ಉಡುಪಿ: ಕಾನೂನು ಸೇವೆಗಳ ಉಚಿತ ಮಾಹಿತಿ ಪಡೆಯಲು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ನಲ್ಸಾ (Nalsa) ಆ್ಯಪ್ ಸಿದ್ಧಪಡಿಸಲಾಗಿದೆ. ದೂರುದಾರರು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ದೂರು ದಾಖಲಿಸಬಹುದಾಗಿದೆ.
ಆಯಾ ರಾಜ್ಯ, ಜಿಲ್ಲೆಗಳನ್ನು ನಮೂದಿ ಸುವುದರಿಂದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸುಲಭದಲ್ಲಿ ದೂರುದಾರರ ಬಗ್ಗೆ ತಿಳಿಯಲಿದೆ. ಬಳಿಕ ಪ್ರಾಧಿಕಾರದ ವತಿಯಿಂದ ದೂರು ದಾರರ ವಿವರ ಪಡೆದು ಪ್ರಕರಣವನ್ನು ಕೈಗೆತ್ತಿಕೊಳ್ಳಲಾಗುತ್ತದೆ.
ಉಚಿತ ನೆರವು:
ವ್ಯಕ್ತಿಯೊಬ್ಬ ಕಾನೂನು ರೀತ್ಯಾ ಹಕ್ಕನ್ನು ಪಡೆದುಕೊಳ್ಳಲು ನ್ಯಾಯಾಲ ಯದ ಮೊರೆ ಹೋಗ ಬೇಕಾದ ಸಂದರ್ಭ ಬಂದಾಗ ಅಥವಾ ವ್ಯಕ್ತಿಯೊಬ್ಬನ ವಿರುದ್ಧ ಬೇರೊಬ್ಬರು ನ್ಯಾಯಾ ಲಯದಲ್ಲಿ ಪ್ರಕರಣ ಹೂಡಿದಾಗ ಆ ಪ್ರಕರಣದಲ್ಲಿ ಆತ ಪಾಲ್ಗೊಂಡು ತನ್ನ ಹಕ್ಕು ಸಮರ್ಥಿಸಿಕೊಳ್ಳಲು ಬೇಕಾದಾಗ ಅಥವಾ ವ್ಯಕ್ತಿ ಕಾನೂನು ರೀತ್ಯಾ ಸೌಲಭ್ಯವನ್ನು ಪಡೆಯಲು ಯಾವುದೇ ಕಚೇರಿಗೆ ಅರ್ಜಿ ಸಲ್ಲಿಸಬೇಕಾದಾಗ ಅಥವಾ ಬೇರೆ ಯಾರಾದರೂ ತನ್ನ ವಿರುದ್ಧ ಸಲ್ಲಿಸಿದ ಅರ್ಜಿಯನ್ನು ವಿರೋಧಿಸಬೇಕಾದಾಗ ಉಚಿತ ಕಾನೂನು ಸಲಹೆ ಕೊಡುವುದು, ಜತೆಗೆ ಆತನ ಪರವಾಗಿ ಕಾನೂನು ಸೇವೆಗಳ ಪ್ರಾಧಿಕಾರದ ವೆಚ್ಚದಲ್ಲಿ ನ್ಯಾಯವಾದಿ ಯೊಬ್ಬರನ್ನು ನೇಮಿಸಲಾಗುತ್ತದೆ. ಆತನು ಯಾವುದೇ ನ್ಯಾಯಾಲ ಯದಲ್ಲಿ ಅಥವಾ ಕಚೇರಿಯಲ್ಲಿ ಮಾಡಬಹುದಾದ ಎಲ್ಲ ಖರ್ಚನ್ನು ಪ್ರಾಧಿಕಾರದ ವತಿಯಿಂದ ನೀಡ ಲಾಗುತ್ತದೆ.
ಏನು ಅನುಕೂಲ?:
ನ್ಯಾಯವಾದಿಗಳನ್ನು ಭೇಟಿ ಮಾಡದೆ ಆ್ಯಪ್ ಮೂಲಕ ಸುಲಭದಲ್ಲಿ ಕಾನೂನು ನೆರವು ಪಡೆಯಬಹುದು. ಈಗಾಗಲೇ ಈ ಆ್ಯಪ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ದೂರು ಸಲ್ಲಿಕೆಯಾದ ಕೂಡಲೇ ಪ್ರಾಧಿಕಾರದ ಕಾರ್ಯ ಆರಂಭಗೊಳ್ಳುತ್ತದೆ.
ಉಚಿತವಾಗಿ ಕಾನೂನು ನೆರವು ಬಯಸುವವರು ನಲ್ಸಾ ಆ್ಯಪ್ ಮೂಲಕ ಸುಲಭ ರೀತಿಯಲ್ಲಿ ದೂರು ದಾಖಲಿಸಲು ಅವಕಾಶ ಇದೆ. ಪ್ರಾಧಿಕಾರವೇ ಅವರನ್ನು ಸಂಪರ್ಕಿಸಿ ಅಗತ್ಯ ನೆರವು ನೀಡಲಿದೆ.
– ಶರ್ಮಿಳಾ ಎಸ್., ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ