Advertisement

T20 World Cup; ಸತತ ಮೂರನೇ ಬಾರಿಗೆ ಅರ್ಹತೆ ಪಡೆದ ನಮೀಬಿಯಾ

06:21 PM Nov 28, 2023 | Team Udayavani |

ವಿಂಡ್ಹೋಕ್: ಟಿ20 ವಿಶ್ವಕಪ್ ಆಫ್ರಿಕಾ ಪ್ರದೇಶ ಕ್ವಾಲಿಫೈಯರ್ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ನಮೀಬಿಯಾ 2024ರ ಐಸಿಸಿ ಟಿ20 ವಿಶ್ವಕಪ್ ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದೆ.

Advertisement

ವಿಂಡ್ಹೋಕ್ ನಲ್ಲಿ ನಡೆಯುತ್ತಿರುವ ಕೂಟದಲ್ಲಿ ಇದುವರೆಗೆ ಆಡಿದ ಐದು ಪಂದ್ಯಗಳಲ್ಲಿ ಎಲ್ಲವನ್ನೂ ಗೆದ್ದ ನಮೀಬಿಯಾ ತಂಡವು ಮುಖ್ಯ ಕೂಟಕ್ಕೆ ಅರ್ಹತೆ ಪಡೆದಿದೆ. ಇಂದು ನಡೆದ ಪಂದ್ಯದಲ್ಲಿ ತಾಂಜೇನಿಯಾ ವಿರುದ್ಧ 58 ರನ್ ಅಂತರದ ಜಯ ಗಳಿಸಿತು.

ಉಳಿದಿರುವ ಸ್ಥಾನಕ್ಕೆ ಉಗಾಂಡ, ಕೀನ್ಯಾ, ಜಿಂಬಾಬ್ವೆ ಮತ್ತು ನೈಜೀರಿಯಾ ಇನ್ನೂ ಹೋರಾಟ ನಡೆಸುತ್ತಿದೆ. ಪುರುಷರ ಟಿ20 ವಿಶ್ವಕಪ್‌ ನಲ್ಲಿ ನಮೀಬಿಯಾ ಸತತ ಮೂರನೇ ಆವೃತ್ತಿಯಲ್ಲಿ ಆಡುತ್ತಿದೆ. 2021 ರಲ್ಲಿ, ನಮೀಬಿಯಾ ಗುಂಪು ಹಂತದಲ್ಲಿ ಎರಡನೇ ಸ್ಥಾನ ಗಳಿಸಿದ ನಂತರ ಸೂಪರ್ 12 ಗೆ ತಲುಪುವಲ್ಲಿ ಯಶಸ್ವಿಯಾಗಿದ್ದರು.

ಈ ಅರ್ಹತಾ ಸುತ್ತಿನಲ್ಲಿ ಇದುವರೆಗೆ ಜಿಂಬಾಬ್ವೆ, ಉಗಾಂಡ, ರವಾಂಡಾ, ಕೀನ್ಯಾ, ತಾಂಜೇನಿಯಾ ವಿರುದ್ಧ ಆಡಿದ ಪಂದ್ಯಗಳಲ್ಲಿ ನಮೀಬಿಯಾ ಗೆಲುವು ಕಂಡಿದೆ.

Advertisement

ಟಿ20 ವಿಶ್ವಕಪ್ 2024 ಕೂಟಕ್ಕೆ ಇಲ್ಲಿಯವರೆಗೆ 19 ತಂಡಗಳು ಅರ್ಹತೆ ಪಡೆದಿವೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ನಲ್ಲಿ ವಿಶ್ವಕಪ್ ನಡೆಯುವ ಕಾರಣ ಈ ಎರಡೂ ತಂಡಗಳು ಅರ್ಹತೆ ಪಡೆಯುತ್ತವೆ. ಉಳಿದ ತಂಡಗಳೆಂದರೆ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಅಫ್ಘಾನಿಸ್ತಾನ್, ಬಾಂಗ್ಲಾದೇಶ, ಐರ್ಲೆಂಡ್, ಸ್ಕಾಟ್ಲೆಂಡ್, ಪಾಪುವ ನ್ಯೂ ಗಿನಿಯಾ, ಕೆನಡಾ, ನೇಪಾಳ, ಓಮನ್, ನಮೀಬಿಯಾ.

Advertisement

Udayavani is now on Telegram. Click here to join our channel and stay updated with the latest news.

Next