Advertisement
ವಾಸ್ತವದಲ್ಲಿ ಅಧ್ಯಾತ್ಮ, ಯೌಗಿಕ ಪ್ರಕ್ರಿಯೆ ಎನ್ನು ವುದು ತಾನು ಎಂದರೇನು ಎಂಬುದನ್ನು ತಿಳಿದುಕೊಳ್ಳುವುದು. ಇದನ್ನು ಹೊಳೆಯಿಸು ವುದಕ್ಕೆ ಪ್ರತೀ ಗುರುವೂ ಅನುಸರಿಸಿದ ಮಾರ್ಗ ವಿಭಿನ್ನ, ಅನೂಹ್ಯ. ಸಾವಿರಾರು ವರ್ಷಗಳ ಹಿಂದೆ ರಿಭು ಎಂಬೊಬ್ಬ ಮಹರ್ಷಿ ಇದ್ದರು. ಅವರಲ್ಲಿ ಅನೇಕ ಶಿಷ್ಯರು ವಿದ್ಯಾಭ್ಯಾಸ ಮಾಡು ತ್ತಿದ್ದರೂ ನಿಧಗ ಎಂಬೊಬ್ಬ ಶಿಷ್ಯನ ಮೇಲೆ ಅವರಿಗೆ ಅಪರಿಮಿತ ಪ್ರೀತಿ, ಶ್ರದ್ಧೆ ಇತ್ತು. ನಿಧಗ ಉಳಿದ ಶಿಷ್ಯರಷ್ಟು ಬುದ್ಧಿವಂತನೂ ಅಲ್ಲ, ವಿದ್ಯೆಯ ಕಡೆಗೆ ಆಸಕ್ತನೂ ಆಗಿರಲಿಲ್ಲ. ನಿಜ ಹೇಳಬೇಕೆಂದರೆ, ಗುರುಕುಲದಿಂದ ಯಾವತ್ತು ಪಾರಾ ದೇನು ಎಂದು ಕನಸು ಕಟ್ಟುತ್ತಿದ್ದವ ಆತ. ಆದರೂ ರಿಭು ಮಹರ್ಷಿಗಳಿಗೆ ಆತ ನೆಂದರೆ ವಿಶೇಷ ಒಲುಮೆ. ಇದರಿಂದ ಇತರ ಜ್ಞಾನಾರ್ಥಿಗಳಿಗೆ ನಿಧಗನ ಬಗ್ಗೆ ಅಸೂಯೆ ಉಂಟಾಗಿತ್ತು. ಅದು ಸಹಜ. “ಈತನ ಬಗ್ಗೆ ಗುರುಗಳಿಗೇಕೆ ಇಷ್ಟು ಆಸ್ಥೆ’ ಎಂಬುದು ಉಳಿದ ಶಿಷ್ಯರ ಪ್ರಶ್ನೆ.
ಒಂದು ದಿನ ರಿಭು ಮಹರ್ಷಿ ವೃದ್ಧ ಹಳ್ಳಿಗನ ವೇಷದಲ್ಲಿ ನಿಧಗನನ್ನು ಸಂಧಿಸಿ ದರು. ಆ ಹೊತ್ತಿಗೆ ರಾಜನ ಮೆರವಣಿಗೆ ಆ ದಾರಿಯಾಗಿ ಸಾಗುತ್ತಿತ್ತು. ನಿಧಗ ತದೇಕ ಚಿತ್ತದಿಂದ ಅದನ್ನು ನೋಡುತ್ತಿದ್ದ.
Related Articles
Advertisement
“ದೊರೆ ಎಲ್ಲಿದ್ದಾನೆ?’ ರಿಭುವಿನ ಮರುಪ್ರಶ್ನೆ. ನಿಧಗ ಉತ್ತರಿಸಿದ, “ಕಾಣು ವುದಿಲ್ಲವೇ, ಆನೆಯ ಮೇಲೆ ಕುಳಿತಿ ರುವುದು ಅರಸ, ಕೆಳಗಿರುವುದು ಆನೆ.’“ಓಹ್, ಆದರೆ ಈ ಮೇಲೆ ಮತ್ತು ಕೆಳಗೆ ಅಂದರೆ ಏನು?’ ರಿಭುವಿನ ಮತ್ತೂಂದು ಪ್ರಶ್ನೆ. ನಿಧಗನಿಗೆ ತಡೆಯ ಲಾಗದಷ್ಟು ಸಿಟ್ಟು ಬಂತು. ಆತ ಮಾರು ವೇಷದಲ್ಲಿದ್ದ ರಿಭುವನ್ನು ಬಗ್ಗಿಸಿ ಅವನ ಬೆನ್ನಿನ ಮೇಲೆ ಹಾರಿ ಕುಳಿತುಕೊಂಡ ಮತ್ತು “ಮೇಲಿರುವುದು ನಾನು, ಕೆಳಗಿರುವುದು ನೀನು’ ಎಂದ. “ಈಗಲೂ ನನಗೆ ಸರಿಯಾಗಿ ಅರ್ಥವಾಗಲಿಲ್ಲ. ಮನುಷ್ಯ ಮತ್ತು ಆನೆ, ಮೇಲೆ, ಕೆಳಗೆ ಇದೆಲ್ಲ ತಿಳಿಯಿತು. ಆದರೆ ನಾನು ಮತ್ತು ನೀನು ಎಂದರೆ ಏನು?’ ಎಂದು ರಿಭು ಮರಳಿ ಪ್ರಶ್ನಿಸಿದ. ಇದನ್ನು ಕೇಳಿದ ಒಡನೆಯೇ ನಿಧಗನಿಗೆ ಕೋಲ್ಮಿಂಚು ತಾಕಿದಂತಾ ಯಿತು. “ನಾನು’ ಎಂದರೆ ಏನು ಎಂಬ ಪ್ರಶ್ನೆ ಮನಸ್ಸಿನಲ್ಲಿ ನಾಟಿತು. ಹಳ್ಳಿಗ ವೃದ್ಧ ಮಾರುವೇಷಧಾರಿ ಗುರು ರಿಭು ಮಹರ್ಷಿ ಎಂಬುದೂ ಅರಿವಾಯಿತು. ಅವರ ಬೆನ್ನ ಮೇಲಿಂದ ಹಾರಿ ಇಳಿದ ನಿಧಗ ಅವರ ಪದತಲದಲ್ಲಿ ತಲೆಯಿರಿಸಿದ. ಆ ಕ್ಷಣದಲ್ಲಿ ಅವನಿಗೆ ಜ್ಞಾನದರ್ಶನವೂ ಆಯಿತು.