Advertisement

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

02:51 PM Apr 19, 2024 | Team Udayavani |

ಪ್ರೇಮಗೀಮ ಜಾನೆದೋ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಯುವ ಪ್ರತಿಭೆ ಗೌತಮ್‌ ಆರ್‌ ಇದೀಗ ನಾಲ್ಕನೇ ಆಯಾಮದ ಹಿಂದೆ ಬಿದ್ದಿದ್ದಾರೆ. ಪ್ರೇಮಗೀಮ ಜಾನೆದೋ ಚಿತ್ರ ಮೂಲಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದ ಗೌತಮ್‌ ಈಗ ನಾಯಕನ ಜೊತೆ ನಿರ್ದೇಶನದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಅವರ ನಿರ್ದೇಶನದ “ನಾಲ್ಕನೇ ಆಯಾಮಾ’ ಚಿತ್ರ ಇಂದು ತೆರೆಕಾಣುತ್ತಿದೆ.

Advertisement

ಗೌತಮ್‌ ನಟಿಸಿ ನಿರ್ದೇಶಿಸಿರುವ ನಾಲ್ಕನೇ ಆಯಾಮದಲ್ಲಿ ನಾಯಕಿಯಾಗಿ ರಚನಾ ಇಂದರ್‌ ಸಾಥ್‌ ಕೊಟ್ಟಿದ್ದಾರೆ. ಈ ಚಿತ್ರದ ಮೂಲಕ ಮಾಸ್ಟರ್‌ ಆನಂದ್‌ ಮಗಳು ಪಟಾಕಿ ಅಂಜನಿ ವಂಶಿಕಾ ಕಶ್ಯಪ್‌ ಚಿತ್ರರಂಗಕ್ಕೆ ಹೆಜ್ಜೆ ಇಟ್ಟಿದ್ದು, ಅಮಿತ್‌ ಗೌಡ ಯಶಸ್ವಿನಿ ಎಂ, ಬಲ ರಾಜವಾಡಿ, ವಿನ್ಸೆಂಟ್‌, ಮಂಜು ಸ್ವಾಮಿ, ಚಂದ್ರಕಲಾ ಮೋಹನ್‌, ಬೇಬಿ ನಿಷಿತಾ ತಾರಾಬಳಗದಲ್ಲಿದ್ದಾರೆ.

ಹಾರರ್‌ ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ನಾಲ್ಕನೇ ಆಯಾಮ’ ಸಿನಿಮಾಗೆ ಅರ್ಜುನ್‌ ಜನ್ಯ ಸಂಗೀತ, ಅಭಿನಂದನ್‌ ಕಶಪ್ಯ ಹಿನ್ನೆಲೆ ಸಂಗೀತ ಹಾಗೂ ಸೌಂಡ್‌ ಡಿಸೈನ್‌ ಮಾಡಿದ್ದು, ಕೆ ಭ್ರಮೇಂದ್ರ ಹಾಗೂ ಅರುಣ್‌ ಛಾಯಾಗ್ರಹಣ, ಉಗ್ರಂ ಶ್ರೀಕಾಂತ್‌ ಸಂಕಲನವಿದೆ. ಇಂಚರಾ ಕ್ರಿಯೇಷನ್‌ನಡಿ ಅರುಣಾ ಮುತ್ತು ರಾಯಪ್ಪ ನಿರ್ಮಾಣ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next