Advertisement

ನಾಗಾಲೋಟ ಶುರು; ಬಂಡಾಯದ ಭಾವುಟ

05:25 AM Jul 21, 2017 | |

ನರಗುಂದ ಭಾಗದವರಾದ ಸಿದ್ದೇಶ್‌ ವಿರಕ್ತಮಠ ಅವರಿಗೆ ನರಗುಂದದಲ್ಲಿ ನಡೆದ ಹೋರಾಟ, ಅಲ್ಲಿನ ರೈತರ ಬಂಡಾಯ ಯಾವತ್ತೂ ಕಾಡುತ್ತಿತ್ತಂತೆ. ಏಕೆಂದರೆ, ಕರ್ನಾಟಕದಲ್ಲಾದ ದೊಡ್ಡ ಬಂಡಾಯಗಳಲ್ಲಿ ನರಗುಂದ ಕೂಡಾ ಒಂದು. ಮಲಪ್ರಭಾ ನೀರಿನ ಫ‌ಲಾನುಭವಿಗಳು ಎಕರೆಗೆ ಎರಡೂವರೆ ಸಾವಿರ ಕಂದಾಯ ಕಟ್ಟಬೇಕೆಂಬ ಆಗಿನ ಸರ್ಕಾರದ ಆದೇಶದ ವಿರುದ್ಧ ಬಂಡೆದ್ದ ರೈತರ ಹೋರಾಟ ಇತಿಹಾಸದಲ್ಲಿ ದೊಡ್ಡ ಸ್ಥಾನ ಪಡೆದಿದೆ.

Advertisement

ಈ ಹೋರಾಟವನ್ನು ಯಾಕೆ ಸಿನಿಮಾ ಮಾಡಬಾರದೆಂದೆನಿಸಿ ಸಿದ್ದೇಶ್‌ ವಿರಕ್ತಮಠ ಅವರು ಕಥೆಯ ಜೊತೆಗೆ ಈಗ ಸಿನಿಮಾ ನಿರ್ಮಾಣ ಕೂಡಾ ಮಾಡುತ್ತಿದ್ದಾರೆ. ಅದು “ನರಗುಂದ ಬಂಡಾಯ’. ಈ ಚಿತ್ರವನ್ನು ನಾಗೇಂದ್ರ ಮಾಗಡಿ ನಿರ್ದೇಶನ ಮಾಡುತ್ತಿದ್ದಾರೆ. “ನಾನು ಕೂಡಾ ಹೋರಾಟದ ನೆಲದಿಂದ ಬಂದವನು. ಹಾಗಾಗಿ, ಆ ಭಾಗದ ಹೋರಾಟ ನನ್ನನ್ನು ಕಾಡುತ್ತಿತ್ತು. ಅದನ್ನು ಸಿನಿಮಾ ರೂಪದಲ್ಲಿ ತರಬೇಕೆಂದು ನಾನು ಆಲೋಚಿಸಿದಾಗ ಒಳ್ಳೆಯ ತಂಡ ಸಿಕ್ಕಿತು. ಸ್ನೇಹಿತರೆಲ್ಲರೂ ಬೆಂಬಲಕ್ಕೆ ನಿಂತಿದ್ದಾರೆ. ಇತಿಹಾಸದಲ್ಲಿ ತನ್ನದೇ ಆದ ಸ್ಥಾನ ಪಡೆದಿರುವ ನರಗುಂದ ಬಂಡಾಯದ ಕುರಿತು ಸಿನಿಮಾ ಮಾಡುವ ನಮ್ಮ ಕನಸು ಈಡೇರುತ್ತಿದೆ’ ಎಂದರು ನಿರ್ಮಾಪಕ ಸಿದ್ದೇಶ್‌.

ಈ ಚಿತ್ರವನ್ನು ನಿರ್ದೇಶಿಸುತ್ತಿರುವ ನಾಗೇಂದ್ರ ಮಾಗಡಿಯವರು ನವಲಗುಂದವರು. ಹಾಗಾಗಿ, ಅವರಿಗೂ ಈ ಹೋರಾಟದ ಬಗ್ಗೆ ಗೊತ್ತಿತ್ತಂತೆ. ಈಗ ಆ ಕಥೆಯನ್ನು ಸಿನಿಮಾ ಮಾಡುತ್ತಿರುವ ಬಗ್ಗೆ ಅವರಿಗೆ ಖುಷಿ ಇದೆ. ಕಥೆ 80ರ ದಶಕದಲ್ಲಿ ನಡೆಯುವುದರಿಂದ ಅದಕ್ಕೆ ತಕ್ಕಂತಹ ಲೊಕೇಶನ್‌ನಲ್ಲೇ ಚಿತ್ರೀಕರ  ಮಾಡುವುದಾಗಿ’ ಹೇಳುತ್ತಾರೆ ನಾಗೇಂದ್ರ. ಸುಮಾರು 45 ದಿನಗಳ ಚಿತ್ರೀಕರಣ ನಡೆಯಲಿದೆಯಂತೆ. ಚಿತ್ರಕ್ಕೆ ಕೇಶವಾದಿತ್ಯ ಸಂಭಾಷಣೆ ಬರೆದಿದ್ದು, ಚಿತ್ರದಲ್ಲಿ ಬರುವ ಪಾತ್ರಗಳು ತುಂಬಾ ಗಂಭೀರ ಹಾಗೂ ಹೋರಾಟದ ಹಿನ್ನೆಲೆ ಹೊಂದಿದ್ದರಿಂದ ಸಂಭಾಷಣೆ ಕೂಡಾ ಅಷ್ಟೇ ಖಡಕ್‌ ಆಗಿರುತ್ತದೆಯಂತೆ.

ಚಿತ್ರದಲ್ಲಿ ರಕ್ಷಿತ್‌ ನಾಯಕರಾಗಿ ನಟಿಸುತ್ತಿದ್ದಾರೆ. ಕಿರುತೆರೆಯಲ್ಲಿ ಬಿಝಿಯಾಗಿದ್ದ ರಕ್ಷಿತ್‌ಗೆ ಸಿನಿಮಾ ಹೀರೋ ಆಗುವ ಕನಸಿತ್ತಂತೆ. ಈ ಸಿನಿಮಾದಲ್ಲಿ ಗಂಭೀರ ಪಾತ್ರ ಸಿಕ್ಕಿದ್ದು, ಚಿತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದಾರಂತೆ. ಮುಖ್ಯವಾಗಿ ಕುದುರೆ ಸವಾರಿ ಕಲಿಯುತ್ತಿದ್ದಾರಂತೆ ರಕ್ಷಿತ್‌. ನಾಯಕಿ ಶುಭಾ ಪೂಂಜಾ ಇಲ್ಲಿ ಖಡಕ್‌ ಹಳ್ಳಿ ಹುಡುಗಿ. ಉತ್ತರ ಕರ್ನಾಟಕ ಭಾಷೆಗೆ ಹೊಂದಿಕೊಂಡಿದ್ದಾಗಿ ಹೇಳುತ್ತಾರೆ ಶುಭಾ.ಚಿತ್ರಕ್ಕೆ ಯಶೋವರ್ಧನ್‌ ಸಂಗೀತ, ಆರ್‌.ಗಿರಿ ಛಾಯಾಗ್ರಹಣವಿದೆ. ಆಗಸ್ಟ್‌ನಲ್ಲಿ ಚಿತ್ರ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next