Advertisement

ಮಲಪ್ರಭೆಗೆ ಬಾಗಿನ ಅರ್ಪಿಸಲು ನಿರ್ಧಾರ

03:28 PM Sep 05, 2019 | Team Udayavani |

ನರಗುಂದ: ಪ್ರಸಕ್ತ ಸಾಲಿನಲ್ಲಿ ಭರ್ತಿಯಾಗಿ ಒಡಲು ತುಂಬಿದ ಮಲಪ್ರಭಾ ನದಿಗೆ ಸವದತ್ತಿ ತಾಲೂಕು ಮುನವಳ್ಳಿ ನವಿಲುತೀರ್ಥ ಜಲಾಶಯದಲ್ಲಿ ಸೆ. 17ರಂದು ಬಾಗಿನ ಅರ್ಪಿಸಲು ನಿರ್ಧರಿಸಲಾಗಿದೆ. ಅಲ್ಲದೇ ಬೆಂಗಳೂರು ಚಲೋ ದಿನ ನಿಗದಿಯನ್ನು ಅಂದೇ ಪ್ರಕಟಿಸಲಾಗುವುದು ಎಂದು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ತಿಳಿಸಿದರು.

Advertisement

ಬುಧವಾರ ಮಲಪ್ರಭಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತ ಮುಖಂಡರ ಸಭೆ ಬಳಿಕ 1511ನೇ ದಿನ ನಿರಂತರ ಸತ್ಯಾಗ್ರಹ ವೇದಿಕೆಯಲ್ಲಿ ಮಾತನಾಡಿದ ಅವರು, ಈ ಹೋರಾಟ ಬೆಂಬಲಿಸಿದ ನಾಡಿನ ಎಲ್ಲ 1300 ಸಂಘಟನೆಗಳ ಕಾರ್ಯಕರ್ತರು, ಮಹದಾಯಿ ಹೋರಾಟಗಾರರು ನಾಡಿನ ಎಲ್ಲ ಮಠಾಧೀಶರ ಸಾನ್ನಿಧ್ಯದಲ್ಲಿ ಬಾಗಿನ ಅರ್ಪಿಸಲಿದ್ದೇವೆ ಎಂದು ಹೇಳಿದರು.

ಬೆಂಗಳೂರು ಚಲೋ ನಿರ್ಧಾರ: ಈ ಹಿಂದೆ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಮಧ್ಯ ಪ್ರವೇಶಿಸಲು ರಾಜ್ಯಪಾಲರಿಗೆ ಒತ್ತಾಯಿಸಲು ಬೆಂಗಳೂರು ಚಲೋ ಮೂಲಕ ರಾಜಭವನ ಎದುರು ಧರಣಿ ನಡೆಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ರಾಜ್ಯದಲ್ಲಿ ನೆರೆ ಹಾವಳಿ ಉದ್ಭವಿಸಿದ ಪರಿಣಾಮ ಇದನ್ನು ಮುಂದೂಡಲಾಗಿತ್ತು. ಹೀಗಾಗಿ ಸೆ. 17ರಂದು ನವಿಲುತೀರ್ಥ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಅಂದೇ ಬೆಂಗಳೂರು ಚಲೋ ನಡೆಸಲು ದಿನ ನಿಗದಿ ಮಾಡಲಾಗುವುದು ಎಂದು ಹೇಳಿದರು.

ಕೇಂದ್ರದ ಕಿವಿ ಹಿಂಡಲಿ: ಮಹದಾಯಿ ಯೋಜನೆ ಅನುಷ್ಠಾನಕ್ಕೆ ಅಗತ್ಯ ಗೆಜೆಟ್ ನೋಟಿಫಿಕೇಶನ್‌ ಹೊರಡಿಸಲು ಕೇಂದ್ರದ ಕಿವಿ ಹಿಂಡಲು ರಾಜ್ಯಪಾಲರನ್ನು ಒತ್ತಾಯಿಸಲಿದ್ದೇವೆ. ರಾಜಭವನ ಎದುರು ಧರಣಿ ನಡೆಸಿ ಕೂಡಲೇ ಗೆಜೆಟ್ ನೋಟಿಫಿಕೇಶನ್‌ ಹೊರಡಿಸಲು ಮಧ್ಯ ಪ್ರವೇಶಿಸಿ, ಇಲ್ಲವಾದಲ್ಲಿ ನಮಗೆ ವಿಷ ಕೊಡಿ ಎಂದು ರಾಜ್ಯಪಾಲರನ್ನು ಆಗ್ರಹಿಸಲಾಗುವುದು ಎಂದು ಹೇಳಿದ ವೀರೇಶ ಸೊಬರದಮಠ ಸ್ವಾಮೀಜಿ, ಅಚ್ಚುಕಟ್ಟು ಪ್ರದೇಶ ರೈತರಿಗೆ ನೀರು ಕೊಡಿಸಲು ನಾವು ಪ್ರಾಣ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದು ವೇದಿಕೆಯಲ್ಲಿ ಘೋಷಿಸಿದರು.

ಸಂತ್ರಸ್ತರಿಗೆ ಪರಿಹಾರ ನೀಡಿ: ನೆರೆಹಾವಳಿ ತೀರಿ ವಾರಗಳು ಗತಿಸುತ್ತ ಬಂದರೂ ಇದುವರೆಗೆ ನೆರೆ ಸಂತ್ರಸ್ತರಿಗೆ ಅಗತ್ಯ ಪರಿಹಾರ ದೊರಕಿಲ್ಲ. ಮನೆ ಕಳೆದುಕೊಂಡವರಿಗೆ ಮನೆ ಮತ್ತು ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸಲು ಸರಕಾರ ತ್ವರಿತ ಗತಿಯಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಸೊಬರದಮಠ ಸ್ವಾಮೀಜಿ ಒತ್ತಾಯಿಸಿದರು.

Advertisement

ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ, ಉಪಾಧ್ಯಕ್ಷ ರಮೇಶ ನಾಯ್ಕರ, ಕಾರ್ಯದರ್ಶಿ ಫಕೀರಪ್ಪ ಜೋಗಣ್ಣವರ, ಎಫ್‌.ವೈ. ದ್ಯಾಮನಗೌಡ್ರ, ಮಲ್ಲಿಕಾರ್ಜುನ ಆಲೇಕಾರ, ಚಿದಾನಂದ ಹೆಬ್ಬಳ್ಳಿ, ಸೋಮು ರೈನಾಪುರ, ಆನಂದ ದಾನಪ್ಪನವರ, ಗಂಗಾಧರ ಧರಿಯಣ್ಣವರ, ಮಂಜುನಾಥ ಜೈನರ, ಶಿವಪ್ಪ ಹೊರಕೇರಿ, ಪ್ರಸಾದ ವೀರಪ್ಪಯ್ಯನಮಠ, ಉಮೇಶ ದಂಡಿನ, ರುದ್ರಪ್ಪ ಕುಂದಗೋಳ, ಕಲ್ಲಪ್ಪ ನವಲಗುಂದ, ಎಸ್‌.ಎಂ. ಪಾಟೀಲ, ಪಿ.ಬಿ. ದುಂಡಿಗೌಡ್ರ, ಯಲ್ಲಪ್ಪ ಗುಡದರಿ, ಜಗನ್ನಾಥ ಮುಧೋಳೆ, ಹನಮಂತ ಸರನಾಯ್ಕರ, ವಾಸು ಚವ್ಹಾಣ, ಅರ್ಜುನ ಮಾನೆ, ಚನ್ನಪ್ಪಗೌಡ ಪಾಟೀಲ, ಸುಭಾಷ ಗಿರೆಣ್ಣವರ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next