ಶಿವಮೊಗ್ಗ: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ದೇಶದಲ್ಲಿ ಲಾಕ್ ಡೌನ್ ಆದೇಶವಿರುವ ಕಾರಣ ಸಾಮೂಹಿಕ ನಮಾಜ್ ಪ್ರಾರ್ಥನೆ ಮಾಡಬಾರದು ಎಂದು ಸರಕಾರ ಆದೇಶಿಸಿದೆ. ಆದರೆ ಇದನ್ನು ಉಲ್ಲಂಘಿಸಿ ಸಾಮೂಹಿಕ ನಮಾಜ್ ಮಾಡುತ್ತಿದ್ದ ಘಟನೆ ಜಿಲ್ಲೆಯ ಆಯನೂರಿನಲ್ಲಿ ನಡೆದಿದೆ.
ಆಯನೂರು ಸಮೀಪದ ಕೆಸವಿನಕಟ್ಟೆ ಗ್ರಾಮದಲ್ಲಿ ಸರಕಾರದ ಆದೇಶಕ್ಕೆ ವಿರುದ್ಧವಾಗಿ ಸಾಮೂಹಿಕವಾಗಿ ನಮಾಜ್ ಮಾಡಲಾಗುತಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ನಮಾಜ್ ಮಾಡಲು ಹೋಗಿದ್ದವರನ್ನು ಪೊಲೀಸರು ಒಳಗೆ ಲಾಕ್ ಮಾಡಿದರು.
ನಮಾಜ್ ನಲ್ಲಿ ಭಾಗವಹಿಸಿದ್ದವರ ಪೈಕಿ ಏಳು ಜನರು ಜ್ವರದಿಂದ ಬಳಲುತ್ತಿದ್ದರು. ಜ್ವರದಿಂದ ಬಳಲುತ್ತಿರುವವರನ್ನು ಕ್ವಾರೈಂಟೈನ್ ಮಾಡಲು ಖಾಸಗಿ ಬಸ್ ನಲ್ಲಿ ಶಿವಮೊಗ್ಗದ ಮೆಗ್ಗಾನ್ ಗೆ ಪೊಲೀಸರು ಕಳುಹಿಸಿದರು.
ಅವರೊಂದಿಗೆ ಸಂಪರ್ಕ ಹೊಂದಿದ್ದ 70 ಜನರನ್ನು ಬೇರೆಡೆ ಕ್ವಾರೈಂಟೈನ್ ಮಾಡಲು ನಿರ್ಧಾರ ಮಾಡಲಾಗಿದೆ.