ಅಬುಧಾಬಿ: “ಎ’ ವಿಭಾಗದ ಅರ್ಹತಾ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ 6 ವಿಕೆಟ್ ಗೆಲುವು ಸಾಧಿಸಿದ ನಮೀಬಿಯಾ “ಸೂಪರ್-12′ ರೇಸ್‌ನಲ್ಲಿ ತಾನೂ ಇದ್ದೇನೆ ಎಂದು ಸಾರಿದೆ.
ಬುಧವಾರದ ಪಂದ್ಯದಲ್ಲಿ ನೆದರ್ಲೆಂಡ್ಸ್ 4 ವಿಕೆಟಿಗೆ 164 ರನ್ ಗಳಿಸಿದರೆ, ನಮೀಬಿಯಾ 19 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 166 ರನ್ ಬಾರಿಸಿತು.
ಕೆಳ ಕ್ರಮಾಂಕದ ಆಟಗಾರ ಡೇವಿಡ್ ವೀಸ್ 5 ಸಿಕ್ಸರ್, 4 ಬೌಂಡರಿ ನೆರವಿನೊಂದಿಗೆ ಅಜೇಯ 66 ರನ್ ಸೂರೆಗೈದು ನಮೀಬಿಯಾಕ್ಕೆ ಗೆಲುವು ತಂದಿತ್ತರು. ಇದು ನಮೀಬಿಯಾಕ್ಕೆ ಒಲಿದ ಮೊದಲ ಜಯವಾದರೆ, ನೆದರ್ಲೆಂಡ್ಸ್ ಅನುಭವಿಸಿದ ಸತತ 2ನೇ ಸೋಲುಖಾತೆ ತೆರೆದ ಬಾಂಗ್ಲಾ ಸ್ಕಾಟ್ಲೆಂಡ್ ಎದುರು ಆಘಾತಕಾರಿ ಸೋಲನುಭವಿಸಿದ ಬಾಂಗ್ಲಾದೇಶ, ತನ್ನ ದ್ವಿತೀಯ ಪಂದ್ಯದಲ್ಲಿ ಆತಿಥೇಯ ಒಮಾನ್ ವಿರುದ್ಧ 26 ರನ್ನುಗಳಿಂದ ಗೆದ್ದು ಅಂಕದ ಖಾತೆ ತೆರೆಯಿತು.
ಬಾಂಗ್ಲಾ 20 ಓವರ್‌ಗಳಲ್ಲಿ 153 ರನ್ ಗಳಿಸಿದರೆ, ಒಮಾನ್ 9 ವಿಕೆಟಿಗೆ 127 ರನ್ ಮಾಡಿ ಶರಣಾಯಿತು. ಮುಸ್ತಫಿಜುರ್ 4, ಶಕಿಬ್ 3 ವಿಕೆಟ್ ಕಿತ್ತು ಮಿಂಚಿದರು. ಬಾಂಗ್ಲಾ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದ ಮೊಹಮ್ಮದ್ ನೈಮ್ 64 ರನ್ ಹೊಡೆದರು. ಶಕಿಬ್ ಬ್ಯಾಟಿನಿಂದ 42 ರನ್ ಹರಿದು ಬಂತು.
ಇದನ್ನೂ ಓದಿ:ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು