Advertisement

ಭೂ ಹಗರಣದಲ್ಲಿ ನ್ಯಾಯಾಧೀಶರು ಭಾಗಿ ವಿಷಾದನೀಯ: ಶಾಸಕ ಎ.ಟಿ.ರಾಮಸ್ವಾಮಿ

05:08 PM Sep 27, 2021 | Team Udayavani |

ಪಿರಿಯಾಪಟ್ಟಣ: ನ್ಯಾಯಾಲಯಗಳಲ್ಲಿ ಪಾವಿತ್ರತೆಯನ್ನು ಕಾಪಾಡಬೇಕಾದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ 84 ನ್ಯಾಯಾಧೀಶರು ನಿವೇಶನ ಹಗರಣದಲ್ಲಿ ಸಿಲುಕಿಕೊಂಡಿರುವುದು ವಿಷಾದನೀಯ ಎಂದು ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.

Advertisement

ತಾಲೂಕಿನ ಮಂಚನಹಳ್ಳಿ ಗ್ರಾಮದ ಸಿರಿ ಅಂಬಾರಿ ಪ್ಯಾಲೆಸ್ ನಲ್ಲಿ ಕರ್ನಾಟಕ ದಲಿತ ಚಳುವಳಿ ನವನಿರ್ಮಾಣ ವೇದಿಕೆ ವತಿಯಿಂದ ಏರ್ಪಡಿಸಿದ್ದ ನಮ್ಮ ಭೂಮಿ ನಮ್ಮದು ಎಂಬ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರಿನ ಸುತ್ತಮುತ್ತ ಕೋಟ್ಯಾಂತರ ಮೌಲ್ಯದ ಸರ್ಕಾರಿ ಭೂಮಿಯನ್ನು ದುರಾಸೆಯ ಜನರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಕೆ ಮಾಡಿ ಆನಂದದಿಂದ ಬದುಕುತ್ತಿದ್ದಾರೆ. ಇಂಥ ಅಕ್ರಮ ಎಸಗಿದವರು ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಈ ಬಗ್ಗೆ ಸದನದಲ್ಲಿ ಹಲವಾರು ಬಾರಿ ಒತ್ತಾಯಿಸಿದ್ದರೂ ಹಾಗೂ 39 ದಿನಗಳ ಕಾಲ ಪ್ರತಿಭಟಿನೆ ನಡೆಸಿದರೂ ಪ್ರಯೋಜನವಾಗಲಿಲ್ಲ, ಇಂತಹ ಪ್ರಕರಣಗಳಲ್ಲಿ ಒಬ್ಬರಿಗೂ ಇದುವರೆಗೆ  ಶಿಕ್ಷೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಹೋರಾಟವನ್ನು ನಡೆಸಲು ಎಷ್ಟರಮಟ್ಟಿಗೆ ಸಿದ್ಧತೆ ಆಗಿದೆ ಎಂಬ ಆತ್ಮವಲೋಕನವೂ ನಡೆಯಬೇಕು ಕಾನೂನು ಉಳ್ಳವರ ಪಾಲಿಗೆ ಉದಾರವಾಗಿಯೂ, ಬಡವರ ಪಾಲಿಗೆ ಕಠಿಣವಾಗಿಯೂ ಮಾರ್ಪಾಡಾಗಿದೆ ನಮ್ಮನ್ನು ಈ ಹಿಂದೆ ಈಸ್ಟ್ ಇಂಡಿಯಾ ಕಂಪನಿ ಆಳುತಿತ್ತು ಈಗ ಈಟ್ ಇಂಡಿಯಾ ಕಂಪನಿ ಮನಸ್ಥಿತಿ  ಇರುವವರು ಆಳುತಿದ್ದಾರೆ ಎಂದು ವ್ಯಂಗ್ಯವಾಡಿ ಬೆಂಗಳೂರಿನ ಸುತ್ತಮುತ್ತ ಐದು ಸಾವಿರ ಅನಧಿಕೃತ ಬಡಾವಣೆಗಳಿವೆ ಈ ವಿಷಯದಲ್ಲಿ ನ್ಯಾಯಾಲಯಗಳ ಹೆಸರುಗಳು ಸೇರ್ಪಡೆಯಾಗಿದೆ. ಹೋರಾಟವನ್ನು ಸಂಘಟಿಸುವರಲ್ಲಿ ಕೆಲವರು ಹಗರಣಗಳನ್ನು ನಡೆಸಿದವರ ಪರವಾಗಿ ನಿಲ್ಲುವ ನಿರ್ಧಾರಗಳನ್ನು ಕಾಣಬಹುದಾಗಿದೆ ಹೋರಾಟವನ್ನು ಯಾರು ಸ್ವಾರ್ಥಕ್ಕೆ ಬಳಸಿಕೊಳ್ಳಬಾರದು ಹೋರಾಟಗಾರರು ಹೋರಾಟದ ಆಶಯಕ್ಕೆ ವಿರುದ್ಧವಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು ಎಂದರು.

ಇದನ್ನೂ ಓದಿ: ಐಪಿಎಲ್ ನಡುವೆಯೇ ಕೆಕೆಆರ್ ತೊರೆದು ಭಾರತಕ್ಕೆ ಆಗಮಿಸಿದ ಕುಲದೀಪ್ ಯಾದವ್

ಪ್ರಜಾವಾಣಿ ಬೆಂಗಳೂರು ವಿಭಾಗದ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಮಾತನಾಡಿ ಇನ್ನೊಮ್ಮೆ ಚಳುವಳಿಗಾರರಿಂದಾಗಲಿ ಅಥವಾ ರಾಜಕಾರಣಿಗಳಿಂದಾಗಲೀ ಹೈಜಕ್ ಮಾಡುವುದಕ್ಕೆ ಅವಕಾಶ ನೀಡಬೇಡಿ, 70 ರಿಂದ 90 ರ ದಶಕದವರೆಗೂ ನಡೆದಿರುವ ಹಲವು ಚಳುವಳಿಗಳ ವೈಫಲ್ಯದ ಪಾಠಗಳ ಅರಿವಿನಿಂದಲೇ ಹೊಸ ಚಳುವಳಿಗಳನ್ನು ಕಟ್ಟಲು ಇದು ಸಕಾಲ, ಈಗಲೂ ಭೂ ಹೋರಾಟಕ್ಕೆ ಬೆಂಬಲವಿದ್ದು ಚಳುವಳಿಗಳನ್ನು ಹೇಗೆಲ್ಲಾ ಸಂಘಟಿಸಬೇಕು ಎಂಬುದಕ್ಕೆ ರಾಜ್ಯದಲ್ಲಿ ಅನೇಕ ನಿರ್ದೇಶನಗಳಿವೆ ಭೂ ಹೋರಾಟವು ಮೈಸೂರು ಜಿಲ್ಲೆ ಮೀರಿ ರಾಜ್ಯದ್ಯಂತ ವಿಸ್ತರಿಸಬೇಕು ಎಂದರು.

Advertisement

ಕಾರ್ಯಕ್ರಮದಲ್ಲಿ ಸ್ಥಾನೀಯ ಸಂಪಾದಕ ಕೆ ನರಸಿಂಹಮೂರ್ತಿ., ಡಿಡ್ ಸಂಸ್ಥೆಯ ಮುಖ್ಯಸ್ಥ ಡಾ ಎಸ್.ಶ್ರೀಕಾಂತ್, ಕರ್ನಾಟಕ ದಲಿತ ಚಳುವಳಿ ನವನಿರ್ಮಾಣ ವೇದಿಕೆಯ ಮುಖಂಡರಾದ ಎಚ್.ಗೋವಿಂದಯ್ಯ, ಹರಿಹರಾನಂದ ಸ್ವಾಮಿ,  ಬಂಗ್ವಾದಿ ನಾರಾಯಣಪ್ಪ,  ಪಿ ಸಂಬಯ್ಯ,  ಮುಖಂಡ ಶಿವಯೋಗಿ,  ಸಿರಿ ಅಂಬಾರಿ ಪ್ಯಾಲೇಸ್ ಮಾಲೀಕ ಎಚ್.ಟಿ.ರವಿ, ಟಿ.ಈರಯ್ಯ,  ಸೀಗೂರು ವಿಜಯಕುಮಾರ್, ಎಚ್.ಡಿ.ರಮೇಶ್, ಪಿ.ಪಿ.ಮಹದೇವ್,  ನೆರಳಕುಪ್ಪೆ ನವೀನ್, ಮುನಾವರ್ ಪಾಷ, ಪಿ.ಪಿ.ಪುಟ್ಟಯ್ಯ, ಡಿಎಸ್ ನಾಗೇಂದ್ರ., ಧರ್ಮಣ್ಣ  ಸೇರಿದಂತೆ ಮತ್ತಿತರರು ಹಾಜರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next