ಮಂಗಳೂರು: ಸಿದ್ಧರಾಮಯ್ಯ ಸೆಗಣಿ ಎತ್ತಿದ್ದೇನೆ ಎಂದು ಹೇಳುತ್ತಾರೆ. ಸೆಗಣಿ ಎತ್ತಿದ್ದರಿಂದ ಏನೂ ಆಗುವುದಿಲ್ಲ, ಗೋವಿನ ಆರಾಧನೆ ಮಾಡಬೇಕು. ಸೆಗಣಿ ಎತ್ತಿ ನಾಟಕ ಮಾಡುವುದರಿಂದ ಪ್ರಯೋಜನ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರವಾದ ಹಿನ್ನಲೆಯಲ್ಲಿ ಮಂಗಳೂರಿನ ಬಿಜೆಪಿ ಕಚೇರಿ ಮುಂಭಾಗ ಗೋ ಪೂಜೆ ನಡೆಸಲಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಭಾರತೀಯ ಸಂಸ್ಕೃತಿಯಲ್ಲಿ ಗೋಮಾತೆಗೆ ವಿಶೇಷ ಸ್ಥಾನವಿದೆ. ಹೀಗಾಗಿ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧದ ಮಸೂದೆ ಮಂಡನೆ ಮಾಡಿದೆ. ಇದಕ್ಕಾಗಿ ಯಡಿಯೂರಪ್ಪ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ದೇಶದಲ್ಲಿ ಗೋ ಸಂಸ್ಕೃತಿ ಉಳಿಯೋದಕ್ಕೆ ಈ ಮಸೂದೆ ಬಂದಿದೆ ಎಂದರು.
ಇದನ್ನೂ ಓದಿ:“ಎಲ್ಲಿದ್ದರು ಇವರೆಲ್ಲಾ”? ರೈತ ನಾಯಕರ ಮುಂದೆ ಸಾಲು ಸಾಲು ಪ್ರಶ್ನೆಯಿಟ್ಟ ಕುಮಾರಸ್ವಾಮಿ
ಕಾಂಗ್ರೆಸ್ ಈ ಹಿಂದೆ ಮಸೂದೆ ತೆಗೆಯುವಾಗ ಚರ್ಚೆ ಮಾಡಿತ್ತಾ? ಈಗ ಚರ್ಚೆ ಬೇಕು ಎನ್ನುವುದು ಕಾಂಗ್ರೆಸ್ ನ ತುಷ್ಠೀಕರಣ ನೀತಿ. ಈ ಹಿಂದೆ ತಲ್ವಾರ್ ಹಿಡಿದು ಗೋ ಕಳ್ಳತನ ಮಾಡಿದವರ ಬಂಧನ ಮಾಡಿಲ್ಲ. ಕಾಂಗ್ರೆಸ್ ಗೋ ಹತ್ಯೆಕೋರರ ಪರವಾಗಿದೆ. ಕಾಂಗ್ರೆಸ್ ರೈತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ ಎಂದರು.