Advertisement

ನಂದಳಿಕೆ ಹೆಗ್ಡೆಯವರ ಮರದ ಬೊಂಬೆಗಳಿಗೆ ಬಣ್ಣ  

01:00 AM Mar 21, 2019 | Harsha Rao |

ಬೆಳ್ಮಣ್‌: ಐತಿಹಾಸಿಕ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ  ಮಾ. 21 ಸಿರಿಜಾತ್ರಾ ವೈಭವ. ಅದರಂತೆ ಶಾ.ಶ. 1450ರಲ್ಲಿ ನಂದಳಿಕೆ ಚಾವಡಿಯಲ್ಲಿ ಅರಸರಾಗಿ ಆಳ್ವಿಕೆ ನಡೆಸಿದ್ದ  ಹೂವಯ್ಯ ಹೆಗ್ಡೆ, ಮಂಜಯ್ಯ ಹೆಗ್ಡೆ, 2ನೇ ಮಂಜಯ್ಯ ಹೆಗ್ಡೆ ಹಾಗೂ ಹೆಗ್ಡೆಯವರ ಮಂತ್ರಿಗಳು, ಅಂಗರಕ್ಷಕರು, ದಾಸಿಯರು ಹಾಗೂ ನರ್ತಕಿಯರ ಸಹಿತ ಒಟ್ಟಾರೆ 21 ಮರದ ಮೂರ್ತಿಗಳಿಗೆ ಬಣ್ಣ ಬಳಿದು ದೇಗುಲದ ಮುಂಭಾಗದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಪೈಕಿ ಒಂದು ಮೂರ್ತಿಯ ಕೈ ಕಡಿದ ಸ್ಥಿತಿಯಲ್ಲಿದೆ. 

Advertisement

ದೇಗುಲದಿಂದಲೇ ನಿರ್ವಹಣೆ
ಈ ಎಲ್ಲಾ 21 ಮೂರ್ತಿಗಳ ನಿರ್ವಹಣೆ ದೇಗುಲದಿಂದಲೇ ನಡೆಯುತ್ತಿದ್ದು ನಂದಳಿಕೆ ಚಾವಡಿಯ ಪರಂಪರೆಯ ಹೆಗ್ಡೆಯವರನ್ನು ನೆನಪಿಸುವ ಕಾರ್ಯವಾಗುತ್ತಿದೆ. ಎಲ್ಲಾ ಮೂರ್ತಿಗಳೂ ಆಕರ್ಷಣೀಯವಾಗಿವೆ.

ಮೂರ್ತಿಗಳಿಗೆ ಪಿಂಡ ಪ್ರದಾನವೂ ಇದೆ
ಈ ಮರದ ಮೂರ್ತಿಗಳಿಗೆ ಮಹಾಲಯ ಅಮವಾಸ್ಯೆಯ ದಿನ ದೇಗುಲದ ನೈವೇದ್ಯದಿಂದ ಪಿಂಡ ಪ್ರದಾನ ಮಾಡಲಾಗುತ್ತದೆ 21 ಮೂರ್ತಿಗಳಿಗೂ ಒಂದೇ  ಹರಿವಾಣದಲ್ಲಿ ಪಿಂಡ ಪ್ರದಾನ ಮಾಡಲಾಗುವುದೆಂದು ದೇಗುಲದ ಪ್ರಬಂಧಕ ರವಿರಾಜ್‌ ಭಟ್‌ ತಿಳಿಸಿದ್ದಾರೆ.

ಸಿರಿ ಜಾತ್ರೆಯ ಮೂಲಕ ನಂದಳಿಕೆ ಹೆಸರುವಾಸಿಯಾದರೆ ಜಾತ್ರೆಯ ರೂವಾರಿಗಳಾದ ಹೆಗ್ಗಡೆ ಮನೆತನದವರ ಸೂಚ್ಯವನ್ನು ಬೊಂಬೆಗಳ ಮೂಲಕ ತಿಳಿಯಪಡಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next