ಉಡುಪಿ: ಮಣಿಪಾಲ ಮಾಹೆಯ ಸ್ಕೂಲ್ ಆಫ್ ಕಮ್ಯುನಿಕೇಶನ್‌ನಲ್ಲಿ (ಎಸ್‌ಒಸಿ) “ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್’ (ಸಿಡಬ್ಲೂಸಿ) ಸಹಯೋಗದಲ್ಲಿ “ನಮ್ಮ ಅಂಗಡಿ’ ಎಂಬ ಮಾರಾಟ ಮೇಳ ಮತ್ತು ವಸ್ತು ಪ್ರದರ್ಶನ ಮಾ. 8, 9 ಮತ್ತು 10ರಂದು ಜರಗಲಿದೆ ಎಂದು ಎಸ್‌ಒಸಿ ನಿರ್ದೇಶಕಿ ಡಾ| ಪದ್ಮರಾಣಿ ತಿಳಿಸಿದ್ದಾರೆ.
ಸಿಡಬ್ಲೂéಸಿ ಯೋಜನೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ “ನಮ್ಮ ಭೂಮಿ’ ಸಂಸ್ಥೆಯ ಕಲಾವಿದರು ತಯಾರಿಸಿದ ವಸ್ತುಗಳು ಮೇಳದಲ್ಲಿ ಪ್ರದರ್ಶನಗೊಳ್ಳಲಿದ್ದು ಬೆಳಗ್ಗೆ 9ಕ್ಕೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಉದ್ಘಾಟಿಸಲಿದ್ದಾರೆ.
ನೂತನ ಟ್ರೆಂಡ್‌ಗಳಿಗೆ ಅನುಗುಣವಾಗಿ ವಸ್ತುಗಳನ್ನು ವಿನ್ಯಾಸ ಮಾಡಲಾಗಿದೆ. ಕೈಯಿಂದ ತಯಾರಿಸಿದ ಆಭರಣಗಳು, ಗೃಹಾಲಂಕಾರದ ವಸ್ತುಗಳು, ಸ್ಥಳೀಯ ಆಹಾರ ಪದಾರ್ಥಗಳನ್ನು ಗ್ರಾಹಕರು ಖರೀದಿಸಬಹುದಾಗಿದೆ. ಈ ಮೇಳದಲ್ಲಿ ಸಂಗ್ರಹವಾಗುವ ಹಣವನ್ನು “ನಮ್ಮ ಭೂಮಿ’ ಸಂಸ್ಥೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಲಾಗುತ್ತದೆ. ಸಿಡಬ್ಲೂéಸಿ 1986ರಲ್ಲಿ ಆರಂಭಗೊಂಡಿದ್ದು ಲಾಭರಹಿತ ಸಂಸ್ಥೆಯಾಗಿದೆ. ಕಾರ್ಮಿಕ ಮತ್ತು ದುರ್ಬಲ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಿದೆ. “ನಮ್ಮಭೂಮಿ’ ಎಂಬ ಸಮುದಾಯ ಕ್ಯಾಂಪಸ್ ವಸತಿ ಮೂಲಕ ದುರ್ಬಲ ಮಕ್ಕಳನ್ನು ಸಬಲರನ್ನಾಗಿಸಲು ಸಿಡಬ್ಲೂéಸಿ ಮುಂದಾಗಿದೆ. ಆ ಸಂಸ್ಥೆಗೆ ನೆರವಾಗುವ ಉದ್ದೇಶದಿಂದ ಪ್ರತೀ ವರ್ಷ ಎಸ್‌ಒಸಿ “ನಮ್ಮ ಅಂಗಡಿ’ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟು ಕೈ ಜೋಡಿಸುತ್ತಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಎಸ್‌ಒಸಿ ಕಾರ್ಪೊರೇಟ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಡಾ| ಪದ್ಮಾ ಕುಮಾರ್ ಪತ್ರಿಕಾಗೋಷ್ಠಿಯಲ್ಲಿದ್ದರು.