Advertisement
ಬೆಳಿಗ್ಗೆ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಸ್ಪರ್ಧಾ ಕಾರ್ಯಕ್ರಮಗಳು ನಡೆದವು. ಮಕ್ಕಳಿಗೆ ಪರಿಸರದ ಕುರಿತಾದ ಚಿತ್ರಕಲಾ ಸ್ಪರ್ಧೆ, ಸಂಗೀತ ಕುರ್ಚಿ ಮತ್ತು ಒಂದೇ ಒಂದು ನಿಮಿಷದ ಸ್ಪರ್ಧೆಗಳಲ್ಲಿ ಮಕ್ಕಳು ಸಂಭ್ರಮದಲ್ಲಿ ಪಾಲ್ಗೊಂಡರು. ಮಹಿಳೆಯರಿಗೆ ಸಂಪ್ರದಾಯದ ಹಾಡು ಮತ್ತು ರಂಗವಲ್ಲಿ, ಸಂಗೀತ ಕುರ್ಚಿ ಸ್ಪರ್ಧೆಗಳು ನಡೆದಿದ್ದು ಎಲ್ಲ ವಯೋಮಾನದವರೂ ಭಾಗವಹಿಸಿ ಬಹುಮಾನ ಪಡೆದುಕೊಂಡರು. ನಿರ್ಣಾಯಕರಾಗಿ ರಾಮಚಂದ್ರ ಭಟ್ಟ ಶಿರಳಗಿ, ಗಾಯತ್ರಿ ರಾಘವೇಂದ್ರ, ಭುವನೇಶ್ವರಿ ಜೋಶಿ, ಜಾನಕಿ ಭಟ್ಟ ಪಾಲ್ಗೊಂಡರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪಿ ಎಸ್ ಭಟ್ಟ ಬೋಳ್ಮಠ ತಂಡದಿಂದ ಭಜನಾ ಕಾರ್ಯಕ್ರಮಗಳು ನಡೆದವು.
Related Articles
Advertisement
ಉದಯವಾಣಿ ವರದಿಗಾರ ರಾಘವೇಂದ್ರ ಬೆಟ್ಟಕೊಪ್ಪ, ಯಕ್ಷಗಾನ ಅಕಾಡೆಮಿಗೆ ಶೀಘ್ರ ಅಧ್ಯಕ್ಷರ ನೇಮಕಾತಿ ಆಗಬೇಕು. ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಸರಕಾರ ಇನ್ನಷ್ಟು ಮಹತ್ವ ನೀಡಬೇಕು ಎಂದರು. ಸೊಸೈಟಿ ನಿರ್ದೇಶಕಿ ಭಾಗೀರಥಿ ಹೆಗಡೆ ಪಾಲ್ಗೊಂಡು ಮಾತನಾಡಿದರು.
ಸಂಪ್ರದಾಯದ ಹಾಡುಗಳನ್ನು ರಚಿಸುವ ಮತ್ತು ಹಾಡುವದರಲ್ಲಿ ಸಾಧನೆ ಮಾಡಿದ ಅನಸೂಯಾ ಭಟ್ಟ ಗೋಪನಮರಿ, ಕೃಷಿ ಪದವಿಯಲ್ಲಿ ಹದಿಮೂರು ಚಿನ್ನದ ಪದಕ ಪಡೆದ ಶರತ್ ಕೊಠಾರಿ, ಉತ್ತರ ಕನ್ನಡ ಜಿಲ್ಲೆಯ ಸಂಪ್ರದಾಯದ ಚಿತ್ರಕಲೆಯ ಕುರಿತಾಗಿ ಸಂಶೋಧನಾ ಪ್ರಬಂಧ ಮಂಡಿಸಿ ಪಿ ಎಚ್ ಡಿ ಪದವಿ ಪಡೆದ ಜ್ಯೋತಿ ಭಟ್ಟರ ಅಪರವಾಗಿ ಅವರ ತಾಯಿಗೆ ಸಮ್ಮಾನ ಮಾಡಲಾಯಿತು. ನಾಗರಜ್ ಜೋಶೊ ಪ್ರಾಸ್ತಾವಿಕ ಮಾತನಾಡಿದರು. ನವ್ಯಾ ಭಟ್ಟ ಸಮ್ಮಾನ ಪತ್ರ ವಾಚಿಸಿದರು. ಸಹನಾ ಭಟ್ಟ, ನವ್ಯ ಭಟ್ಟ ಬಹುಮಾನ ಘೋಷಿಸಿದರು. ಸುರೇಖಾ ಹೆಗಡೆ ವಂದಿಸಿದರು. ಅರುಣಕುಮಾರ ಭಟ್ಟ, ನಮ್ಮೂರ ಹಬ್ಬ ಸ್ವಾಗತ ಸಮಿತಿ ಅಧ್ಯಕ್ಷ ಪ್ರವೀಣ ಹೆಗಡೆ ಮಣ್ಮನೆ ನಿರ್ವಹಿಸಿದರು.
ನಂತರ ಸಾಂಸ್ಕೃತಿಕ ಕಾರ್ಯಕ್ರಮ ಸಿದ್ಧಿವಿನಾಯಕ ಕಲಾಮಂಡಳಿ ಗದ್ದೇಹಳ್ಳಿ ದಮಾಮಿ ಕುಣಿತ, ಸಾಕ್ಷಿ ಹೆಗಡೆ ಅಲ್ಲಾಳಮನೆ ಸಂಗಡಿಗರಿಂದ ಭಾವಗೀತೆ ಪಕ್ಕದ ಮಾರಿಕಾಂಬಾ ದೇವಾಲಯದ ಎದುರು ನಡೆಯಿತು.