ಸಸಿಹಿತ್ಲು : ಐಕ್ಯೆತೆಯಿಂದ ನಂದಿನಿ ನದಿ ಉತ್ಸವವು ರಾಷ್ಟ್ರೀಯ ವಿಚಾರಧಾರೆಯನ್ನು ಪ್ರತಿಬಿಂಬಿಸುವ ಮೂಲಕ ನದಿಯನ್ನು ಪೂಜ್ಯ ಭಾವನೆಯಿಂದ ನೋಡುವ ಪರಂಪರೆಯನ್ನು ಕಾಣುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ, ಇದನ್ನು ಮುಂದುವರಿಯಬೇಕು, ಕರಾವಳಿಯಲ್ಲಿನ ಪ್ರವಾಸೋದ್ಯಮದ ಅವಕಾಶವನ್ನು ಮುಕ್ತವಾಗಿ ತೆರೆದಿದೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ. ಹೇಳಿದರು.
ಸಸಿಹಿತ್ಲುವಿನ ನಂದಿನಿ ನದಿಯ ತಟದಲ್ಲಿ ಎರಡು ದಿನಗಳಲ್ಲಿ ನಡೆದ ನಂದಿನಿ ನದಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಸಸಿಹಿತ್ಲುವಿನ ಶ್ರೀ ಆಂಜನೇಯ ದೇವಸ್ಥಾನ ಹಾಗೂ ವ್ಯಾಯಾಮ ಶಾಲೆಯ ವಿಶೇಷ ಸಂಯೋಜನೆಯಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ಯುವಜನ ಸೇವಾ ಕ್ರೀಡಾ ಇಲಾಖೆಯೊಂದಿಗೆ ರಾಜ್ಯ ಹಾಗೂ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಸಹಕಾರದಲ್ಲಿ ಸಂಯೋಜಿಸಲಾಗಿತ್ತು.
ಉದ್ಯಮಿಗಳಾದ ಮಹಮ್ಮದ್ ಆರೀಫ್, ರಿಯಾಜ್ ಬಾವ, ಸಂದೀಪ್ ಎಸ್. ಡೇವಿಡ್, ಗಿಲ್ಬರ್ಟ್ ಡಿಸೋಜಾ, ನಿಶಾಂತ್ ಶೇಟ್, ಬಿರುವೆರ್ ಕುಡ್ಲದ ಅಧ್ಯಕ್ಷ ಉದಯ ಪೂಜಾರಿ, ದ.ಕ.ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಜಯದೇವಪ್ಪ, ಉದ್ಯಮಿಗಳಾದ ಪ್ರಸಾದ್ ಶೆಟ್ಟಿ, ಹಳೆಯಂಗಡಿ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ಅಶೋಕ್ ಬಂಗೇರ, ಮುಂಬ ಸಮಿತಿಯ ಸಂಚಾಲಕರು ಅನಿಲ್‌ಕುಮಾರ್ ಸಾಲ್ಯಾನ್, ಗೌರವಾಧ್ಯಕ್ಷ ವಿಠಲ ಬಂಗೇರ, ಉಪಾಧ್ಯಕ್ಷ ಸಂತೋಷ್‌ಕುಮಾರ್, ಮಾರ್ಗದರ್ಶಕ ಯತೀಶ್ ಬಕಂಪಾಡಿ, ಸಂಚಾಲಕ ನಿತಿನ್ ಸುವರ್ಣ ಉಪಸ್ಥಿತರಿದ್ದರು.
ನಂದಿನಿ ಆರತಿಯನ್ನು ಶ್ರೀ ಆಂಜನೇಯ ವ್ಯಾಯಾಮ ಶಾಲೆಯ ಸಂದೇಶ್ ಅವರು ನೆರವೇರಿಸಿದರು.
ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ನಂದಿನಿ ನದಿ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ವಿನೋದ್‌ಕುಮಾರ್ ಸಸಿಹಿತ್ಲು ಸ್ವಾಗತಿಸಿದರು. ಅನಿಲ್ ಕುಂದರ್ ವಂದಿಸಿದರು, ಮಂಜುಳಾ ಶೆಟ್ಟಿ ಹಾಗೂ ಉಮೇಶ್ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.