Advertisement

ವಿಮಾ ಯೋಜನೆಗೂ ನಿಲೇಕಣಿ “ಆಧಾರ’!

10:18 AM Feb 23, 2018 | |

ಹೊಸದಿಲ್ಲಿ: ವಿಶ್ವದಲ್ಲೇ ಬೃಹತ್‌ ವಿಮಾ ಯೋಜನೆ ಎನಿಸಿಕೊಂಡಿರುವ ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆಯ ಹೊಣೆಗಾರಿಕೆ ರಾಜ್ಯದ ಐಟಿ ಕ್ಷೇತ್ರದ ದೈತ್ಯ ನಂದನ್‌ ನಿಲೇಕಣಿ ಹೆಗಲಿಗೇರಿದೆ. ಆಧಾರ್‌ ಮಾದರಿಯಲ್ಲೆ ಎನ್‌ಎಚ್‌ಪಿಎಸ್‌ ಯೋಜನೆಯನ್ನೂ ಜಾರಿ ಮಾಡಿಕೊಡಲಿದ್ದಾರೆ. ನೀತಿ ಆಯೋಗ ಈಗಾಗಲೇ ನಿಲೇಕಣಿ ಅವರನ್ನು ಸಂಪರ್ಕಿಸಿದ್ದು ಒಪ್ಪಿಗೆಯನ್ನೂ ಸೂಚಿಸಿದ್ದಾರೆ. 

Advertisement

ಈಗಾಗಲೇ ದೇಶದ ಪ್ರತಿಯೊಬ್ಬರಿಗೆ ಆಧಾರ್‌ ಕಾರ್ಡ್‌ ನೀಡುವ ಯೋಜನೆಯನ್ನು ಯಶ ಸ್ವಿಯಾಗಿ ಜಾರಿ ಮಾಡಿರುವ ನಿಲೇಕಣಿ ಅವರಿಗೆ ಇದು ಹೊಸ ಜವಾಬ್ದಾರಿ. 

ಇದಷ್ಟೇ ಅಲ್ಲ, ಕೇಂದ್ರ ಸರಕಾರದ ಬಹು ಮಹತ್ವದ ಜಿಎಸ್‌ಟಿಯ ಸರಳೀಕರಣ ತಂಡದಲ್ಲೂ ನಂದನ್‌ ನಿಲೇಕಣಿ ಇದ್ದಾರೆ ಅನ್ನೋದೇ ವಿಶೇಷ.

ಹಿಂದೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಅವಧಿಯಲ್ಲಿ ನಿಲೇಕಣಿಗೆ ಆಧಾರ್‌ ಹೊಣೆಗಾರಿಕೆ ಹೊರಿಸಲಾಗಿತ್ತು. ಅದಾದ ನಂತರ ಕಾಂಗ್ರೆಸ್‌ ಟಿಕೆಟ್‌ ಪಡೆದು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅನಂತ್‌ಕುಮಾರ್‌ ವಿರುದ್ಧವೇ ನಿಲೇಕಣಿ ಸ್ಪರ್ಧಿಸಿದ್ದರು. ಆದ ರೆ ಕೇಂದ್ರ ದಲ್ಲಿ ನರೇಂದ್ರ ಮೋದಿ ಸರಕಾರ ಬರುತ್ತಿದ್ದಂತೆ ನಿಲೇಕಣಿ ಅವರನ್ನು ಕರೆಸಿಕೊಂಡಿದ್ದ ಪ್ರಧಾನಿ, ಪರಿಣಾಮಕಾರಿಯಾಗಿ ಆಧಾರ್‌ ಜಾರಿ ಮಾಡುವ ಬಗ್ಗೆ ಸಲಹೆ ಸೂಚನೆ ಕೇಳಿದ್ದರು. 

ಏನಿದು ರಾಷ್ಟ್ರೀಯ ಆರೋಗ್ಯ ಯೋಜನೆ?

Advertisement

ಈ ವರ್ಷದ ಬಜೆಟ್‌ನಲ್ಲಿ ಕೇಂದ್ರ ಸರಕಾರ ದೇಶದ 10 ಕೋಟಿ ಕುಟುಂಬಗಳಿಗೆ ಆರೋಗ್ಯ ಸುರಕ್ಷೆ ನೀಡುವ ವಿಮಾ ಯೋಜನೆಯನ್ನು ಘೋಷಿಸಿತ್ತು. ಇದರನ್ವಯ ವಾರ್ಷಿಕ 5 ಲಕ್ಷ ರೂ. ವಿಮೆ ಪ್ರತಿ ಕುಟುಂಬಕ್ಕೆ ಸಿಗುತ್ತದೆ. ಬಜೆಟ್‌ ವೇಳೆ ವಿಮಾ ಕಂತಾಗಿ 1000ದಿಂದ 1200 ರೂ. ಕಟ್ಟಬೇಕು ಎಂಬ ಮಾತುಗಳು ಕೇಳಿಬಂದಿದ್ದರೂ ಇದೀಗ ಇದನ್ನು  900 ರೂ.ನಿಂದ 1000 ರೂ.ಗೆ ಇಳಿಕೆ ಮಾಡಲಾಗಿದೆ.  ಇದರ ಶೇ.60ರಷ್ಟು ಹಣವನ್ನು ಕೇಂದ್ರ ಪಾವತಿಸಿದರೆ ಬಾಕಿ ಶೇ.40ರಷ್ಟು ಹಣವನ್ನು ರಾಜ್ಯಗಳು ವ್ಯಯಿಸುತ್ತವೆ. 

ನಿಲೇಕಣಿ ಪಾತ್ರವೇನು?
 ವಿಮಾ ಯೋಜನೆಯ ತಾಂತ್ರಿಕ ರೂಪುರೇಷೆಗಳನ್ನು ಸಿದ್ಧಪಡಿಸಿ ಅದನ್ನು ಯಶಸ್ವಿಯಾಗಿ ಜಾರಿಗೊಳಿಸುವ ಹೊಣೆಗಾರಿಕೆ ಇನ್ಫೋಸಿಸ್‌ ಸಂಸ್ಥಾಪಕರಲ್ಲೊಬ್ಬರಾಗಿರುವ ನಿಲೇಕಣಿ ಯದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next