Advertisement

ಒಳಿತಿನ ವಿಜಯದ ಕಥನ ನಾರಸಿಂಹ

06:27 PM Feb 21, 2020 | mahesh |

ನೃತ್ಯವನ್ನು ಮಾತ್ರ ವಿಜೃಂಭಿಸದೆ, ಸಾಹಿತ್ಯ, ನಾಟಕ ಮತ್ತು ಸಂಗೀತವನ್ನು ಸಮಾನಾಂತರವಾಗಿ ಸಮ್ಮಿಲನೀಕರಿಸಿ ಕೊಂಡಿರುವುದೇ ನೃತ್ಯರೂಪಕದ ವೈಶಿಷ್ಟ್ಯತೆ.

Advertisement

ಸುಧಾ ಆಡುಕಳ ರಚಿಸಿದ ಒಳಿತಿನ ವಿಜಯದ ಕಥನ ಹೊಂದಿರುವ ನೃತ್ಯರೂಪಕ ನಾರಸಿಂಹ ಇತ್ತೀಚೆಗೆ ಎಂ.ಜಿ.ಎಂ. ಕಾಲೇಜಿನಲ್ಲಿ ಪ್ರದರ್ಶನಗೊಂಡಿತು. ಕೊಡವೂರಿನ ನೃತ್ಯ ನಿಕೇತನದ ಗುರುಗಳು ಮತ್ತು ವಿದ್ಯಾರ್ಥಿಗಳು ಸೇರಿ ನಾರ ಸಿಂಹನನ್ನು ರಂಗಕ್ಕೆ ತಂದರು.

ಮನುಷ್ಯನ ದೇಹ ಮತ್ತು ಸಿಂಹದ ಮುಖವನ್ನು ಹೊಂದಿರುವ ಎರಡು ವೈರುಧ್ಯಗಳ ಸಮ್ಮಿಳಿತವೇ ನರಸಿಂಹ ಅಥವಾ ನಾರಸಿಂಹ. ನಾರಸಿಂಹ ರೂಪಕವು ಸೃಷ್ಠಿ0‌ುಲ್ಲಿ, ಕತ್ತಲೆಯೂ ಇದೆ, ಬೆಳಕೂ ಇದೆ, ಅಜ್ಞಾನವು ಇದೆ, ಜ್ಞಾನವೂ ಇದೆ, ಭಯವೂ ಇದೆ, ಧೈರ್ಯವೂ ಇದೆ ಹಾಗೂ ಕೆಡಕು ಇದೆ ಮತ್ತು ಒಳಿತು ಇದೆ. ಪ್ರತಿಯೋರ್ವನಲ್ಲಿರುವ ಈ ಎಲ್ಲದರ ಅವಿರ್ಭವಿತ ರೂಪವೇ ನಾರಸಿಂಹ. ನಾರಸಿಂಹ ಪ್ರತಿಯೋರ್ವನಲ್ಲಿರುವ ಒಳಿತು ಕೆಡುಕುಗಳ ಸಂಘರ್ಷದ ರೂಪಕವಾಗಿ ಹೊರಹೊಮ್ಮಿದೆ. ಸತ್ವ ರಜ ಮತ್ತು ತಮೋ ಗುಣಗಳ ಸಾಂಗತ್ಯ ರೂಪಕವೇ ನಾರಸಿಂಹ.

ಕೇವಲ ನೃತ್ಯವನ್ನು ಮಾತ್ರ ವಿಜೃಂಭಿಸದೆ, ಸಾಹಿತ್ಯ, ನಾಟಕ ಮತ್ತು ಸಂಗೀತವನ್ನು ಸಮಾನಾಂತರವಾಗಿ ಸಮ್ಮಿಲನೀಕರಿಸಿಕೊಂಡಿರುವುದೇ ನೃತ್ಯರೂಪಕದ ವೈಶಿಷ್ಟ್ಯತೆ. ನೃತ್ಯರೂಪಕವನ್ನು ನಿರ್ದೇಶಿಸಿದವರು ಡಾ|ಶ್ರೀಪಾದ ಭಟ್‌. ನಾರಸಿಂಹದ ಮೂಲಕ ಮನೋರಂಜನೆ ಎಂಬ ಸ್ಥಾಯಿ ಭಾವಕ್ಕೆ ಚಿಂತನೆ ಎಂಬ ಸಂಚಾರಿ ಭಾವವನ್ನು ಮೇಳೈಸಿರುತ್ತಾರೆ.

ನೃತ್ಯರೂಪಕಕ್ಕೆ ಅಗತ್ಯವಾದ ನೃತ್ಯದ ಸಾಂಗತ್ಯವನ್ನು ನೀಡಿದವರು ಮಾನಸಿ ಸುಧೀರ್‌ ಮತ್ತು ವಿ|ಅನಘಶ್ರೀ. ಪ್ರಮುಖ ಪಾತ್ರಗಳಾದ ಹಿರಣ್ಯಕಶ್ಯಪು (ಸುಧೀರ್‌ ರಾವ್‌ ಕೊಡವೂರು), ಕಯಾದು ( ಮಾನಸಿ ಸುಧೀರ್‌) ಮತ್ತು ಪ್ರಹ್ಲಾದ (ಕು| ಸುರಭಿ ಸುಧೀರ್‌) ಇವರುಗಳ ನೃತ್ಯ ಮತ್ತು ಭಾವಾಭಿನಯ ಪಾತ್ರಕ್ಕೆ ಅನುಗುಣವಾಗಿದ್ದು, ನೃತ್ಯರೂಪಕಕ್ಕೆ ಮೆರಗು ತಂದಿತು. ನಾರಸಿಂಹದ ಸಹ ಕಲಾವಿದರು ಸನ್ನಿವೇಶಕ್ಕೆ ಅಗತ್ಯವಾದ ಸಾಂದರ್ಭಿಕ ಚಿತ್ರಣವನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ನೃತ್ಯರೂಪಕದಲ್ಲಿ ಸಹ ಕಲಾವಿದರ ಪಾತ್ರ ಇದೆ ಎಂಬ ಸತ್ಯವನ್ನು ತೋರಿಸಿತು. ಹಿತಮಿತವಾಗಿ ರಂಗ ಪರಿಕರಗಳನ್ನು ಬಳಸಿಕೊಂಡು ಸಹ ಕಲಾವಿದೆಯರೇ ರಂಗ ಪರಿಕರಗಳಾಗಿ ವಸಂತ ಕಾಲದ ವನದ ದೃಶ್ಯಕ್ಕೆ ಅನುಗುಣವಾದ ಮರ, ಗಿಡ, ಜಿಂಕೆ, ಚಿಟ್ಟೆಗಳಾಗಿ ಅಭಿನಯಿಸಿ, ಪ್ರಕೃತಿಯ ಚಿತ್ರಣ ಮೂಡಿಸಿದ್ದು ಮನೋಜ್ಞವಾಗಿತ್ತು. ಸಹಕಲಾವಿದರು ಪ್ರಹ್ಲಾದನನ್ನು ಕಡಲಿಗೆ ದೂಡಿದಾಗ ಕಡಲಾಗಿ, ಬೆಟ್ಟದಿಂದ ಕೆಳಗಡೆ ದೂಡಿದಾಗ ಬೆಟ್ಟವಾಗಿ, ಹಿರಣ್ಯ ಕಶ್ಯಪು ಬ್ರಹ್ಮಾಂಡವನ್ನು ಜಯಿಸಿ ಪಂಚ ಭೂತಗಳ ಮೇಲೆ ಹಿಡಿತ ಸಾಧಿಸುವ ಚಿತ್ರಣವನ್ನು ನೃತ್ಯ ರೂಪಕದ ಭಾಷೆಯಲ್ಲಿ ಅಭಿವ್ಯಕ್ತಿಗೊಳಿಸಿರುವಂತಹದ್ದು, ಮಾನಸಿ ಸುಧೀರ್‌ ಮತ್ತು ಅನಘಶ್ರೀಯವರ ಸೃಜನಶೀಲತೆಗೆ ಸಾಕ್ಷಿಯಾಗಿದೆ.

Advertisement

ನೃತ್ಯರೂಪಕ ಹಲವು ರಸಗಳನ್ನು ಹೆಣೆದು ಮಾಡಿದ ಸುಂದರವಾದ ಚಿತ್ತಾರ ಎಂಬುದು ಅನುಭವಕ್ಕೆ ಬರುತ್ತದೆ. ಗಾಂಭೀರ್ಯತೆಯ ಮೂರ್ತ ರೂಪವಾದ ವೀರರಸದಿಂದ, ಶೃಂಗಾರ ರಸದೆಡೆಗೆ ತೆರಳಿ, ಒಮ್ಮಿಂದೊಮ್ಮೆಲೆ ಕರುಣ ರಸದೆಡೆಗೆ ಚಿಮ್ಮುವ ನಾಟಕೀಯತೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಪ್ರಹ್ಲಾದ ಮತ್ತು ಕಯಾದು ಅವರೊಂದಿಗೆ ಹಿರಣ್ಯ ಕಶ್ಯಪುವಿನ ಸಂವಾದ ಶಾಂತ ರಸವನ್ನು ಅಭಿವ್ಯಕ್ತಿಗೊಳಿಸುತ್ತಿರುವಾಗ, ಪ್ರಹ್ಲಾದನ ಹರಿನಾಮ ಸ್ಮರಣೆ ಭಯಂಕರ ರಸವನ್ನು ಒಮ್ಮೆಲೆ ಚಿಮ್ಮಿಸಿದಾಗ ವಿದ್ಯುತ್‌ ಸಂಚಲನೆಗೊಂಡದ್ದೇ ಈ ನೃತ್ಯ ರೂಪಕ ಹೇಗೆ ಪ್ರೇಕ್ಷಕರ ಮೇಲೆ ಹಿಡಿತ ಸಾಧಿಸಿದೆ ಎಂಬುದನ್ನು ತೋರಿಸಿಕೊಡುತ್ತದೆ. ಹಾಸ್ಯ ರಸವನ್ನು ಉದ್ದೀಪನಗೊಳಿಸುವಲ್ಲಿ ವಿಫ‌ಲವಾದಾಗ ಗಂಭೀರ ನೃತ್ಯ ರೂಪಕಗಳು ಸೋಲುತ್ತವೆ. ಗುರುವಿನ ಆಶ್ರಮದ ದೃಶ್ಯ ನಗು ತರಿಸುವಲ್ಲಿ ಯಶಸ್ವಿಯಾಯಿತು. ಬಾಲಸುಬ್ರಹ್ಮಣ್ಯ ಮತ್ತು ಉಷಾ ಜೋಶಿಯವರ ಹಿನ್ನೆಲೆ ಗಾಯನ ಮತ್ತು ಹಿನ್ನೆಲೆ ವಾದ್ಯಗಳು ಭಾವಕ್ಕೆ ಪೂರಕವಾದ ರಾಗ ಸಂಯೋಜನೆಯೊಂದಿಗೆ ಇಂಪು ನೀಡಿತು.ಪ್ರಮುಖ ತಂತ್ರವಾದ ಹಿನ್ನೋಟವನ್ನು ಬಳಸಿಕೊಂಡ ಹಿರಣ್ಯಾಕ್ಷನ ವಧೆಯ ಚಿತ್ರಣದ ದೃಶ್ಯ ಮುದ ನೀಡಿತು.

ಪ್ರಹ್ಲಾದನ ಜನನ ಎಂಬುದು ಹೊಸ ತನದ ಆರಂಭ ಎಂಬುದನ್ನು ಸೂಚ್ಯವಾಗಿ ತೋರಿಸಲು ಬಳಸಿದ ರೂಪಕ ಬೆಳಗುವ ಜ್ಯೋತಿ ಹಿತಮಿತವಾದ ರಂಗ ಪರಿಕರಗಳ ಬಳಕೆ ಸಮಯ ಪೋಲಾಗುವುದನ್ನು ತಪ್ಪಿಸಿತು.

ಶಿವಪ್ರಸಾದ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next