Advertisement

20ರವರೆಗೆ ನಂದಿನಿ ಸಿಹಿ ಉತ್ಸವ

02:44 PM Jul 08, 2018 | Team Udayavani |

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟವು (ಕೆಎಂಎಫ್) ತನ್ನ 20 ವಿವಿಧ ಸಿಹಿ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ “ನಂದಿನಿ ಸಿಹಿ ಉತ್ಸವ’ ಹಮ್ಮಿಕೊಂಡಿದೆ. ಈ ಉತ್ಸವದಲ್ಲಿ ಎಲ್ಲ ನಂದಿನಿ ಸಿಹಿ ಉತ್ಪನ್ನಗಳ ಮೇಲೆ ಶೇ.10 ರಿಯಾಯಿತಿಯನ್ನು ಕೆಎಂಎಫ್ ನೀಡುತ್ತಿದೆ.

Advertisement

ಹಾಲಿನ ಜತೆ 64 ಬಗೆಯ ಹಾಲು ಉತ್ಪನ್ನಗಳನ್ನು ಸಿದ್ಧಪಡಿಸುತ್ತಿರುವ ಕೆಎಂಎಫ್, ನಂದಿನಿ ಬ್ರಾಂಡ್‌ ಅಡಿಯಲ್ಲಿ ಮಾರಾಟ ಮಾಡುತ್ತಿದೆ. ಅವುಗಳಲ್ಲಿ 20ಕ್ಕೂ ಹೆಚ್ಚು ಸಿಹಿ ಉತ್ಪನ್ನಗಳಿವೆ. ಆದರೆ, ನಂದಿನಿ ಮೈಸೂರು ಪಾಕ್‌, ಪೇಡಾ ಹೊರತುಪಡಿಸಿದರೆ ಕೆಎಂಎಫ್ ಉತ್ಪಾದಿಸುವ ಬೇರಾವುದೇ ನಂದಿನಿ ಸಿಹಿ ಪದಾರ್ಥಗಳ ಪರಿಚಯ ಗ್ರಾಹಕರಿಗೆ ಇಲ್ಲ. ಹೀಗಾಗಿ ಜುಲೈ 6ರಿಂದ 20ವರೆಗೂ 15 ದಿನಗಳ ನಂದಿನಿ ಸಿಹಿ ಉತ್ಸವ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದೆ.

ಉತ್ಸವದ ಅಂಗವಾಗಿ ಬಾದಾಮ್‌ ಬರ್ಫಿ, ಕ್ಯಾಷ್ಯು ಬರ್ಫಿ, ಕೇಸರ್‌ ಪೇಡಾ, ಚಾಕೊಲೇಟ್‌ ಬರ್ಫಿ, ಜಾಮೂನ್‌, ರಸಗುಲ್ಲಾ ಸೇರಿದಂತೆ ಎಲ್ಲ ವಿಧದ ನಂದಿನಿ ಸಿಹಿ ಉತ್ಪನ್ನಗಳ ಮೇಲೆ ಶೇ.10ರಷ್ಟು ರಿಯಾಯಿತಿ ನೀಡುತ್ತಿದೆ. ರಾಜ್ಯದ ಎಲ್ಲ ನಂದಿನಿ ಮಳಿಗೆಗಳಲ್ಲಿ ಈ ಸಿಹಿ ಉತ್ಸವ ನಡೆಯುತ್ತಿದ್ದು, ಗ್ರಾಹಕರು ರಿಯಾಯಿತಿ ಸೌಲಭ್ಯ ಪಡೆಯಬಹುದು ಎಂದು ಕೆಎಂಎಫ್ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next