Advertisement

Nandikur ಪರಿಸರ ಮಾಲಿನ್ಯ?ಪರಿಸರ ಅಧಿಕಾರಿಗಳಿಂದ ಪರಿಶೀಲನೆ: ನೀರಿನ ಸ್ಯಾಂಪಲ್‌ ಸಂಗ್ರಹ

01:35 AM Jul 02, 2024 | Team Udayavani |

ಪಡುಬಿದ್ರಿ: ನಂದಿಕೂರು ವಿಶೇಷ ಆರ್ಥಿಕ ವಲಯ ಬಳಿ ಸ್ಥಾಪನೆಯಾಗಿರುವ ಎಂ 11 ಬಯೋ ಡೀಸೆಲ್‌ ತಾಳೆಎಣ್ಣೆ ತಯಾರಿ ಘಟಕದಿಂದ ಹೊರ ಸೂಸುವ ದುರ್ವಾಸನೆಯು ಪರಿಸರದ ಜನತೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ದೂರಿನ ಹಿನ್ನೆಲೆಯಲ್ಲಿ ಪರಿಸರ ಅಧಿಕಾರಿಗಳು ಸೋಮವಾರ ಘಟಕದ ಸುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Advertisement

ಘಟಕದಿಂದ ಸುತ್ತಮುತ್ತಲಿನ 3 ಕಿ. ಮೀ. ವ್ಯಾಪ್ತಿಯಲ್ಲಿ ಜಿಡ್ಡು ವಾಸನೆ ಹರಡುತ್ತಿದ್ದು, ಇದರಿಂದಾಗಿ ಪರಿಸರದ ಮನೆಗಳಲ್ಲಿರುವ ಮತ್ತು ಶಾಲಾ ಮಕ್ಕಳು ವಾಕರಿಕೆಯೊಂದಿಗೆ ಉಸಿರಾಟದ ತೊಂದರೆ ಅನುಭವಿಸುವಂತಾಗಿದೆ. ಸಮಸ್ಯೆ ಬಗ್ಗೆ ತಾಲೂಕು ಆಡಳಿತ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿತ್ತು.

ಸಮಸ್ಯೆಗೊಳಗಾದ ಕಂಪೆನಿಯ ಸುತ್ತಮುತ್ತಲಿನ ಮನೆಗಳಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪಪರಿಸರಾಧಿಕಾರಿ ಅಮೃತಾ, ತಾಲೂಕು ಆರೋಗ್ಯಾಧಿಕಾರಿ ವಾಸುದೇವ ರಾವ್‌, ಹಿರಿಯ ಆರೋಗ್ಯಾಧಿ ಕಾರಿ ಬಸವರಾಜ್‌, ಡಾ| ಸುಬ್ರಹ್ಮಣ್ಯ ರಾವ್‌ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದರು. ಈ ಸಂದರ್ಭ ಸ್ಥಳೀಯರಾದ ಅಮಣಿ, ಶಂಕರ ರಾವ್‌, ಅಂಗನವಾಡಿ ಕಾರ್ಯಕರ್ತೆ ಗೀತಾ, ರಾಮ ಮಂದರ ಬಳಿಯ ನಿವಾಸಿಗಳೊಂದಿಗೆ ಸಮಸ್ಯೆ ಬಗ್ಗೆ ಮಾಹಿತಿ ಪಡೆದರು.

ಉಪ ಪರಿಸರಾಧಿಕಾರಿ ಅಮೃತಾ ಮಾಹಿತಿ ನೀಡಿ, ಇಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ದ್ದೇವೆ. ಸ್ಥಳೀಯರ ದೂರುಗಳನ್ನೂ ಆಲಿಸಿದ್ದೇವೆ. ಈ ಬಗ್ಗೆ ವರದಿಯನ್ನು ಮೇಲಾಧಿಕಾರಿಗೆ ಮಾಹಿತಿ ನೀಡ ಲಾಗುವುದು. ಶಂಕರ ರಾವ್‌ ಮನೆಯ ಕೊಳವೆ ಬಾವಿಯ ನೀರನ್ನು ಸಂಗ್ರಹಿಸಲಾಗಿದ್ದು ಇದನ್ನೂ ಪರೀಕ್ಷೆ ನಡೆಸಲಾಗುವುದು ಎಂದರು.

ವಿದ್ಯಾರ್ಥಿನಿ ಅಸ್ವಸ್ಥ ?
ಒಂದು ವಾರದಿಂದ ಪರಿಸರದಲ್ಲಿ ದುರ್ವಾಸನೆ ಬೀರು ತ್ತಿದ್ದು, ಇದರಿಂದಾಗಿ ಶಾಲಾ ವಿದ್ಯಾರ್ಥಿ ಯೊಬ್ಬಳು ಅನಾರೋಗ್ಯಕ್ಕೆ ತುತ್ತಾಗಿರುವು ದಾಗಿಯೂ ಸ್ಥಳೀಯರು ತಿಳಿಸಿದ್ದಾರೆ. ಘಟಕದಿಂದ ಪರಿಸರದಲ್ಲಾಗುತ್ತಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕವಾಗಿ ಸಾಕಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಅವರು ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಜೂ. 18ರಂದು ಘಟಕಕ್ಕೆ ಭೇಟಿ ನೀಡಿದ್ದು, 15 ದಿನಗಳೊಳಗೆ ಸಮಸ್ಯೆ ಪರಿಹರಿಸು ವಂತೆ ತಾಕೀತು ಮಾಡಿ ದ್ದರು. ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ನೇತೃತ್ವದ ಕಾಂಗ್ರೆಸ್‌ ನಿಯೋಗ ಕೂಡ ಭೇಟಿ ನೀಡಿತ್ತು. ಆದರೂ ಈಗ ಸಮಸ್ಯೆ ಮತ್ತೆ ಉಲ್ಬಣಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next