Advertisement
ಯಡಿಯೂರಪ್ಪ ನಿವಾಸಕ್ಕೆ ಪಕ್ಷದ ಪ್ರತಿನಿಧಿಯಾಗಿ ಆಗಮಿಸಿ, ಸಂಘಟನಾತ್ಮಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆಂದು ಹೇಳಲಾಗುತ್ತಿದೆಯಾದರೂ ಸಂಪುಟ ಪುನರ್ ರಚನೆ ಹಾಗೂ ಇನ್ನಿತರ ವಿದ್ಯಮಾನಗಳ ಬಗ್ಗೆಯೂ ಮಾತುಕತೆ ನಡೆಸಿರಬಹುದು ಎಂದು ಹೇಳಲಾಗುತ್ತಿದೆ.
ಬಿಜೆಪಿ ಮೂಲಗಳ ಪ್ರಕಾರ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗೆ ಪ್ರಕ್ರಿಯೆ ಆರಂಭಿಸಲಾಗಿದ್ದು, ಈ ದಿಶೆಯಲ್ಲಿ ಯಡಿಯೂರಪ್ಪ ನವರ ಮಾರ್ಗದರ್ಶನವನ್ನು ಕೋರಲಾಗಿದೆ. ಸದ್ಯದಲ್ಲೇ ರಾಜ್ಯ ಪ್ರವಾಸಕ್ಜೆ ಪಕ್ಷದ ವತಿಯಿಂದಲೇ ಸಿದ್ಧತೆ ಆರಂಭಿಸಲಾಗಿದ್ದು, ಯಡಿಯೂರಪ್ಪ ಅವರು ಪಾಲ್ಗೊಳ್ಳಬೇಕಾದ ದಿನಾಂಕ ಇತ್ಯಾದಿ ವಿಚಾರಗಳ ಬಗ್ಗೆ ಮನವಿ ಮಾಡಲು ಖುದ್ದು ರಾಜ್ಯಾಧ್ಯಕ್ಷರೇ ಅವರ ನಿವಾಸಕ್ಕೆ ಭೇಟಿ ನೀಡಿದ್ದರು ಎಂದು ತಿಳಿದು ಬಂದಿದೆ. ಈ ಮೂಲಕ ಬಿಜೆಪಿ ಅಧಿಕೃತವಾಗಿ ಚುನಾವಣೆ ಸಿದ್ಧತೆಗೆ ಇಳಿದಂತಾಗಿದ್ದು, ಯಡಿಯೂರಪ್ಪ ಮಾರ್ಗದರ್ಶನದಲ್ಲೇ ತಯಾರಿಗೆ ಇಳಿದಿದೆ.