Advertisement

RRTS: ಆರ್‌ಆರ್‌ಟಿಎಸ್‌ ಹೆಸರು ಬದಲು- “ನಮೋ ಭಾರತ್‌”ಗೆ ಕಾಂಗ್ರೆಸ್‌ ತೀವ್ರ ಆಕ್ರೋಶ

10:00 AM Oct 20, 2023 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಲೋಕಾರ್ಪಣೆಗೊಳಿಸ ಲಿರುವ ರೀಜನಲ್‌ ರ್ಯಾಪಿಡ್‌ ಟ್ರಾನ್ಸಿಟ್‌ ಸಿಸ್ಟಮ್‌ (ಆರ್‌ಆರ್‌ಟಿಎಸ್‌) ರೈಲಿಗೆ “ನಮೋ ಭಾರತ್‌” ಎಂಬ ಹೊಸ ಹೆಸರು ಇರಿಸಲಾಗಿದೆ. ಕೇಂದ್ರದ ಪ್ರಸ್ತಾವಕ್ಕೆ ಕಾಂಗ್ರೆಸ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಹೊಸದಿಲ್ಲಿಯಿಂದ ಮೇರಠ್‌ ನಡುವಿನ ಪ್ರಸ್ತಾವಿತ ಮಾರ್ಗದ ಸಹಿಬಾಬಾದ್‌ನಿಂದ ದುಹಾಯ್‌ ಡಿಪೋ ವರೆಗಿನ 17 ಕಿ.ಮೀ. ದೂರದ ಮಾರ್ಗ ಶನಿವಾರದಿಂದ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಲಿದೆ.

Advertisement

ಇದು ದೇಶದ ಮೊದಲ ಆರ್‌ಆರ್‌ಟಿಎಸ್‌ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಲಿದೆ. ಸಂಚಾರ ವ್ಯವಸ್ಥೆಗೆ ಎ.ಐ ನಿಯಂತ್ರಿತ ಭದ್ರತಾ ವ್ಯವಸ್ಥೆ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next