Advertisement

ಅಪ್ಪ ವಿಲನ್‌ ಮಗ ಹೀರೋ!

03:50 PM Aug 23, 2021 | Team Udayavani |

“ನನಗೂ ಲವ್ವಾಗಿದೆ’ ಎಂಬ ಹೊಸಬರ ಸಿನಿಮಾದ ಮುಹೂರ್ತ ವರಮಹಾ ಲಕ್ಷ್ಮೀ ಹಬ್ಬದಂದು ನಡೆದಿದೆ. ವಿಜಯ್‌ ರಾಜಶೇಖರ್‌ ಈ ಸಿನಿಮಾಕ್ಕೆ ಚಿತ್ರಕತೆ,ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

Advertisement

“ಶೀರ್ಷಿಕೆ ಕೇಳಿದೊಡನೆ ಇದೊಂದು ಲವ್‌ ಸ್ಟೋರಿ ಇರಬಹುದೆಂಬ ಭಾವನೆ ಬರುತ್ತದೆ. ಬೆಳಗಾಂ ಹುಡುಗ, ಬೆಂಗಳೂರು ಹುಡುಗಿಯ ಪ್ರೇಮ ಕತೆ ಇರಲಿದೆ. ಆದರೆ ಅದಕ್ಕಿಂತಲೂ ಮೀರಿದ ಕುತೂಹಲಕಾರಿ ಸನ್ನಿವೇಶಗಳನ್ನು ನೋಡಬಹುದೆಂದು ಚಿತ್ರತಂಡದ ಮಾತು.

ಈ ಚಿತ್ರವನ್ನು ಕೆ.ನೀಲಕಂಠನ್ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಅವರದ್ದೇ ಕಥೆ ಇದೆ. ಜೊತೆಗೆ ಖಳನಾಯಕರಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ನಿರ್ಮಾಪಕರ ಪುತ್ರ ಸೋಮವಿಜಯ್‌ ನಾಯಕನಾಗಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:ಡಾಲಿ ಜೊತೆ ‘ಹೆಡ್ ಬುಷ್’ನಲ್ಲಿ ಜೊತೆಯಾಗಲಿದ್ದಾರೆ ಯೋಗಿ  

ರೋಶಿನಿ ಈ ಚಿತ್ರದ ನಾಯಕಿ. ಇವರೊಂದಿಗೆ ಶ್ವೇತಾ, ಅಭಿಷ್‌ ಆಂಟೋನಿ, ಮಮತಾ, ಬಾಬು, ದೊರೆ, ಕಾರ್ತಿಕ್ ಮುಂತಾದವರು ನಟಿಸುತ್ತಿದ್ದಾರೆ.

Advertisement

ಐದು ಹಾಡುಗಳಿಗೆ ಬಿ.ಆರ್.ಹೇಮಂತ್‌ ಕುಮಾರ್‌ ಸಂಗೀತ ಸಂಯೋಜಿಸಿದ್ದಾರೆ. ಅನುರಾಧ ಭಟ್‌, ಶ್ರೀನಿಧಿ, ರಶ್ಮಿ ಮತ್ತು ಪೊಲೀಸ್‌ ಸುಬ್ರಮಣ್ಯ, ಕಂಬದ ರಂಗಯ್ಯ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಎರಡು ಹಂತಗಳಲ್ಲಿ ಬೆಂಗಳೂರು, ಬೆಳಗಾಂ, ಚಿಕ್ಕಮಗಳೂರು ಹಾಗೂ ಸಕಲೇಶಪುರದ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next