Advertisement

ಅಪ್ಪನ ಹತ್ಯೆ ಬಗ್ಗೆ ಪ್ರಶ್ನಿಸಿ ಕಣ್ಣೀರು ಹಾಕಿದ್ದ ಪ್ರಿಯಾಂಕಾ! ರಾಜೀವ್‌ ಹಂತಕಿ ನಳಿನಿ

11:46 AM Nov 14, 2022 | Team Udayavani |

ಚೆನ್ನೈ: “2008ರಲ್ಲಿ ಪ್ರಿಯಾಂಕಾ ವಾದ್ರಾ ಅವರು ಜೈಲಿನಲ್ಲಿ ನನ್ನನ್ನು ಭೇಟಿಯಾದಾಗ, ಅವರ ಅಪ್ಪ ರಾಜೀವ್‌ ಗಾಂಧಿ ಹತ್ಯೆಗೆ ಕುರಿತು ಹಲವು ಪ್ರಶ್ನೆಗಳನ್ನು ನನಗೆ ಕೇಳಿದ್ದರು. ನನಗೆ ಎಷ್ಟು ಗೊತ್ತಿತ್ತೋ, ಅಷ್ಟನ್ನು ಹೇಳಿದ್ದೆ. ಆಗ ಅವರಿಗೆ ದುಃಖ ಉಮ್ಮಳಿಸಿ ಬಂದು, ನನ್ನೆದುರೇ ಕಣ್ಣೀರಿಟ್ಟಿದ್ದರು…’

Advertisement

ಇದು ಶನಿವಾರವಷ್ಟೇ ಜೈಲಿನಿಂದ ಬಿಡುಗಡೆಯಾದ ರಾಜೀವ್‌ ಹಂತಕರಲ್ಲಿ ಒಬ್ಬರಾದ ನಳಿನಿ ಶ್ರೀಹರನ್‌ ಹೇಳಿದ ಮಾತು. ಚೆನ್ನೈನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನಿ, “ನನ್ನ ಬಿಡುಗಡೆಗೆ ಸಹಾಯ ಮಾಡಿದ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌, ಗಾಂಧಿ ಕುಟುಂಬ ಮತ್ತು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಅವಕಾಶ ಸಿಕ್ಕರೆ ಇವರೆಲ್ಲರನ್ನು ಭೇಟಿಯಾಗಲು ಸಿದ್ಧಳಿದ್ದೇನೆ’ ಎಂದು ಹೇಳಿದ್ದಾರೆ.

ಇದೇ ವೇಳೆ, ಸೋನಿಯಾಗಾಂಧಿಯವರನ್ನು ಭೇಟಿಯಾಗುತ್ತೀರಾ ಎಂಬ ಪ್ರಶ್ನೆಗೆ ನಳಿನಿ, “ಅಯ್ಯೋ ದೇವರೇ, ದಯವಿಟ್ಟು ಬೇಡ’ ಎಂದು ಪ್ರತಿಕ್ರಿಯಿಸಿದ್ದಾರೆ. 2000ನೇ ಇಸವಿಯಲ್ಲಿ ಸೋನಿಯಾ ಅವರೇ ನಳಿನಿಯನ್ನು ಕ್ಷಮಿಸಿ, ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದರು. ಅದರಿಂದಾಗಿಯೇ ಅಪರಾಧಿಗಳ ಶಿಕ್ಷೆಯ ಅವಧಿ ಕಡಿತಗೊಂಡಿತ್ತು.

ಇದೇ ವೇಳೆ, ರಾಜೀವ್‌ಗಾಂಧಿ ಹತ್ಯೆ ಸಂದರ್ಭದಲ್ಲಿ ನಡೆದ ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕ್ಷಮೆ ಕೋರಲು ಬಯಸುತ್ತೇನೆ. ನಾವು ಅದರ ಬಗ್ಗೆಯೇ ಯೋಚಿಸಿಕೊಂಡು ಇಷ್ಟು ವರ್ಷ ಕಳೆದಿದ್ದೇವೆ ಎಂದೂ ನಳಿನಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next