Advertisement
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 3, ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ 1 ಮತ್ತು ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ 2 ನಮ್ಮ ಕ್ಲಿನಿಕ್ ತೆರೆಯಲು ಸರಕಾರ ಅನುಮತಿ ನೀಡಿದೆ. ಸಿಬಂದಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ನಮ್ಮ ಕ್ಲಿನಿಕ್‌ನಲ್ಲಿ ತಲಾ ಒಬ್ಬರು ವೈದ್ಯರು, ನರ್ಸ್, ಲ್ಯಾಬ್ ಟೆಕ್ನೀಶಿಯನ್ ಹಾಗೂ ಡಿ ಗ್ರೂಪ್ ಸಿಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ನೀಡಲಾಗುವುದು. ರಕ್ತ, ಮೂತ್ರ ಪರೀಕ್ಷೆ ಸೇರಿದಂತೆ ಲ್ಯಾಬ್‌ನಲ್ಲಿ 14 ರೀತಿಯ ಸೇವೆ ದೊರೆಯಲಿದೆ. ಬೆಳಗ್ಗೆ 9ರಿಂದ ಸಂಜೆ 4.30 ರವರೆಗೆ ಈ ಕ್ಲಿನಿಕ್ ಕಾರ್ಯ ನಿರ್ವಹಿಸಲಿದೆ. ಅಗತ್ಯ ಇದ್ದವರಿಗೆ ಇ-ಸಂಜೀವಿನಿ ಮತ್ತು ಟೆಲಿ ಕೌನ್ಸೆಲಿಂಗ್ ವ್ಯವಸ್ಥೆಯೂ ಲಭ್ಯವಿದೆ.
Related Articles
ನಮ್ಮ ಕ್ಲಿನಿಕ್ ಆರಂಭದಿಂದ ನಗರ ಪ್ರದೇಶದ ಜನತೆ, ತ್ವರಿತವಾಗಿ ಉಚಿತ ಆರೋಗ್ಯ ತಪಾ ಸಣೆ, ಚಿಕಿತ್ಸೆ ಪಡೆದು ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಲು ಸಾಧ್ಯವಾಗಲಿದೆ. ಉಡುಪಿ ಜಿಲ್ಲೆಯಲ್ಲಿ ನಮ್ಮ ಕ್ಲಿನಿಕ್ ಸಿಬಂದಿ ನೇಮಕಕ್ಕೆ ಈಗಾಗಲೇ ಸಂದರ್ಶನ ನಡೆಸಲಾಗಿದೆ. ಶೀಘ್ರವೇ ನಮ್ಮ ಕ್ಲಿನಿಕ್‌ಗಳು ಕಾರ್ಯಾರಂಭವಾಗಿ ವೈದ್ಯರು, ಸಿಬಂದಿ ನಗರದ ಜನರ ಆರೋಗ್ಯ ಸೇವೆಗೆ ಲಭ್ಯವಾಗಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿ ಕಾರಿ ಡಾ| ನಾಗಭೂಷಣ ಉಡುಪಿ ತಿಳಿಸಿದ್ದಾರೆ.
Advertisement