Advertisement

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

01:23 AM Sep 21, 2024 | Team Udayavani |

ಬೆಂಗಳೂರು: ತಿರುಪತಿ ದೇಗುಲದಲ್ಲಿ ಲಡ್ಡು ತಯಾರಿಗೆ ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿದೆ ಎಂಬ ವರದಿ ಭಾರೀ ವಿವಾದಕ್ಕೆ ಕಾರಣ ವಾಗಿರು ವಂತೆಯೇ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೊಳಪಡುವ ದೇವಾಲಯಗಳಲ್ಲಿ ಸೇವೆಗಳು ಹಾಗೂ ಪ್ರಸಾದ ತಯಾರಿಕೆಗೆ ಶುದ್ಧ ನಂದಿನಿ ತುಪ್ಪವನ್ನು ಮಾತ್ರ ಬಳಸುವಂತೆ ಸರಕಾರ ಸೂಚಿಸಿದೆ.

Advertisement

ಈ ಸಂಬಂಧ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಇದರ ಜತೆಗೆ ದೇವಾಲಯಗಳಲ್ಲಿ ಸಿದ್ಧಪಡಿಸುವ
ಪ್ರಸಾದಗಳಲ್ಲಿ ಗುಣಮಟ್ಟ ಕಾಯ್ದು ಕೊಳ್ಳುವಂತೆ ಇಲಾಖೆಯ ಹಿರಿಯ ಅಧಿಕಾರಿಗಳು, ಎಲ್ಲ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಅಧಿಸೂಚಿತ ದೇವಾಲಯಗಳಲ್ಲಿ ಸೇವೆಗಳಿಗೆ, ದೀಪಗಳಿಗೆ ಮತ್ತು ಎಲ್ಲ ವಿಧದ ಪ್ರಸಾದ ತಯಾರಿಕೆಗೆ ಹಾಗೂ ದಾಸೋಹ ಭವನದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಮಾತ್ರ ಬಳಸುವಂತೆ ಸೂಚಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next