Advertisement

ಆಯುಷ್ಮಾನ್‌ ಭಾರತ: 111 ಆಸ್ಪತ್ರೆಗಳ ಮಾನ ಹರಾಜು

08:04 PM Oct 01, 2019 | mahesh |

ಹೊಸದಿಲ್ಲಿ: “ಪ್ರಧಾನ ಮಂತ್ರಿಯವರ ಜನ ಆರೋಗ್ಯ ಯೋಜನೆ’ ಅಥವಾ “ಆಯುಷ್ಮಾನ್‌ ಭಾರತ್‌’ (ಎಬಿ-ಪಿಎಂಜೆಎವೈ) ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಆಸ್ಪತ್ರೆಗಳ ಬಗ್ಗೆ ಬಹಿರಂಗವಾಗಿ ವಾಗ್ಧಂಡನೆ ವಿಧಿಸುವ ಕಾರ್ಯಕ್ಕೆ ಕೇಂದ್ರ ಸರಕಾರ ಚಾಲನೆ ನೀಡಿದೆ. ಮೊದಲ ಹಂತದಲ್ಲಿ 111 ಆಸ್ಪತ್ರೆಗಳನ್ನು ಗುರುತಿಸಿ ಅವುಗಳ ಹೆಸರುಗಳನ್ನು ಆರೋಗ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ.

Advertisement

“ಎಬಿ-ಪಿಎಂಜೆಎವೈ’ ಜಾರಿಗೆ ಬಂದು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಎ) ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಸಚಿವ ಡಾ. ಹರ್ಷವರ್ಧನ್ ಅವರು, ಎಬಿ-ಪಿಎಂಜೆಎವೈ ಯೋಜನೆಯನ್ನು ದುರುಪಯೋಗ ಮಾಡುವ ಅಥವಾ ಆ ಯೋಜನೆಯ ವಿಚಾರವಾಗಿ ಸಾರ್ವಜನಿಕರಿಗೆ, ಸರಕಾರಕ್ಕೆ ವಂಚನೆ ಮಾಡುವ ಆಸ್ಪತ್ರೆಗಳನ್ನು ಕ್ಷಮಿಸುವ ಮಾತೇ ಇಲ್ಲ ಎಂದು ಎಚ್ಚರಿಸಿದರು.

“ಎಬಿ-ಪಿಎಂಜೆಎವೈ ಯೋಜನೆಯನ್ನು ಹೊಸ ಆವೃತ್ತಿಯ ಸಾಫ್ಟ್ವೇರ್‌ ವ್ಯಾಪ್ತಿಯಲ್ಲಿ ತರಲಾಗುತ್ತಿದ್ದು, ಅದು ಸಾರ್ವಜನಿಕರಿಗೆ ಮತ್ತಷ್ಟು ಉಪಯೋಗಗಳನ್ನು ಕಲ್ಪಿಸಲಿದೆ”ಎಂದು ಸಚಿವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next