Advertisement
ಕೋವಿಡ್ ಹಾವಳಿ ಮತ್ತು ಲಾಕ್‌ಡೌನ್ ನಿಂದ ಕಳೆದೆರಡು ವರ್ಷಗಳಿಂದ ಮಂಕಾಗಿದ್ದ ಈ ಉದ್ಯಮಕ್ಕೆ “ನಮ್ಮ ಮೆಟ್ರೋ’ ಉತ್ತೇಜನನೀಡಿದಂತಾಗಿದ್ದು, ನಗರದ ಪಶ್ಚಿಮ ಭಾಗದ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು, ದೊಡ್ಡ ಸಮ್ಮೇಳನ ಸಭಾಂಗಣಗಳು, ಮಾಲ್‌ಗಳು,
ಅಪಾರ್ಟ್‌ಮೆಂಟ್‌ಗಳು ತಲೆಯೆತ್ತಲಿವೆ. ಈಗಾಗಲೇ ಇರುವ ಮಳಿಗೆಗಳು, ವಸತಿ ಸಮುತ್ಛಯಗಳು ಮತ್ತು ನಿವೇಶನಗಳಿಗೆ ಬೇಡಿಕೆ ಬರುವ ನಿರೀಕ್ಷೆ ಇದೆ.
Related Articles
Advertisement
ಇದನ್ನೂ ಓದಿ:ಮಕ್ಕಳ ಭವಿಷ್ಯದ ಕುತ್ತಿಗೆ ಕೊಯ್ಯುವಂಥ ಕೆಲಸದಲ್ಲಿ ಭಾಗಿಯಾದ ಪಶ್ಚಾತ್ತಾಪ ಹೊರಬೇಕಾದೀತು!
ಮೆಟ್ರೋ ನಿಲ್ದಾಣಗಳಿಂದ ವ್ಯವಸ್ಥಿತವಾಗಿ ಬಸ್ ಸಂಪರ್ಕ ಸೇವೆ ದೊರೆತರೆ, ಆಟೋ, ಟ್ಯಾಕ್ಸಿಗಳಿಗೂ ಹೊಡೆತ ಬೀಳಲಿದೆ. ಆಗ, ಜನ ಉದ್ದೇಶಿತ ಮಾರ್ಗಗಳಲ್ಲಿ ಸಂಪೂರ್ಣವಾಗಿ ಸಾರ್ವಜನಿಕ ಸಾರಿಗೆ ಮೊರೆಹೋಗುತ್ತಾರೆ. ಆಗ ವಾಹನ ದಟ್ಟಣೆ ಕಡಿಮೆ ಆಗಲಿದ್ದು, ಅಪಘಾತಗಳ ಸಂಖ್ಯೆ ತಗ್ಗಿಸಲಿಕ್ಕೂ ಕಾರಣವಾಗಲಿದೆ. ಎಂದು ಸಾರಿಗೆ ತಜ್ಞರು ವಿವರಿಸುತ್ತಾರೆ.
ಶೇ. 20-25ರಷ್ಟು ವೃದ್ಧಿ ನಿರೀಕ್ಷೆ“ಜಗತ್ತಿನ ಯಾವುದೇ ಭಾಗದಲ್ಲಿ ಮೆಟ್ರೋದಂತಹ ನಗರ ಸಮೂಹ ಸಾರಿಗೆಗಳು ಬಂದಲ್ಲೆಲ್ಲಾ ವಸತಿ, ವಾಣಿಜ್ಯ ಚಟುವಟಿಕೆಗಳು ಗರಿಗೆದರಿರುವುದನ್ನು ಕಾಣಬಹುದು. ಉದಾಹರಣೆಗೆ ನ್ಯೂಯಾರ್ಕ್, ಲಂಡನ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಶೇ. 30ರಷ್ಟು ವೃದ್ಧಿ ಯಾಯಿತು. ಸಿಲಿಕಾನ್ ಸಿಟಿ ಕೂಡ ಇದಕ್ಕೆ ಹೊರತಾಗಿಲ್ಲ. ಕೆಂಗೇರಿವರೆಗೆ ಮೆಟ್ರೋ ವಿಸ್ತರಣೆ ಆಗಿದ್ದರಿಂದ ಆ ಭಾಗದಲ್ಲಿ ಶೇ.20 ರಿಂದ 25 ರಷ್ಟು ಭೂಮಿ ಬೆಲೆಯಲ್ಲಿ ಏರಿಕೆಕಂಡುಬರಲಿದೆ’ ಎಂದು ಭಾರತೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಘಗಳ ಒಕ್ಕೂಟ (ಕ್ರೆಡಾಯ್)ಬೆಂಗಳೂರು ಘಟಕದ ಅಧ್ಯಕ್ಷ ಭಾಸ್ಕರ್ ಟಿ. ನಾಗೇಂದ್ರಪ್ಪ ಅಭಿಪ್ರಾಯಪಡುತ್ತಾರೆ. ಕೆಂಗೇರಿ ಬಲಭಾಗ, ಆರ್.ಆರ್. ನಗರದ ಆಲದಮರ ರಸ್ತೆ ಬಳಿ ಹತ್ತಾರು ಕೈಗಾರಿಕೆಗಳಿವೆ. ಅಲ್ಲಿ ನೂರಾರು ಕಾರ್ಮಿಕರು ಕೆಲಸ ಮಾಡುತ್ತಾರೆ. ಅವರೆಲ್ಲರಿಗೂ ಸುರಕ್ಷಿತ ಸಾರಿಗೆ ಸೇವೆ ದೊರೆಯುತ್ತದೆ. ಸಮಯವೂ ಉಳಿತಾಯ ಆಗುತ್ತದೆ. ಅದೇ ರೀತಿ,ಕೈಗಾರಿಕೆಗಳಿಗೆ ಬಂದುಹೋಗುವ ಗ್ರಾಹಕರು, ಮೆಟ್ರೋ ಮಾರ್ಗ ಬಂದಿರುವುದರಿಂದ ಮತ್ತಷ್ಟು ಕೈಗಾರಿಕೆ ಗಳು ಅಲ್ಲಿ ಬರಲು ಅನುಕೂಲ ಆಗಲಿದೆ. ಇದೆಲ್ಲವೂಕೈಗಾರಿಕೆ ಬೆಳವಣಿಗೆಗೆ ಪೂರಕ ಎಂದುಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾಮಹಾಸಂಸ್ಥೆ (ಎಫ್ಕೆಸಿಸಿಐ) ಅಧ್ಯಕ್ಷ ಪೆರಿಕಲ್ ಸುಂದರ್ ತಿಳಿಸುತ್ತಾರೆ. ಅಲ್ಲದೆ, ಮೆಟ್ರೋ ಕಾರಿಡಾರ್‌ಗಳು ಟ್ರಾನ್ಸಿಟ್ ಓರಿಯಂಟೆಡ್ ಡೆವಲಪ್‌ಮೆಂಟ್ (ಟಿಒಡಿ) ನೀತಿ ಅಡಿ ಬರುವುದರಿಂದ ಆಸುಪಾಸು ಇರುವ ಕಟ್ಟಡಗಳ ಫ್ಲೋರ್ ಏರಿಯಾ ರೇಷಿಯೋ ಹೆಚ್ಚಳಕ್ಕೂ ಉತ್ತೇಜನ ಸಿಗಲಿದೆ. -ವಿಜಯಕುಮಾರ ಚಂದರಗಿ