ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರ ಡುವುದನ್ನು ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳಿಗೆ ಪೂರಕವಾಗಿ ಮಸೀದಿಗಳಲ್ಲಿ ಶುಕ್ರವಾರದ ವಿಶೇಷ ಪ್ರಾರ್ಥ ನೆಯ (ಜುಮಾ ನಮಾಜ್ ) ಸಮಯವನ್ನು ಕಡಿತಗೊಳಿಸಲು ಸೂಚಿಸಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಬುಧವಾರ ಪ್ರಕಟಣೆ ಹೊರಡಿಸಿದೆ.
ಈ ಕುರಿತು ಕರ್ನಾಟಕದ ಅಮಿರೆ ಶರಿಯತ್ ಮೌಲಾನ ಸರ್ಗೀ ಅಹ್ಮದ್ ರಶಾದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಧಾರ್ಮಿಕ ಮುಖಂಡರ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಡಾ. ಮಹ್ಮದ್ ಯೂ ಸುಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶುಕ್ರವಾರದ ಪ್ರಾರ್ಥನೆಯನ್ನು ಮುಂದಿನ ಮೂರು ವಾರಗಳ ಕಾಲ 15 ನಿಮಿಷಕ್ಕೆ ಸಿಮೀತಗೊಳಿಸಬೇಕು. ಈ ವೇಳೆ ಸಾರ್ವ ಜನಿಕವಾಗಿ ಧ್ವನಿವರ್ಧಕಗಳನ್ನು ಬಳಸಬಾರದು. ಪ್ರತಿ ದಿನದ ಐದು ಹೊತ್ತಿನ ನಮಾಜ್ ವೇಳೆ ಮಸೀದಿಯಲ್ಲಿ ಶುಚಿತ್ವ ಕಾಪಾಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು.
ಪ್ರಾರ್ಥನೆ ಯನ್ನು ಆದಷ್ಟು ಕಡಿಮೆ ಸಮಯದಲ್ಲಿ ಮುಗಿ ಸಬೇಕು. ಬಳಿಕ ಸಾಧ್ಯವಾದಷ್ಟು ಬೇಗ ಅಲ್ಲಿಂದ ತೆರಳಬೇಕು. ಮಸೀದಿ ಹಾಗೂ ದರ್ಗಾಗಳ ಆವರಣಗಳನ್ನು ಸ್ವತ್ಛವಾಗಿಡಬೇಕು. ಹೆಚ್ಚು ಜನರು ಸೇರಲು ಅಥವಾ ತಂಗಲು ಅವಕಾಶ ಮಾಡಿಕೊಡಬಾರದು. ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿ ಸರ್ಕಾರ ಹೊರಡಿಸಿರುವ ಆದೇಶ ದಂತೆ ಮದರಸಾಗಳಿಗೆ ರಜೆ ನೀಡಬೇಕು.
ಧಾರ್ಮಿಕ ಸಭೆ ಹಾಗೂ ಉರುಸ್ ಆಚರಣೆ ವೇಳೆ ಹೆಚ್ಚು ಜನರು ಸೇರುವುದನ್ನು ನಿರ್ಬಂಧಿಸ ಬೇಕು. ಉಸಿರಾಟದ ಸಮಸ್ಯೆ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜನ ಮಸೀದಿ, ದರ್ಗಾ ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ಬಾರ ದಂತೆ ಮನವಿ ಮಾಡಲಾಗಿದೆ. ಕೊರೊನಾ ವೈರಸ್ ಸೋಂಕು ಗಂಡಾಂತರದಿಂದ ಪಾರು ಮಾಡುವಂತೆ ವಿಶೇಷ ದುವಾ (ಪ್ರಾರ್ಥನೆ) ಮಾಡುವಂತೆ ಮನವಿ ಮಾಡಲಾಗಿದೆ.