತಿ ಅನುಸರಿಸಿ ಕಾಲುವೆಗಳಿಗೆ ನೀರು ಹರಿಸಲು 42 ಟಿಎಂಸಿ ಅಡಿಗಳಷ್ಟು ಬೇಕಾಗುತ್ತದೆ. ಬಳಿಕ 17.969 ಟಿಎಂಸಿಯಷ್ಟು ನೀರು ಉಳಿಯುತ್ತದೆ ಎಂದರು.
ನಂತರದ ಮುಂದಿನ ಹಿಂಗಾರು ಹಂಗಾಮಿಗೆ 120 ದಿನಗಳಿಗೆ ಅಗತ್ಯವಿರುವ 80 ಟಿಎಂಸಿ ಅಡಿಗಳಷ್ಟು ನೀರು ಬೇಕಾಗುತ್ತದೆ ಉಭಯ ಜಲಾಶಯಗಳಲ್ಲಿ ನೀರಿನ ಲಭ್ಯತೆ ಗಮನಸಿದರೆ ಹಿಂಗಾರು ಹಂಗಾಮಿ 62.031 ಟಿಎಂಸಿ ಅಡಿಗಳಷ್ಟು ನೀರಿನ ಕೊರೆತೆ ಉಂಟಾಗಲಿದೆ ಹೀಗಾಗಿ ಹಿಂಗಾರು ಹಂಗಾಮಿಗೆ ನೀರಾವರಿಗೆ ನೀರು ಪೂರೈಸಲು ಸಾದ್ಯವಿಲ್ಲಾ ಎಂದು ಪ್ರಕಟನೆ ಮೂಲಕ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಮಳೆ ಕೊರೆತೆ ಹಿನ್ನೆಲೆ: ಅಚ್ಚುಕಟ್ಟು ಭಾಗದ ರೈತ ಹಿತದೃಷ್ಟಿಯಿಂದ ನ.23 ರ ಬದಲು ಡಿ.10ರವರಗೆ ಕಾಲುವೆಗಳಿಗೆ ನೀರು ಹರಿಸಲು ನಿರ್ಣಯ ತೆಗೆದುಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರಿಗೆ, ಡಿಸಿಎಂ ಡಿಕೆ ಶಿವಕುಮಾರ ಅವರಿಗೆ ಐಸಿಸಿ ಅಧ್ಯಕ್ಷರು ಸಚಿವರು ಆರ್.ಬಿ ತಿಮ್ಮಾಪುರ ಅವರಿಗೆ ಅಭಿನಂದನೆಗಳು. ಚಾಲುಬಂದ್ ನಲ್ಲಿ ಬಂದ್ ಮಾಡುವ ದಿನಗಳನ್ನು 10 ದಿನಗಳ ಬದಲು 8 ದಿನಗಳಿಗೆ ಇಳಿಸಿದ್ದಾರೆ.-
ರಾಜಾ ವೆಂಕಟಪ್ಪ ನಾಯಕ ಶಾಸಕರು ಸುರಪುರ