Advertisement

ಬಾಳೆಹಣ್ಣಿನ ನಾರಿನಿಂದ ನ್ಯಾಪ್ಕಿನ್‌

12:59 AM Aug 21, 2019 | mahesh |

ನವದೆಹಲಿ: ಐಐಟಿ ದೆಹಲಿಯ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುವ ‘ಸ್ಯಾನ್ಫೆ’ ಸ್ಟಾರ್ಟ್‌ಅಪ್‌ ಕಂಪನಿಯೊಂದು, ಬಾಳೆಹಣ್ಣಿನಲ್ಲಿರುವ ನಾರಿನ (ಫೈಬರ್‌) ಅಂಶದಿಂದ ಸ್ಯಾನಿಟರ್‌ ನ್ಯಾಪ್ಕಿನ್‌ಗಳನ್ನು ತಯಾರಿಸಿರುವುದಾಗಿ ಹೇಳಿದೆ. ಇದು ಮರುಬಳಕೆಯಾಗುವ ನ್ಯಾಪ್ಕಿನ್‌ಗಳಾಗಿದ್ದು, ಕನಿಷ್ಠ 120 ಬಾರಿಯಾದರೂ ಅವನ್ನು ಬಳಸಬಹುದು ಎಂದು ಕಂಪನಿ ಹೇಳಿದೆ.

Advertisement

ಈ ಮಾದರಿಯ ಎರಡು ನ್ಯಾಪ್ಕಿನ್‌ಗಳ ಜೋಡಿಗೆ 199 ರೂ. ಬೆಲೆ ಇರಲಿದ್ದು, ಈ ತಂತ್ರಜ್ಞಾನದ ಮೇಲಿನ ಹಕ್ಕುಗಳಿಗಾಗಿ ಸ್ಯಾನ್ಫೆ ಸಂಸ್ಥೆ ಪೇಟೆಂಟ್ ಅರ್ಜಿಯನ್ನೂ ಸಲ್ಲಿಸಿದೆ.

ಈ ಕುರಿತಂತೆ ಮಾತನಾಡಿದ ಸ್ಟಾರ್ಟಪ್‌ನ ಸಹ-ಸಂಸ್ಥಾಪಕ ಅರ್ಚಿತ್‌ ಅಗರ್ವಾಲ್, ”ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ನ್ಯಾಪ್ಕಿನ್‌ಗಳು, ಪ್ಲಾಸ್ಟಿಕ್‌ ಮತ್ತಿತರ ಕೃತಕ ಸಾಮಗ್ರಿಗಳಿಂದ ತಯಾರಿಸ್ಪಟ್ಟಿರುತ್ತವೆ. ಇವು ಕೊಳೆಯಲು 50ರಿಂದ 60 ವರ್ಷ ಬೇಕಾಗಬಹುದು. ಅವುಗಳ ಸೂಕ್ತ ನಿರ್ವಹಣಾ ವ್ಯವಸ್ಥೆ ಇಲ್ಲದಿರುವುದರಿಂದ ಪರಿಸರಕ್ಕೂ ಹಾನಿ. ಹಾಗಾಗಿ, ದೆಹಲಿ ಐಐಟಿ ಪ್ರಾಧ್ಯಾಪಕರ ಸಲಹೆಯೊಂದಿಗೆ ಪರಿಸರ ಸ್ನೇಹಿ ನ್ಯಾಪ್ಕಿನ್‌ ತಯಾರಿಸಿದ್ದೇವೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next