Advertisement

ಬ್ರಿಸ್ಬೇನ್‌ ಇಂಟರ್‌ನ್ಯಾಶನಲ್‌ ಸೆಮಿಗೆ ಒಸಾಕಾ, ನಿಶಿಕೊರಿ

12:30 AM Jan 04, 2019 | |

ಬ್ರಿಸ್ಬೇನ್‌: ಯುಎಸ್‌ ಓಪನ್‌ ಚಾಂಪಿಯನ್‌ ಜಪಾನಿನ ನವೊಮಿ ಒಸಾಕಾ “ಬ್ರಿಸ್ಬೇನ್‌ ಇಂಟರ್‌ನ್ಯಾಶನಲ್‌’ ಕೂಟದ ಸೆಮಿ ಫೈನಲ್‌ ಪ್ರವೇಶಿಸಿದ್ದಾರೆ. 

Advertisement

ಪುರುಷರ ವಿಭಾಗದಿಂದ ಜಪಾನಿನ ಕೀ ನಿಶಿಕೊರಿ ಕೂಡ ಉಪಾಂತ್ಯ ತಲುಪಿದ್ದಾರೆ.

ಗುರುವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಒಸಾಕಾ ಲಾತ್ವಿಯಾದ ಅನಸ್ತಾಸಿಜಾ ಸೆವತ್ಸೋವಾ ಅವರನ್ನು 3-6, 6-0, 6-4 ಸೆಟ್‌ಗಳಿಂದ ಸೋಲಿಸಿದರು. ಮೊದಲ ಸೆಟ್‌ನಲ್ಲಿ ಮುಗ್ಗರಿಸಿದರೂ ಬಳಿಕ ಹಿಡಿತ ಸಾಧಿಸುವಲ್ಲಿ ಒಸಾಕಾ ಯಶಸ್ವಿಯಾದರು.

ಪುರುಷರ ಸಿಂಗಲ್ಸ್‌ನಲ್ಲಿ ಕೀ ನಿಶಿಕೊರಿ ಬಲ್ಗೇರಿಯಾದ ಗ್ರಿಗರ್‌ ಡಿಮಿಟ್ರೋವ್‌ ಅವರನ್ನು ಭಾರೀ ಹೋರಾಟದ ಬಳಿಕ 7-5, 7-5 ಅಂತರದಿಂದ ಮಣಿಸಿದರು. ರಫೆಲ್‌ ನಡಾಲ್‌ ಬದಲು ಅವಕಾಶ ಪಡೆದ ಟಾರೊ ಡೇನಿಯಲ್‌ ಸ್ಪೇನಿನ ಜೋ ವಿಲ್‌ಫ್ರೆಡ್‌ ಸೋಂಗ ಅವರಿಗೆ ಶರಣಾದರು.

Advertisement

Udayavani is now on Telegram. Click here to join our channel and stay updated with the latest news.

Next