Advertisement
ಮೋದಿಯವರ ಪ್ರಮಾಣವಚನ ಸಂಭ್ರಮ ಹಾಗೂ ನೂತನ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರ ಗೆಲುವಿನ ವಿಜಯೋತ್ಸವ ಕಾರ್ಯಕ್ರಮ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ರವಿವಾರ ಜಿಲ್ಲಾ ಕಾರ್ಯಾಲಯದಲ್ಲಿ ನಡೆಯಿತು. ಪ್ರಮಾಣ ವಚನ ಸಮಾರಂಭ ವೀಕ್ಷಣೆಗೆ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗದಲ್ಲಿ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು. ತಾಲೂಕು ಕೇಂದ್ರಗಳಲ್ಲೂ ಹರ್ಷಾಚರಣೆ ನಡೆಯಿತು.
ಮೋದಿ ಅವರು ಪ್ರಮಾಣ ವಚನ ಸ್ವೀಕಾರಕ್ಕೆ ಆಗಮಿಸಿದ ವೇಳೆ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಪ್ರಮಾಣ ವಚನ ಸ್ವೀಕರಿಸುವ ವೇಳೆ ಎದ್ದು ನಿಂತು, ಚಪ್ಪಾಳೆ, ಶಿಳ್ಳೆ, ಪಟಾಕಿ, ಹರ್ಷೋದ್ಘಾರದೊಂದಿಗೆ ನಾಯಕರು, ಕಾರ್ಯಕರ್ತರು ಸಂಭ್ರಮಿಸಿದರು. ಜೈ ಜೈ ಮೋದಿ, ಜೈ ಬಿಜೆಪಿ ಘೋಷಣೆಗಳು ಮೊಳಗಿದವು. ಬ್ಯಾನರ್, ಪೋಸ್ಟರ್,
ತಂಪು ಪಾನಿಯ ವಿತರಣೆ
ನರೇಂದ್ರ ಮೋದಿಯವರಿಗೆ ಶುಭಾಶಯ ಕೋರಿ ನಗರದ ಅಲ್ಲಲ್ಲಿ ಅಭಿಮಾನಿಗಳು ಪೋಸ್ಟರ್ ಅಳವಡಿಸಿದ್ದರು. ಮಣ್ಣಗುಡ್ಡದ ಸಂಘನಿಕೇತನದ ಬಳಿ ಮೋದಿ ಅಭಿಮಾನಿ ಶಂಕರ್ ಅವರು ಸಾರ್ವಜನಿಕರಿಗೆ ಉಚಿತ ಕಬ್ಬು ಜ್ಯೂಸ್ ವಿತರಿಸಿದರು.
Related Articles
ಪಟ್ಟಾಭಿಷೇಕ: ಕಾಮತ್
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ನರೇಂದ್ರ ಮೋದಿ ಹ್ಯಾಟ್ರಿಕ್ ಸಾಧನೆಗೆ ಜನರ ಆಶೀರ್ವಾದ ಹಾಗೂ ಬೆಂಬಲವೇ ಕಾರಣ. ದ.ಕ. ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ ಗೆಲುವಿಗೆ ಅನೇಕರು ಶ್ರಮಿಸಿದ್ದಾರೆ. ಮುಂದಿನ ದಿನಗಳು ದೇಶದಲ್ಲಿ ಮತ್ತಷ್ಟು ಅಭಿವೃದ್ಧಿಗೆ ಪೂರಕವಾಗಿರಲಿವೆ. ಜನರ ನಂಬಿಕೆಗೂ ಮೀರಿ ಮೋದಿ ನೇತೃತ್ವದ ಎನ್‌ಡಿಎ ಸರಕಾರ ದೇಶದ ಪ್ರಗತಿಗೆ ಕೊಡುಗೆ ನೀಡಲಿದೆ ಎಂದರು.
Advertisement
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಕಿಶೋರ್ ಬೊಟ್ಯಾಡಿ, ಯತೀಶ್ ಆರ್ವರ್, ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಯುವ ಮೋರ್ಚ ಅಧ್ಯಕ್ಷ ನಂದನ್ ಮಲ್ಯ, ಮಹಿಳಾ ಮೋರ್ಚ ಅಧ್ಯಕ್ಷೆ ಮಂಜುಳಾ ರಾವ್, ಪ್ರಮುಖರಾದ ಕವಿತಾ ಸನಿಲ್, ಕಿಶೋರ್ ಕೊಟ್ಟಾರಿ, ಪೂರ್ಣಿಮಾ, ರಾಜಗೋಪಾಲ್ ರೈ, ವಿಕಾಸ್ ಪುತ್ತೂರು, ಬಾಲಕೃಷ್ಣ ಭಟ್, ಪೂಜಾ ಪೈ, ಜಗದೀಶ್ ಶೇಣವ, ಮಹೇಶ ಜೋಗಿ, ನಂದನ್ ಮಲ್ಯ, ಅಶ್ವಿತ್ ಕೊಟ್ಟಾರಿ ಸೇರಿದಂತೆ ಮನಪಾ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಉಡುಪಿ: ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುತ್ತಿ ದ್ದಂತೆಯೇ ಜಿಲ್ಲೆಯ ವಿವಿಧೆಡೆ ಸಂಭ್ರಮಾಚರಣೆ ನಡೆಯಿತು.ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾ ಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ನೇತೃತ್ವದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಸಹಯೋಗದೊಂದಿಗೆ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಹಣತೆಗಳನ್ನು ಹಚ್ಚಿ, ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಲಾಯಿತು ಪ್ರಮಾಣ ವಚನ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲಾಯಿತು.ಮಣಿಪಾಲದ ಟೈಗರ್ ಸರ್ಕಲ್‌ನಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಸಾರ್ವಜನಿಕರಿಗೆ ಸಿಹಿತಿಂಡಿ, ಚಹಾ ವಿತರಣೆ ಮಾಡಲಾಯಿತು. ಶಾಸಕ ಯಶ್‌ಪಾಲ್ ಎ.ಸುವರ್ಣ, ನಗರಸಭಾ ಸದಸ್ಯರಾದ ಸುಮಿತ್ರಾ ನಾಯಕ್, ವಿಜಯಲಕ್ಷ್ಮೀ, ಕಲ್ಪನಾ ಸುಧಾಮ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ, ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ನಿತಿನ್ ಪೈ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಅಶ್ವಿನಿ ಶೆಟ್ಟಿ, ಹಿಂದೂ ಯುವಸೇನೆ ಅಧ್ಯಕ್ಷ ಅಜಿತ್ ಕೊಡವೂರು ಮತ್ತಿತರರು ಉಪಸ್ಥಿತರಿದ್ದರು.