Advertisement
ಸುಮಾರು ಐದು ತಿಂಗಳ ನಂತರ ಹಳಿಗೆ ಇಳಿದ “ನಮ್ಮ ಮಟ್ರೋ’ ರೈಲುಗಳಲ್ಲಿ ಮೊದಲ ದಿನ ಕಂಡು ಬಂದ ದೃಶ್ಯ ಇದು. ಪ್ರತಿ ಐದು ನಿಮಿಷಕ್ಕೊಂದು ಆರು ಬೋಗಿಗಳ ರೈಲುಗಳು ಕಾರ್ಯಾಚರಣೆ ಮಾಡಿದವು. ಎಲ್ಲ ಮುನ್ನೆ ಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ದಟ್ಟಣೆಯಾಗದಂತೆ ಹೆಚ್ಚು ಸಿಬ್ಬಂದಿಯನ್ನು ನಿಲ್ದಾಣಗಳಲ್ಲಿ ನಿಯೋಜಿಸಲಾಗಿತ್ತು. ಆದರೆ, ನಿರ್ವಹಣೆಗಾಗಿ ನಿಯೋಜಿಸಿದ್ದ ಸಿಬ್ಬಂದಿಯಷ್ಟು ಪ್ರಯಾಣಿಕರೂ ಕಾಣಸಿಗಲಿಲ್ಲ. ಸುದೀರ್ಘಾವಧಿ ನಂತರ ಸೋಂಕು ಹಾವಳಿ ನಡುವೆ ಪುನಾರಂಭಗೊಂಡಿದ್ದರಿಂದ ಈ ಸ್ಪಂದನೆ ನಿರೀಕ್ಷಿತವೂ ಆಗಿತ್ತು.
Related Articles
Advertisement
ಮೆಟ್ರೋದಲ್ಲಿ ಪ್ರಯಾಣಿಸಿದ ರಾಮುಲು : ಈ ಮಧ್ಯೆ ಸ್ವತಃ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮೊದಲ ದಿನ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ, ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಈ ಮೂಲಕ ಪ್ರಯಾಣಿಕರಲ್ಲಿ ಸಮೂಹ ಸಾರಿಗೆ ಬಳಕೆ ಬಗ್ಗೆವಿಶ್ವಾಸ ಮೂಡಿಸುವ ಕೆಲಸ ಮಾಡಿದರು. ಮಧ್ಯಾಹ್ನ ವಿಧಾನಸೌಧ ನಿಲ್ದಾಣದಿಂದ ಮೆಜೆಸ್ಟಿಕ್‌ನ ಕೆಂಪೇಗೌಡ ನಿಲ್ದಾಣದವರೆಗೆ ಸಂಚರಿಸಿ ಕೋವಿಡ್ ಹಿನ್ನೆಲೆಯಲ್ಲಿ ಸುರಕ್ಷಿತ ಪ್ರಯಾಣಕ್ಕೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು. ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, “ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲು ಭಯ ಬೇಡ. ಎಚ್ಚರಿಕೆ ಅಗತ್ಯ. ಎಲ್ಲ ಪ್ರಯಾಣಿಕರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು’ ಎಂದು ಹೇಳಿದರು.
ರೀಚಾರ್ಜ್ ನಿಯಮ ಪರಿಷ್ಕರಣೆ : ಸ್ಮಾರ್ಟ್ ಕಾರ್ಡ್ ರೀಚಾರ್ಜ್ ನಿಯಮ ವನ್ನು ಮಧ್ಯಾ ಹ್ನದ ಹೊತ್ತಿಗೆ ಪರಿಷ್ಕರಿಸಿ, ಯುಪಿಐ- ಪಿಒಎಸ್ ಅಥವಾ ಪೇಟಿಎಂ ಮೂಲಕ ಯಾವುದೇ ಮೆಟ್ರೋ ನಿಲ್ದಾಣಗಳಲ್ಲಿ ರೀಚಾರ್ಜ್ ಮಾಡಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ರಿಚಾರ್ಜ್ ಮಾಡಿಸಿದ ತಕ್ಷಣ ಬಳಕೆಗೆ ಅನುವುಮಾಡಿಕೊಟ್ಟಿತು. ಇದರಿಂದ ಒಂದು ತಾಸು ಕಾಯುವ ಕಿರಿಕಿರಿ ತಪ್ಪಿತು. ಹಲವು ಬಾರಿ ಮಾರ್ಗಸೂಚಿ ಗಳ ಬಗ್ಗೆ ಪ್ರಚಾರ ಹಾಗೂ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದರಿಂದ ಪ್ರಯಾಣಿಕರು ನಿಯಮಗಳನ್ನು ಪಾಲಿಸಿ, ಶಿಸ್ತುಬದ್ಧವಾಗಿ ಪ್ರಯಾಣಿಸಿದರು. ಪ್ರವೇಶದ್ವಾರದಲ್ಲಿ ಸ್ಕ್ರೀನಿಂಗ್, ಸ್ಯಾನಿಟೈಸರ್, ಮಾಸ್ಕ್ ಧರಿಸಿದ್ದರು. ಆದರೆ, ರೀಚಾರ್ಜ್‌ಗೆ ಸೂಚಿ ಸಿದ್ದ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಜನ ತುಂಬಾ ಕಡಿಮೆ ಇದ್ದುದರಿಂದ ಕೌಂಟರ್‌ಗಳಲ್ಲಿ ಪಿಒಎಸ್ ಮೂಲಕವೂರೀಚಾರ್ಜ್ ಗೆ ಅವಕಾಶ ಮಾಡಿಕೊಡಲಾಯಿತು ಎಂದು ಬಿಎಂಆರ್‌ಸಿಎಲ್ ಕಾರ್ಯ ನಿರ್ವಹಣಾ ನಿರ್ದೇ ಶಕ ಎ.ಎಸ್. ಶಂಕರ್ ಸ್ಪಷ್ಟ ಪಡಿಸಿದರು.