ಕೋಲ್ಕತಾ: ನಾರದ ಸ್ಟಿಂಗ್ ಆಪರೇಶನ್ ಪ್ರಕರಣದಲ್ಲಿ ಆರೋಪಿಗಳಾಗಿರುವ ಪಶ್ಚಿಮಬಂಗಾಳದ ನಾಲ್ವರು ಮುಖಂಡರುಗಳ ಜಾಮೀನು ಅರ್ಜಿಯ ವಿಚಾರಣೆಯನ್ನು ಕೋಲ್ಕತಾ ಹೈಕೋರ್ಟ್ ಶುಕ್ರವಾರ(ಮೇ 28) 12ಗಂಟೆಗೆ ಮುಂದೂಡಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಯೋಗೇಶ್ವರ್ ಒಬ್ಬ 420, ಆತನನ್ನು ಸಂಪುಟದಿಂದ ವಜಾ ಮಾಡಿ ಬಂಧಿಸಬೇಕು: ರೇಣುಕಾಚಾರ್ಯ ವಾಗ್ದಾಳಿ
ನಾರದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ತೃಣಮೂಲ ಕಾಂಗ್ರೆಸ್ ನ ಇಬ್ಬರು ಸಚಿವರು, ಶಾಸಕ ಹಾಗೂ ಮಾಜಿ ಮೇಯರ್ ಅನ್ನು ಗೃಹ ಬಂಧನದಲ್ಲಿ ಇರಿಸುವಂತೆ ಮೇ 21ರಂದು ಹೈಕೋರ್ಟ್ ಆದೇಶ ನೀಡಿತ್ತು.
ಟಿಎಂಸಿ ನಾಲ್ವರು ಮುಖಂಡರಿಗೆ ಜಾಮೀನು ನೀಡಿರುವ ಪ್ರಕರಣಕ್ಕೆ ತಡೆ ನೀಡಬೇಕೆಂಬ ಸಿಬಿಐ ಮೇಲ್ಮನವಿಯನ್ನು ಐವರು ನ್ಯಾಯಾಧೀಶರನ್ನೊಳಗೊಂಡ ವಿಸ್ತೃತ ಪೀಠಕ್ಕೆ ವರ್ಗಾಯಿಸಿ ಸಿಜೆಐ ಜಸ್ಟೀಸ್ ರಾಜೇಶ್ ಬಿಂದಾಲ್ ಆದೇಶ ನೀಡಿದ್ದರು.
ತೃಣಮೂಲ ಕಾಂಗ್ರೆಸ್ ನ ನಾಲ್ವರು ಮುಖಂಡರನ್ನು ಗೃಹಬಂಧನದಲ್ಲಿ ಇರಿಸಬೇಕೆಂಬ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ ಪ್ರಕರಣ ಈಗಾಗಲೇ ಹೈಕೋರ್ಟ್ ವಿಸ್ತೃತ ಪೀಠದಲ್ಲಿರುವುದರಿಂದ ಅರ್ಜಿಯನ್ನು ವಾಪಸ್ ಪಡೆದು, ಹೈಕೋರ್ಟ್ ನಲ್ಲಿಯೇ ತಮ್ಮ ಆಕ್ಷೇಪ ಎತ್ತುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು.