Advertisement
ಎಲ್ಲ ಜಿಲ್ಲೆ ಗಳಿಗೆ ನಿರಂತರ ಪ್ರವಾಸ ಕೈಗೊಂಡು ಪಕ್ಷವನ್ನು ತಳ ಮಟ್ಟದಲ್ಲಿ ಸಂಘಟಿ ಸುವ ಪ್ರಯತ್ನವನ್ನು ನಳಿನ್ 2 ವರ್ಷಗಳಲ್ಲಿ ಮಾಡಿದ್ದರು.
Related Articles
Advertisement
ಗ್ರಾ.ಪಂ. ಚುನಾವಣೆಗಳಲ್ಲಿ ಜಯ ಗಳಿಸಿದ ಕಾರ್ಯಕರ್ತರನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸ ಮಾಡಿದ್ದು, ವಿಧಾನಸಭಾ ಕ್ಷೇತ್ರವಾರು ಗ್ರಾ.ಪಂ. ಸದಸ್ಯರ ಸಮಾವೇಶ ನಡೆಸಿ, ಅವರಲ್ಲಿ ಉತ್ಸಾಹ ತುಂಬಲಾಗಿತ್ತು. ಇದೂ ರಾಜ್ಯಾದ್ಯಂತ ಪಕ್ಷ ಬಲವರ್ಧನೆಗೆ ಸಹಾಯಕವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಕೊರೊನಾ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರೇ ಆರೋಗ್ಯ ಸ್ವಯಂ ಸೇವಕರಾಗಿ ಗ್ರಾಮೀಣ ಪ್ರದೇಶದ ಪ್ರತೀ ಮನೆಗೂ ಭೇಟಿ ನೀಡಿ, ಆರೋಗ್ಯ ಜಾಗೃತಿ ಮೂಡಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
ನಳಿನ್ ಅವರ ಯಶಸ್ವಿ ಕಾರ್ಯ ನಿರ್ವಹಣೆಗೆ ಪಕ್ಷದ ಹಿರಿಯ ನಾಯಕರು ಶುಭ ಹಾರೈಸಿದ್ದಾರೆ.
ಸಮನ್ವಯಕಾರ :
ನಳಿನ್ ಅಧ್ಯಕ್ಷರಾದ ಸಂದರ್ಭ ದಲ್ಲಿ ಬಿಜೆಪಿಯಲ್ಲಿ ವಲಸಿಗರು ಮತ್ತು ಮೂಲ ಕಾರ್ಯಕರ್ತರು ಎಂಬ ಮಾತಿತ್ತು. ಆದರೆ ನಳಿನ್ ಎಲ್ಲರನ್ನೂ ಸಮಾನ ವಾಗಿ ಪರಿಗಣಿಸಿ ವಲ ಸಿಗ ರಿಗೆ ತಾವು ಹೊರಗಿ ನವರು ಎನ್ನುವ ಭಾವ ಮೂಡ ದಂತೆ ನಿರ್ವಹಿಸಿರುವುದು ಪಕ್ಷ ಒಗ್ಗಟ್ಟಾಗಿರಲು ಕಾರಣ ವಾಗಿದೆ. ಅವರ ಸರಳ ಮತ್ತು ಸೂಕ್ಷ್ಮ ನಡೆಯೂ ಪಕ್ಷದ ವರ್ಚಸ್ಸು ವೃದ್ಧಿಗೆ ಕಾರಣ ಎಂಬ ಅಭಿಪ್ರಾಯ ಕಾರ್ಯಕರ್ತರ ವಲಯದಲ್ಲಿದೆ.