ಬಂದಿದೆ. ಇದು ಸಹಜವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್)ದಲ್ಲಿ ಸಂತಸ ಮೂಡಿಸಿದೆ.
Advertisement
ಲಾಕ್‌ಡೌನ್ ನಂತರ ಸೆ. 7ರಂದು ನೇರಳೆ ಮಾರ್ಗದಲ್ಲಿ ಸೀಮಿತ ಅವಧಿಯಲ್ಲಿ ಮೆಟ್ರೋ ಪುನಾರಂಭಗೊಂಡಿತ್ತು. ಅಂದು ಕೇವಲ 3,770 ಜನ ಪ್ರಯಾಣಿಸಿದ್ದರು. ಇದರಿಂದ ಬಂದ ಆದಾಯವು ಕಾರ್ಯಾಚರಣೆಗೆ ಖರ್ಚಾದ ವಿದ್ಯುತ್ ದರಕ್ಕಿಂತ ಅರ್ಧದಷ್ಟೂ ಅಂದರೆ 3,770 ರೂ.ಬಂದಿತ್ತು.ಎರಡನೇಹಂತದಲ್ಲಿ ಸೆ.9ರಂದು ಹಸಿರು ಮಾರ್ಗ ಹಾಗೂ 11ರಂದು ಪೂರ್ಣ ಪ್ರಮಾಣಸಂಚಾರ ಶುರುವಾಗಿತ್ತು. ಅಲ್ಲಿಂದ ಸರಿಯಾಗಿ ಮೂರು ತಿಂಗಳಲ್ಲಿ “ನಮ್ಮ ಮೆಟ್ರೋ’ ಈ ಸಾಧನೆ ಮಾಡಿದೆ.
“ಉದಯವಾಣಿ’ಗೆ ಮಾಹಿತಿ ನೀಡಿದರು. ಇದನ್ನೂ ಓದಿ:ಸಾರಿಗೆ ನೌಕರರ ಮುಷ್ಕರ ಎರಡನೇ ದಿನಕ್ಕೆ : ಪ್ರಯಾಣಿಕರ ಪರದಾಟ
Related Articles
ಬಸ್ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬಿಎಂಆರ್ ಸಿಎಲ್ ಎಲ್ಲ50 ಮೆಟ್ರೋ ರೈಲುಗಳನ್ನುಕಾರ್ಯಾಚರಣೆ ಮಾಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಶುಕ್ರವಾರದಿಂದ ಪ್ರಯಾಣಿಕರ ಅನುಕೂಲಕ್ಕಾಗಿ ದಟ್ಟಣೆ ಅವಧಿಯಲ್ಲಿ ಎಲ್ಲ50 ರೈಲುಗಳ ಕಾರ್ಯಾಚರಣೆ ಮಾಡಲಾಗುವುದು. ಸಾರ್ವಜನಿಕರು ಮೆಟ್ರೋ ಕಾರ್ಡ್‌ಗಳನ್ನು ಬಳಸಿ ಪ್ರಯಾಣಿಸಬಹುದು. ಹೊಸಕಾರ್ಡ್‌ಗಳನ್ನು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ನಿಲ್ದಾಣಗಳಲ್ಲಿ ಹಣಪಾವತಿ ಮಾಡಿ, ಆರಂಭಿಕ ಟಾಪ್ ಅಪ್‌ನೊಂದಿಗೆಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಈ ಸೌಲಭ್ಯ ಎಲ್ಲ ನಿಲ್ದಾಣಗಳಲ್ಲೂ ಲಭ್ಯ ಎಂದು
ನಿಗಮದ ಪ್ರಕಟಣೆ ತಿಳಿಸಿದೆ.
Advertisement
ಪ್ರಯಾಣಿಕರ ಸಂಖ್ಯೆ ಏರಿಕೆಈ ಮಧ್ಯೆ ಶುಕ್ರವಾರಕೂಡ ಬಸ್ ಮುಷ್ಕರದಿಂದ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದ್ದು, ರಾತ್ರಿ 9.50ಕ್ಕೆ ಒಂದು ಲಕ್ಷ ತಲುಪಿತ್ತು. ಆದಾಯದ ನಿಖರ ಮಾಹಿತಿ ಲಭ್ಯ ಇರಲಿಲ್ಲ. ಸದ್ಯಕೊನೆಯ ಮೆಟ್ರೋ ರೈಲು ಸೇವೆ ರಾತ್ರಿ9 ಗಂಟೆಗೆ ನಾಲ್ಕೂ ದಿಕ್ಕುಗಳಿಂದ ಇದೆ.