Advertisement

ದಕ್ಷಿಣಕಾಶಿ ನಂಜನಗೂಡಿನಲ್ಲಿ ಜಾಗರಣೆ

12:20 PM Feb 26, 2017 | Team Udayavani |

ನಂಜನಗೂಡು: ದಕ್ಷಿಣಕಾಶಿಯ ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಶಿವರಾತ್ರಿ ಪ್ರಯುಕ್ತ ರಾತ್ರಿಯೀಡಿ ಜಾಗರಣೆ ನಡೆಸಲಾಯಿತು. ಶುಕ್ರವಾರ ಬೆಳಗಿನ ಜಾವದಿಂದ ಹಿಡಿದು ಶ‌ನಿವಾರ ಸೂರ್ಯೋದಯದ ವರೆಗೂ ಭಕ್ತಾದಿಗಳು ಸಾಲುಗಟ್ಟಿ ನಿಂತು ನಂಜುಂಡೇಶ್ವರನ ದರ್ಶನ ಪಡೆದು ಪುನೀತರಾದರು.

Advertisement

ಜಾಗರಣೆಗಾಗಿ ಶ್ರೀಕಂಠೇಶ್ವರ ದೇವಾಲಯಕ್ಕೆ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ಆಗಮಿ ಸಿದ್ದರು. ಈ ವೇಳೆ ಭರತ ನಾಟ್ಯ, ಭಕ್ತಿಗೀತೆ, ಹರಿಕಥೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಕ್ತರಿಗೆ ರಾತ್ರಿ ಫ‌ಲಹಾರದ ವ್ಯವಸ್ಥೆ ಮಾಡಲಾಗಿತ್ತು.

ನಂಜನಗೂಡಿನಲ್ಲಿ ಮಹಾಶಿವರಾತ್ರಿ ಅಂಗವಾಗಿ ಚಿಕ್ಕಯ್ಯನ ಛತ್ರದ ಶ್ರೀಪ್ರಸನ್ನ ನಂಜುಂಡೇಶ್ವರ ದೇವಸ್ಥಾನ, ಮಹದೇಶ್ವರ ಬಡಾವಣೆಯ ಮಲೆಮಹದೇಶ್ವರಸ್ವಾಮಿ ದೇವಸ್ಥಾನ, ಕಪಿಲಾನದಿ ತೀರದ ಲಿಂಗಾಭಟ್ಟರ ಶ್ರೀ ಕಾಶಿವಿಶ್ವೇಶ್ವರಸ್ವಾಮಿ ದೇವಸ್ಥಾನ, ಗೌರಿಘಟದ ಬೀದಿಯಲ್ಲಿರುವ ಶ್ರೀ ಕಪಿಲಾ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ, ದೇವೀರಮ್ಮನಹಳ್ಳಿಯ ಶ್ರೀಶರಣ ಸಂಗಮ ಮಂಟಪದಲ್ಲಿ ಭಕ್ತರಿಗಾಗಿ ಪ್ರಸಾದ ಹಾಗೂ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next