Advertisement

ಮೀಸಲು ಹೋರಾಟದಲ್ಲಿ ಪಾಲ್ಗೊಳ್ಳುವ ನಾಯಕರಿಗೆ ನಿರ್ಬಂಧವಿಲ್ಲ- ನಳಿನ್ ಕುಮಾರ್ ಕಟೀಲ್

03:15 PM Feb 17, 2021 | Team Udayavani |

ವಿಜಯಪುರ : ರಾಜ್ಯದಲ್ಲಿ ವಿವಿಧ ಸಮುದಾಯಗಳು ನಡೆಸುತ್ತಿರುವ ಮೀಸಲು ಹೋರಾಟದಲ್ಲಿ ಪಾಲ್ಗೊಳ್ಳದಂತೆ ಪಕ್ಷದಿಂದ ನಿರ್ಬಂಧ ಹೇರಿಲ್ಲ ಹಾಗೂ ಸೂಚನೆ ನೀಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.

Advertisement

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೆ.ಎಸ್. ಈಶ್ವರಪ್ಪ, ಶ್ರೀರಾಮುಲು, ಯತ್ನಾಳ್  ಇವರೆಲ್ಲರ ಮೀಸಲು ಹೋರಾಟದ ಕುರಿತು ಪಕ್ಷ ಗಮನಿಸುತ್ತಿದೆ. ಪಕ್ಷದ ಹೈಕಮಾಂಡ್ ಯಾವಾಗ ಏನು ತೀರ್ಮಾನದ ಅಗತ್ಯ ಇದೆಯೋ ಅದನ್ನು ಮಾಡುತ್ತದೆ ಎಂದರು.

ಎಲ್ಲ ನಾಯಕರನ್ನೂ ಕರೆದು ಮಾತನಾಡಲಾಗುತ್ತಿದೆ. ಎಲ್ಲ ಸಮುದಾಯಗಳಿಗೆ ನ್ಯಾಯ, ಗೌರವ ಕೊಡುವ ಕೆಲಸ ನಡೆಯುತ್ತಿದೆ. ಸರ್ಕಾರ,‌ ಮುಖ್ಯಮಂತ್ರಿ, ಪಕ್ಷ ಈ ಕೆಲಸ ಮಾಡುತ್ತದೆ ಎಂದರು.

ಇದನ್ನೂ ಓದಿ : ಸರ್ಕಾರದ ಮುಂದೆ ಲವ್ ಜಿಹಾದ್ ನಿಷೇಧದ ಗುರಿ: ನಳಿನ್ ಕುಮಾರ್ ಕಟೀಲ್

ಪಕ್ಷದ ನಾಯಕತ್ವದ ವಿರುದ್ಧ ಮಾತನಾಡುತ್ತಿರುವ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಬಿಜೆಪಿ ಶಿಸ್ತು ಸಮಿತಿ ನೋಟೀಸ್ ನೀಡಿದೆ. ನೋಟೀಸ್ ತಲುಪಿದ ಮೇಲೆ ಅವರೇ ಉತ್ತರಿಸುತ್ತಾರೆ.

Advertisement

ದೊಡ್ಡ ಸ್ಥಾನದಲ್ಲಿ ಇರುವವರು ಸಣ್ಣತನ ವ್ಯಕ್ತಿತ್ವ ಪ್ರದರ್ಶಿಸಬಾರದು. ಭಾರತೀಯ ಸಂವಿಧಾನ, ಸುಪ್ರೀಂ ಕೋರ್ಟ್ ಮೇಲೆ ನಂಬಿಕೆ ಇರುವ ಯಾರೂ ರಾಮಜನ್ಮ ಭೂಮಿಯ ಕುರಿತು ನಕಾರಾತ್ಮಕವಾಗಿ ಪ್ರತಿಕ್ರಿಯಿಸಲಾರ ಎಂದು ಮಾಜಿ ಸಿ.ಎಂ. ಗಳಾದ ಕುಮಾರಸ್ವಾಮಿ, ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದರು

Advertisement

Udayavani is now on Telegram. Click here to join our channel and stay updated with the latest news.

Next