ನರಗುಂದ: ಇಲ್ಲಿನ ಪುರಸಭೆಯ ನೂತನ ಆಡಳಿತ ಮಂಡಳಿ ಅವಧಿಯಲ್ಲಿ ಪ್ರಸಕ್ತ 2021-22ನೇ ಸಾಲಿನ ಪ್ರಥಮ ಆಯ್ಯವ್ಯಯ ಮಂಡಿಸಲಾಗಿದೆ. ಪುರಸಭೆ ಅಧ್ಯಕ್ಷೆ ಭಾವನಾ ಪಾಟೀಲ ಬಜೆಟ್ ಮಂಡಿಸಿದ್ದಾರೆ.
ಮಂಗಳವಾರ ಪುರಸಭೆ ಸಭಾಂಗಣದಲ್ಲಿ ಸಣ್ಣ ಕೈಗಾರಿಕೆ ಸಚಿವ ಸಿ.ಸಿ. ಪಾಟೀಲ ಉಪಸ್ಥಿತಿಯಲ್ಲಿ ಅಧ್ಯಕ್ಷತೆ ವಹಿಸಿದ್ದ ಭಾವನಾ ಪಾಟೀಲ, ಒಟ್ಟು 19 ಕೋಟಿ 54 ಲಕ್ಷ 36 ಸಾವಿರ ರೂ. ಗಾತ್ರದ ಬಜೆಟ್ ಮಂಡಿಸಿದರು.
ಆದಾಯ ನಿರೀಕ್ಷೆ: ಕಟ್ಟಡದ ಆಸ್ತಿ ತೆರಿಗೆ 1.20 ಕೋಟಿ, ಆಸ್ತಿ ತೆರಿಗೆ ದಂಡ 8 ಲಕ್ಷ, ಅಂಗಡಿ ಮಳಿಗೆಗಳಬಾಡಿಗೆ 10 ಲಕ್ಷ, ಸಾಮಗ್ರಿ ನಿರ್ವಹಣಾ 4.54 ಲಕ್ಷ,ಇತರೇ ಕರಗಳ ಸಂಗ್ರಹಣೆ 3.12 ಲಕ್ಷ, ಅಧಿಕಾರಿ ಮತ್ತು ನೌಕರರ ವೇತನಕ್ಕಾಗಿ 2.50 ಕೋಟಿ, ನೀರಿನದರಗಳ ವಸೂಲಿ 80 ಲಕ್ಷ, ನೀರು ಸರಬರಾಜು ಮತ್ತು ಬೀದಿದೀಪಗಳ ವಿದ್ಯುತ್ ಬಿಲ್ ಪಾವತಿ ಹಾಗೂ ಎಸ್‌ಎಫ್‌ಸಿ ವಿದ್ಯುತ್ ಅನುದಾನ 2.60 ಕೋಟಿ.
ಎಸ್‌ಎಫ್‌ಸಿ ಅಭಿವೃದ್ಧಿ ಅನುದಾನ 1.70 ಕೋಟಿ, 15ನೇ ಹಣಕಾಸು 2.63 ಕೋಟಿ, ಇತರೆ ವಿಶೇಷ ಅನುದಾನ 7.20 ಕೋಟಿ, ಕುಡಿಯುವ ನೀರು ಮತ್ತು ಬರ ಪರಿಹಾರ 25 ಲಕ್ಷ, ಸ್ವತ್ಛ ಭಾರತ 5 ಲಕ್ಷ ಸೇರಿದಂತೆ 23 ಮೂಲಗಳಿಂದ 19,54,36 ಲಕ್ಷ ನಿರೀಕ್ಷಿಸಲಾಗಿದೆ.
19.46 ಕೋಟಿ ವೆಚ್ಚ: ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ಅತ್ಯಧಿಕ 587.11 ಲಕ್ಷ, ಸ್ಮಶಾನಗಳ ಅಭಿವೃದ್ಧಿಗೆ 15 ಲಕ್ಷ, ಹೈಮಾಸ್ಕ್ ಮತ್ತು ವಿದ್ಯುತ್ ದೀಪ ಖರೀದಿಗೆ 18 ಲಕ್ಷ, ಸಾರ್ವಜನಿಕ/ಸಮುದಾಯ ಶೌಚಾಲಯ 20 ಲಕ್ಷ, ವಾಹನ ಮತ್ತು ಯಂತ್ರೋಪಕರಣ ಖರೀದಿಗೆ 48.25 ಲಕ್ಷ,ಕಟ್ಟಡ ನಿರ್ಮಾಣ/ನಿರ್ವಹಣೆಗೆ 2.64 ಕೋಟಿ, ಹೊರಗುತ್ತಿಗೆ ನೈರ್ಮಲಿಕರಣ ನಿರ್ವಹಣೆಗೆ 50 ಲಕ್ಷ, ಬರ ಪರಿಹಾರ ಅನುದಾನ ಹಾಗೂ ಇತರೆ ವ್ಯವಸ್ಥೆಗೆ 50 ಲಕ್ಷ ವಿದ್ಯುತ್ ದೀಪ ಹಾಗೂ ನೀರು ಸರಬರಾಜು ವಿಭಾಗದ ವಿದ್ಯುತ್ ಬಿಲ್‌ಗೆ 2.60 ಕೋಟಿ ಸೇರಿದಂತೆ ಒಟ್ಟು 34 ಯೋಜನೆಗಳಿಗೆ 19,46,22 ಲಕ್ಷಗಳ ಖರ್ಚು, ವೆಚ್ಚ ನಿಗದಿ ಮಾಡಲಾಗಿದೆ.
ಅನುಮೋದನೆ: ಬಜೆಟ್ ಮಂಡನೆಯಲ್ಲಿ 2021-22ನೇ ಸಾಲಿನ ಆಯ್ಯವ್ಯಯ, ಚಾಲ್ತಿ ಸಾಲಿನ ಮಾರುಕಟ್ಟೆ ಮಾರ್ಗಸೂಚಿಯನ್ವಯ ಹೊಸ ಆಸ್ತಿ ತೆರಿಗೆ ಜಾರಿಗೆ 15ನೇ ಹಣಕಾಸು ಯೋಜನೆಸಾಮಾನ್ಯ ಮೂಲ ಅನುದಾನ ಯೋಜನೆಯ ನಿರ್ಬಂಧಿತ ಅನುದಾನ 131.50 ಲಕ್ಷಗಳ ಅನುದಾನದ ಕ್ರಿಯಾಯೋಜನೆಗೆ ಮಂಜೂರಾತಿ, ವಿವಿಧ ಯೋಜನೆಗಳಡಿ ಟೆಂಡರ್‌ಗಳಿಗೆ, ಅಧ್ಯಕ್ಷರ ಅಪ್ಪಣೆ ಮೇರೆಗೆ ಇತರೆ ಸೇರಿ 5 ವಿಷಯಗಳಿಗೆ ಅನುಮೋದನೆ ಪಡೆಯಲಾಯಿತು. ಪುರಸಭೆ ಉಪಾಧ್ಯಕ್ಷ ಪ್ರಶಾಂತ ಜೋಶಿ ಹಾಗೂ ಎಲ್ಲ ಸದಸ್ಯರು, ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.