ಕುರುಗೋಡು: ಪ್ರಸಕ್ತ ಸಾಲಿನಲ್ಲಿ ಬರುವ 2022-23 ರಾಜ್ಯ ಬಜೆಟ್ ನಲ್ಲಿ ಹೆಚ್ಚಿನ ಒತ್ತು ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಿ, ರೈತರ ಹಿತ ಕಾಪಾಡಿ ಎಂದು ಎಮ್ಮಿಗನೂರಿನ ಹಂಪಿ ಸಾವಿರ ದೇವರ ಮಠದ ಶ್ರೀ ವಾಮದೇವಾ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು
ಕುರುಗೋಡು ಸಮೀಪದ ಹಂಪಿ ಸಾವಿರದೇವರ ಮಠಕ್ಕೆ ಸೋಮವಾರ ಸಂಜೆ ಬಿ.ಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬೇಟಿ ನೀಡಿ ವೇಳೆಯಲ್ಲಿ ಸಲಹೆ ಸೂಚಿಸಿ ಮಾತನಾಡಿ, ಭಾರತ ದೇಶ ಕೃಷಿ ಅವಲಂಬಿತವಾಗಿದ್ದು, ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗವ ಯೊಜನೆಗಳನ್ನು ಜಾರಿಗೆ ತಂದು ರೈತರ ಬದುಕಿಗೆ ಬೆಳೆಕು ಚೆಲ್ಲಬೇಕು ಎಂದರು.
ನಂತರ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ವಾಮಿಗಳಿಂದ ಸನ್ನಾನ ಸ್ವೀಕರಿಸಿ ಮಾತನಾಡಿ, ರಾಜ್ಯದಲ್ಲಿ ವೀರಶೈವ ಮಠಗಳು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡಿಗೆಗಳು ನೀಡಿದ್ದು, ಪ್ರತಿಯೊಬ್ಬರು ಮಠ ಮಂದಿರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಸಂಸ್ಕಾರ ವಂತರಾಗಬೇಕು ಎಂದರು.
ಈ ವೇಳೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಮಾಜಿ ಶಾಸಕ ಟಿ.ಎಚ್. ಸುರೇಶಬಾಬು, ಬಿ. ಮಹೇಶಗೌಡ, ಬಿ. ಸದಾಶಿವಪ್ಪ, ಎಳ್ಳರ್ತಿ ರಾಘವೇಂದ್ರ ರೆಡ್ಡಿ, ಎಚ್.ಪಿ. ಕೃಷ್ಷ, ರಾಮಕೃಷ್ಷರಾಜು, ಗ್ರಾಪಂ ಸದಸ್ಯ ಲೋಕೇಶ ಹುಗಾರ್, ಶಿವನೇಗೌಡ್ರ ರಾಮಪ್ಪ, ಜಡೇಪ್ಪ, ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತ ಇದ್ದರು.