ರಾಮನಗರ: ನಗರ ಪ್ರದೇಶದ ಕಾರ್ಮಿಕ ಹಾಗೂ ತಳಮಟ್ಟದ ಸಮುದಾಯಗಳಿಗೆ ತ್ವರಿತವಾಗಿ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಆರಂಭಗೊಂಡಿರುವ ನಮ್ಮ ಕ್ಲಿನಿಕ್‌ಗಳು ಕೆಲ ಸಮಸ್ಯೆಗಳ ನಡುವೆಯೂ ಸಾರ್ವಜನಿಕರಿಗೆ ಆರೋಗ್ಯ ಸೇವೆ ಸಲ್ಲಿಸುವಲ್ಲಿ ಸಫಲಗೊಂಡಿದೆ.
ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಸ್ಥಾಪನೆಗೊಂಡ 114 ನಮ್ಮ ಕ್ಲಿನಿಕ್‌ಗಳ ಪೈಕಿ ರಾಮನಗರ ಜಿಲ್ಲೆಯಲ್ಲಿ 3 ಕ್ಲಿನಿಕ್‌ಗಳನ್ನು ತೆರೆಯಲಾಯಿತು. ಈ ಮೂರು ಕ್ಲಿನಿಕ್‌ಗಳು ಕಳೆದ 8 ತಿಂಗಳ ಅವಧಿಯಲ್ಲಿ 15319 ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸಾರ್ವಜನಿಕರಿಗೆ ತ್ವರಿತವಾಗಿ ಚಿಕಿತ್ಸೆ ಕೊಡಿಸುವ ಕೆಲಸವನ್ನು ಈ ಕ್ಲಿನಿಕ್‌ಗಳು ಮಾಡುತ್ತಿದ್ದು, ನಮ್ಮ ಕ್ಲಿನಿಕ್‌ಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಸೇವೆ ನೀಡಬೇಕು ಎಂಬ ಅಭಿಪ್ರಾಯ ಸಾರ್ವಜನಿಕರದ್ದಾಗಿದೆ.
ಪ್ರತಿದಿನ 35 ಮಂದಿ ಚಿಕಿತ್ಸೆ: ಪ್ರತಿ 50 ಸಾವಿರ ಜನತೆಗೆ ಒಂದು ಆಸ್ಪತ್ರೆ ಇರಬೇಕು ಎಂಬ ಕೇಂದ್ರ ಸರ್ಕಾರದ ಮಹತ್ವಾ ಕಾಂಕ್ಷಿ ಯೋಜನೆಯಾಗಿ ನಮ್ಮ ಕ್ಲಿನಿಕ್‌ಅನ್ನು ಆರಂಭಿಸಲಾಯಿತು. ರಾಮನಗರ, ಮಾಗಡಿ ಮತ್ತು ಚನ್ನಪಟ್ಟಣ ದಲ್ಲಿ ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಲಾಗಿದ್ದು, ಕನಕಪುರದಲ್ಲಿ ಈಗಾಗಲೇ ಹೆಚ್ಚಿನ ಆಸ್ಪತ್ರೆ ಇರುವ ಹಿನ್ನೆಲೆಯಲ್ಲಿ ನಮ್ಮ ಕ್ಲಿನಿಕ್ ತೆರೆದಿಲ್ಲ. ಇನ್ನು ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 30 ರಿಂದ 35 ಮಂದಿ ಪ್ರತಿ ನಮ್ಮ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವೊಮ್ಮೆ ಈ ಸಂಖ್ಯೆ 50ರ ಗಡಿ ತಲುಪಿದ ಉದಾಹರಣೆ ಸಹ ಇದೆ.
ಏನೆಲ್ಲಾ ಸೇವೆ ಸಿಗುತ್ತಿದೆ: ಪ್ರಾಥಮಿಕ ಆರೋಗ್ಯ ಕೇಂದ್ರ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಕ್ಲಿನಿಕ್, ನಗರ ಪ್ರದೇಶದ ಶ್ರಮಿಕ ಹಾಗೂ ಹಿಂದುಳಿದ ವರ್ಗಗಳು ಹೆಚ್ಚು ವಾಸಿಸುವ ಪ್ರದೇಶ ದಲ್ಲಿ ಸ್ಥಾಪನೆಯಾಗಿರುವ ಹಿನ್ನೆಲೆಯಲ್ಲಿ ಕಡುಬಡ ರೋಗಿಗಳಿಗೆ ಅನುಕೂಲ ವಾಗಲಿದೆ. ಸಣ್ಣಪುಟ್ಟ ಚಿಕಿತ್ಸೆ ಗಳಿಗೆ ತಾಲೂಕು ಕೇಂದ್ರ ಆಸ್ಪತ್ರೆ ಅಥವಾ ಸಮು ದಾಯ ಆರೋಗ್ಯ ಕೇಂದ್ರದ ವರೆಗೆ ಅಲೆದಾಡು ವುದನ್ನು ತಪ್ಪಿಸಿದ್ದು, ಸ್ಥಳೀಯವಾಗಿ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡುವ ಕೆಲಸ ನಮ್ಮ ಕ್ಲಿನಿಕ್‌ಗಳಿಂದ ಆಗುತ್ತಿದೆ. ನಮ್ಮ ಕ್ಲಿನಿಕ್‌ನಲ್ಲಿ ವೈದ್ಯರು, ಶುಶ್ರೂಷಕಿ, ಗ್ರೂಪ್ ಡಿ ಸಿಬ್ಬಂದಿ, ಪ್ರಯೋಗ ಶಾಸ್ತ್ರಜ್ಞರು ಇದ್ದು, ಇಲ್ಲಿ ಬಾಣಂತಿಯರ ಆರೈಕೆ, ನವಜಾತ ಶಿಶುಗಳ ಪೋಷಣೆ, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ದೀರ್ಘಕಾಲಿನ ಕಾಯಿಲೆಗಳಿಗೆ ಚಿಕಿತ್ಸೆ, ಮನೋ ಚಿಕಿತ್ಸೆ ನೀಡುವ ಉದ್ದೇಶವನ್ನು ಹೊಂದಿದ್ದು, ವಾರಕ್ಕೊಮ್ಮೆ ನಮ್ಮ ಕ್ಲಿನಿಕ್‌ನಲ್ಲಿ ತಜ್ಞ ವೈದ್ಯರನ್ನು ನಿಯೋಜಿಸಿ ಚಿಕಿತ್ಸೆ ನಿಡುವ ಕಾರ್ಯವನ್ನು ಮಾಡಲಾಗುತ್ತಿದೆ.
ವೈದ್ಯರ ಕೊರತೆ: ರಾಮನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಕ್ಲಿನಿಕ್‌ಗೆ ವೈದ್ಯರ ಕೊರತೆ ಇದ್ದು, ಹೆಚ್ಚುವರಿ ಕಾರ್ಯಬಾರದ ಮೇಲೆ ವೈದ್ಯರನ್ನು ನಿಯೋಜಿಸಲಾಗಿದೆ. ಇನ್ನು ಕೆಲ ನಮ್ಮ ಕ್ಲಿನಿಕ್ ಗಳಲ್ಲಿ ಸಿಬ್ಬಂದಿಯ ಕೊರತೆ ಎದುರಾಗಿದೆ. ಪ್ರಯೋಗ ಶಾಸ್ತ್ರಜ್ಞರ ಕೊರತೆಯಿಂದಾಗಿ ಸಣ್ಣ ಪುಟ್ಟ ಚಿಕಿತ್ಸೆಗಳಿಗೆ ತಾಲೂಕು ಕೇಂದ್ರದ ಆಸ್ಪತ್ರೆಗಳಿಗೆ ಅಲೆದಾಡು ವಂತಾ ಗಿದೆ. ಈ ನ್ಯೂನತೆಗಳನ್ನು ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕಿದೆ.
ರಾತ್ರಿ ವರೆಗೆ ಕಾರ್ಯ ನಿರ್ವಹಿಸಲಿ:
ನಮ್ಮ ಕ್ಲಿನಿಕ್‌ಗಳು ಬೆಳಗ್ಗೆ 9 ಗಂಟೆಯಿಂದ ಸಂಜೆ 4.30 ರವರೆಗೆ ಕಾರ್ಯ ನಿರ್ವಹಿಸುತ್ತಿದ್ದು, ಈ ಸಮಯದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೆಲ ಸಕ್ಕೆ ಹೋಗುತ್ತಿದ್ದು, ರಾತ್ರಿ 8 ಗಂಟೆಯವರೆಗೆ ಅವಕಾಶ ಮಾಡಿಕೊಟ್ಟಿದ್ದೇ ಆದಲ್ಲಿ ಸಾರ್ವ ಜನಿ ಕರಿಗೆ ಹೆಚ್ಚು ಅನುಕೂಲ ವಾಗಲಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮ್ಮ ಕ್ಲಿನಿಕ್‌ನಲ್ಲಿ ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾ ಗುತ್ತಿದೆ. ತಜ್ಞ ವೈದ್ಯರ ಸೇವೆ ದೊರೆಯು ವಂತೆ ಮಾಡಬೇಕು, ಪ್ರತಿದಿನ ರಾತ್ರಿ 8 ಗಂಟೆಯ ವರೆಗ ನಮ್ಮ ಕ್ಲಿನಿಕ್ ತೆರೆದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
-ದಿವ್ಯಶ್ರೀ ತಿರುಮಲೆ, ಮಾಗಡಿ, ಸಾರ್ವಜನಿಕರು
ನಮ್ಮ ಕ್ಲಿನಿಕ್‌ಗಳು ಹೆಚ್ಚು ಪರಿಣಾಮ ಕಾರಿಯಾಗಿ ಕಾರ್ಯ ನಿರ್ವಹಿ ಸುತ್ತಿವೆ. ರಾಮನಗರ ನಮ್ಮ ಕ್ಲಿನಿಕ್‌ಗೆ ಹೆಚ್ಚು ವರಿ ಕಾರ್ಯಭಾರದ ಮೇಲೆ ವೈದ್ಯ ರನ್ನು ನಿಯೋಜಿಸಿದ್ದು, ಖಾಯಂ ವೈದ್ಯರ ನೇಮ ಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ವಾರಕ್ಕೆ ಒಬ್ಬರು ತಜ್ಞ ವೈದ್ಯರನ್ನು ನಿಯೋಜನೆ ಮಾಡಲಾ ಗುತ್ತಿದೆ. ಜನರಿಗೆ ಈ ಕ್ಲಿನಿಕ್‌ಗಳು ಉಪಯುಕ್ತಕಾರಿಯಾಗಿವೆ.
-ಡಾ.ಕಾಂತರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ರಾಮನಗರ
ನಮ್ಮ ಕ್ಲಿನಿಕ್ ಬಡ ಹಾಗೂ ಆರ್ಥಿ ಕವಾಗಿ ಅಶಕ್ತರು, ಕೂಲಿ ಕಾರ್ಮಿ ಕರಿಗೆ ಹೆಚ್ಚು ಅನು ಕೂಲವಾಗುತ್ತಿದೆ. ನಮ್ಮ ಕ್ಲಿನಿಕ್‌ಗೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಮೂರು ಕ್ಲಿನಿಕ್‌ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.
-ಡಾ.ರಾಜು, ಜಿಲ್ಲಾ ಆರ್‌ಸಿಎಚ್ ಅಧಿಕಾರಿ
– ಸು.ನಾ.ನಂದಕುಮಾರ್