Advertisement

ಭ್ರಷ್ಟ ನರಕಾಸುರರ ನಿರ್ಮೂಲನ ಮಹಿಳೆಯರಿಂದ ಸಾಧ್ಯ: ಪೇಜಾವರಶ್ರೀ

01:58 PM Mar 10, 2017 | Team Udayavani |

ಉಡುಪಿ: ನರಕಾಸುರ ವಧೆಗೆ ಶ್ರೀಕೃಷ್ಣನಿಗೆ ಪ್ರೇರಣೆ ಕೊಟ್ಟದ್ದು ಸತ್ಯಭಾಮೆ. ಈಗ ಭ್ರಷ್ಟ ನರಕಾಸುರರ ನಿರ್ಮೂಲನ ಮಹಿಳೆಯರಿಂದ ಸಾಧ್ಯ ಎಂದು ಪರ್ಯಾಯ ಶ್ರೀಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ತಿಳಿಸಿದರು. 

Advertisement

ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ಘಾಟನೆ ಮಾಡಿ ಆಶೀರ್ವಚನ ನೀಡಿದ ಅವರು ಪತಿಯ ಸುಖ ದುಃಖಗಳಲ್ಲಿ ಸಮಭಾಗಿಗಳಾಗಿ ಆದರ್ಶ ಸಮಾಜವನ್ನು ರೂಪಿಸಬೇಕೆಂದು ಮಹಿಳಾ ಸಮುದಾಯಕ್ಕೆ ಕರೆ ನೀಡಿದರು. 

 ಅಧ್ಯಕ್ಷತೆಯನ್ನು ಹೂಡೆ ಅರೇಬಿಕ್‌ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಖುಲ್ಸಮ… ಅಬೂಬಕ್ಕರ್‌ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಕುಂದಾಪುರದ ಸಹಾಯಕ ಆಯುಕ್ತೆ ಶಿಲ್ಪ$ನಾಗ್‌ ಭಾಗವಹಿಸಿದ್ದರು.  ಒಕ್ಕೂಟದ ಅಧ್ಯಕ್ಷೆ ಶೀಲಾ ಕೆ.ಶೆಟ್ಟಿ ಸ್ವಾಗತಿಸಿ ಪ್ರಸನ್ನ ಭಟ್‌ ವಂದಿಸಿದರು. ಜಿಲ್ಲಾಧಿಕಾರಿ, ಸಹಾಯಕ ಆಯುಕ್ತೆ, ಪ್ರಾಂಶುಪಾಲೆ, ಹಿರಿಯರಾದ ಸರಳಾ ಕಾಂಚನ್‌ ಮತ್ತು ಉತ್ತಮ ಸಂಘಟನೆಯ ಪರವಾಗಿ ಚೇರ್ಕಾಡಿ ಸಮೃದ್ಧಿ ಮಹಿಳಾ ಮಂಡಳಿಯನ್ನು ಸಮ್ಮಾನಿಸಲಾಯಿತು. ಜತೆ ಕಾರ್ಯದರ್ಶಿ ಗೀತಾ ರವಿ, ಉಪಾಧ್ಯಕ್ಷೆ ಸುಶ್ಮಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಯಶೋದಾ ಜೆ. ಶೆಟ್ಟಿ, ಉಪಾಧ್ಯಕ್ಷೆ ಸುಪ್ರಭಾ ಆಚಾರ್ಯ, ಕೋಶಾಧಿಕಾರಿ ಮಮತಾ ಎಸ್‌. ಶೆಟ್ಟಿ, ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ವಸಂತಿ ರಾವ್‌ ಕೊರಡ್ಕಲ…, ಕುಂದಾಪುರ ತಾಲೂಕು ಒಕ್ಕೂಟದ ಅಧ್ಯಕ್ಷೆ ರಾಧಾದಾಸ್‌ ಉಪಸ್ಥಿತರಿದ್ದರು. ವಿವಿಧ ಮಹಿಳಾ ಮಂಡಳಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next