Advertisement

ಯುಎಸ್‌ ಓಪನ್‌ ಟೆನಿಸ್‌: ಜೊಕೋ, ಒಸಾಕಾಗೆ ಅಗ್ರ ಶ್ರೇಯಾಂಕ

01:54 AM Aug 23, 2019 | Team Udayavani |

ನ್ಯೂಯಾರ್ಕ್‌: ವಿಶ್ವದ ನಂಬರ್‌ ವನ್‌ ಟೆನಿಸಿಗರಾದ ನೊವಾಕ್‌ ಜೊಕೋವಿಕ್‌ ಮತ್ತು ನವೋಮಿ ಒಸಾಕಾ ಅವರಿಗೆ ಯುಎಸ್‌ ಓಪನ್‌ ಚಾಂಪಿಯನ್‌ಶಿಪ್‌ನಲ್ಲಿ ಅಗ್ರ ಶ್ರೇಯಾಂಕ ಲಭಿಸಿದೆ. ಇವರಿಬ್ಬರೂ ಈ ಕೂಟದ ಹಾಲಿ ಚಾಂಪಿಯನ್‌ ಕೂಡ ಆಗಿದ್ದು, ಇವರಲ್ಲಿ ಜೊಕೋ 17ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.

Advertisement

ಸ್ಪೇನಿನ ರಫೆಲ್ ನಡಾಲ್ ಅವರಿಗೆ 2ನೇ ಶ್ರೇಯಾಂಕ, 21ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ಹಾದಿಯಲ್ಲಿರುವ ರೋಜರ್‌ ಫೆಡರರ್‌ಗೆ 3ನೇ ಶ್ರೇಯಾಂಕ ಲಭಿಸಿದೆ. ಡೊಮಿನಿಕ್‌ ಥೀಮ್‌, ಡ್ಯಾನಿಲ್ ಮೆಡ್ವಡೇವ್‌, ಅಲೆಕ್ಸಾಂಡರ್‌ ಜ್ವೆರೇವ್‌ ಕ್ರಮವಾಗಿ 4ರಿಂದ 6ರ ವರೆಗಿನ ಶ್ರೇಯಾಂಕ ಪಡೆದಿದ್ದಾರೆ.

ಸೆರೆನಾ ವಿಲಿಯಮ್ಸ್‌ ನಂ.8
ವನಿತಾ ಸಿಂಗಲ್ಸ್‌ನಲ್ಲಿ ಒಸಾಕಾಗೆ ಅಗ್ರ ಶ್ರೇಯಾಂಕ ಸಿಕ್ಕಿದೆ. ಕಳೆದ ವರ್ಷದ ಫೈನಲ್‌ ನಲ್ಲಿ ಈ ಜಪಾನಿ ಆಟಗಾರ್ತಿಗೆ ಶರಣಾದ ಸೆರೆನಾ ವಿಲಿಯಮ್ಸ್‌ ಗೆ ದೊರಕಿದ್ದು 8ನೇ ಶ್ರೇಯಾಂಕ. ಕೆಲವೇ ದಿನಗಳ ಕಾಲ ವಿಶ್ವದ ನಂ.1 ಸ್ಥಾನ ಅಲಂಕರಿಸಿದ ಆ್ಯಶ್ಲಿ ಬಾರ್ಟಿಗೆ 2ನೇ, ಮಾಜಿ ನಂ.1 ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾಗೆ 3ನೇ ಹಾಗೂ ವಿಂಬಲ್ಡನ್‌ ಚಾಂಪಿಯನ್‌ ಸಿಮೋನಾ ಹಾಲೆಪ್‌ಗೆ 4ನೇ ಶ್ರೇಯಾಂಕ ಲಭಿಸಿದೆ.

ವರ್ಷದ ಕೊನೆಯ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿ ಆಗಿರುವ ಯುಎಸ್‌ ಓಪನ್‌ ಆ. 26ರಿಂದ ಸೆ. 8ರ ತನಕ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next