Advertisement
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಗಲಭೆಗೆ ಟ್ವಿಟ್ ಕಾರಣವಾಗಿದೆ. ಟ್ವಿಟ್ ಮಾಡಿದ್ದಕ್ಕೆ ನನ್ನ ವಿರೋಧ ಇದೆ. ಟ್ವಿಟ್ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಟ್ವಿಟ್ ಮಾಡಿದ್ದರ ನೆಪದಲ್ಲಿ ಗಲಭೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದರು.
Related Articles
Advertisement
ಈ ಹಿಂದೆ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮಾತ್ರ ಇದ್ದರು. ಮುಖ್ಯಮಂತ್ರಿವಾಗಿ ವರ್ತನೆ ಮಾಡಲಿಲ್ಲ. ಅಧಿಕಾರದಲ್ಲಿ ಇದ್ದಾಗ ಗಲಭೆಗಳು ಆದಾಗ ಕಠಿಣ ಕ್ರಮ ತೆಗೆದುಕೊಂಡಿದ್ದರೆ ಇವತ್ತು ಇದು ನಡೆಯುತ್ತಿದ್ದಿಲ್ಲ. 21 ಹಿಂದೂ ಕಾರ್ಯಕರ್ತರ ಹತ್ಯೆ ಆದಾಗ ದುಷ್ಕರ್ಮಿಗಳ ಮೇಲೆ ಕ್ರಮ ತಗೆದುಕೊಳ್ಳಲಿಲ್ಲ.ಎಸ್ ಡಿಪಿಐ, ಸಿಮಿ ಸಂಘಟನೆಯವರ ಮೇಲಿನ ಕೇಸ್ ಗಳಿಗೆ ಬಿ ರಿಪೋರ್ಟ್ ಹಾಕಿದರು. ಇದರಿಂದ ಅವರಿಗೆ ಧೈರ್ಯ ಬಂತು ಆ ಧೈರ್ಯವೇ ಇವತ್ತು ಇಂತಹ ಕೃತ್ಯಗಳನ್ನು ಮಾಡಿಸುತ್ತಿದೆ ಎಂದರು.
ಈ ಕಾರಣಗಳಿಂದ ಸಿದ್ದರಾಮಯ್ಯ ಮೌನವಾಗಿದ್ದು, ಹಿಂದೆ ಅವರದ್ದೆ ಶಕ್ತಿ ಇದೆ. ಈ ಘಟನೆಗೆ ಸಿದ್ದರಾಮಯ್ಯ ನೇರ ಕಾರಣ ಎಂದು ನಾನು ಹೇಳಲ್ಲ. ಆದರೆ ಸಿದ್ದರಾಮಯ್ಯ ಸರಿಯಾಗಿ ಆಡಳಿತ ನೀಡದಿದ್ದರಿಂದ ಇಂಥ ಘಟನೆ ಜರುಗುತ್ತಿವೆ ಎಂದರು.
ಇದನ್ನೂ ಓದಿ: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ: 17 ಮಂದಿಯ ಮೇಲೆ ಎಫ್ಐಆರ್, ನಾಲ್ವರ ಬಂಧನ
ಸಿದ್ದರಾಮಯ್ಯ ಅವರು ಮತಕ್ಕಾಗಿ ಓಲೈಕೆ ರಾಜಕಾರಣ ಮಾಡಿದೆ. ಕಾಂಗ್ರೆಸ್ ಸಹ ಓಲೈಕೆ ರಾಜಕಾರಣ ಮಾಡಿದೆ. ಪಾದರಾಯನಪುರ ಗಲಭೆ ಆದಾಗ ಜಮೀರ್ ಅಹಮ್ಮದ್ ಮೆರವಣಿಗೆ ಮಾಡಿದರು. ಡಿಜೆ ಹಳ್ಳಿ ಗಲಭೆಯಲ್ಲಿ ಸತ್ತವರನ್ನ ಅಮಾಯಕರು ಅಂತಾರೆ. ಡಿ ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರು, ನವೀನ್ ಯಾವ ಪಾರ್ಟಿಯವರು. ನವೀನ್ ಕಾಂಗ್ರೆಸ್ ಪಕ್ಷದವನು. ನಮ್ಮ ಬಳಿ ಪೂರ್ತಿಯಾದ ದಾಖಲೆಗಳಿವೆ. ಪೊಲೀಸ್ ಠಾಣೆ, ವಾಹನಗಳಿಗೆ ಬೆಂಕಿ ಹಾಕಿದವರು ಮಾಧ್ಯಮ ಪ್ರತಿನಿಧಿಗಳ ಮೇಲೂ ಹಲ್ಲೆ ಮಾಡಿದ್ದಾರೆ. ಭಯವನ್ನು ಸೃಷ್ಟಿ ಮಾಡುವವನು ಭಯೋತ್ಪಾದಕ. ಕಾಂಗ್ರೆಸ್ ಶಾಸಕ ದಲಿತರು. ನೀವು ದಲಿತರ ಪರ ನಿಲ್ತಿರಾ ಅಥವಾ ಭಯೋತ್ಪಾದಕರಿಗೆ ಬೆಂಗಾವಲಾಗಿ ನೀಲ್ತೀರಾ ಎಂದು ಕಾಂಗ್ರೆಸ್ ಗೆ ಪ್ರಶ್ನಿಸಿದರು.