ಉಡುಪಿ ; ದೇಶಿಯ ವಿಮಾಯಾನಗಳು ಇಂದಿನಿಂದ ದೇಶದಲ್ಲಿ ಆರಂಭವಾಗುತ್ತವೆ. ಯಾವುದೇ ರಾಜ್ಯದ ಒತ್ತಡಕ್ಕೆ ಒಳಗಾಗಿ ಈ ನಿರ್ಧಾರವನ್ನು ಕೇಂದ್ರ ಕೈಗೊಂಡಿಲ್ಲ. ಬದಲಾಗಿ ಹೊರರಾಜ್ಯಗಳಲ್ಲಿರುವ ಕನ್ನಡಿಗರ ಕಷ್ಡಕ್ಕೆ ಸ್ಪಂದಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದೇವೆ. ಮಹಾರಾಷ್ಟ್ರ ರಾಜ್ಯದಲ್ಲಿ ಇರುವವರು ಕೂಡ ನಮ್ಮ ಸಹೋದರರೆ, ಅಲ್ಲಿ ನಮ್ಮ ಕನ್ನಡಿಗರು ಇದ್ದಾರೆ. ಅವರ ಕಷ್ಟಕ್ಕೂ ಸ್ಪಂದಿಸಬೇಕಾದುದು ನಮ್ಮ ಕರ್ತವ್ಯ ಎಂದು ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಉಡುಪಿಯಲ್ಲಿ ಸೋಮವಾರ ಉಚಿತ ಸಿಟಿ ಬಸ್ ಗೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಇನ್ನು ಮುಂದಿನ ದಿನಗಳಲ್ಲಿ ಕೋವಿಡ್ 19 ಜತೆಯಲ್ಲೆ ಜೀವನ ನಡೆಸುವ ಅನಿವಾರ್ಯತೆಗೆ ದೇಶವಾಸಿಗಳು ಒಳಗಾಗಿದ್ದೇವೆ.
ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಕೆಲ ಷರತ್ತುಗಳನ್ನು ಅಳವಡಿಸಿಕೊಂಡು ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗಿದೆ. ಹೊರ ರಾಜ್ಯಗಳಿಂದ ಆಗಮಿಸುವ ಮತ್ತು ತೆರಳುವ ವಿಮಾನ ಯಾನದ ಪ್ರಯಾಣಿಕರು ಸರಕಾರದ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಕೋವಿಡ್ ನಿಯಂತ್ರಣಕ್ಕಿರುವ ಸಾಮಾಜಿಕ ಅಂತರ, ಮುಖಗವಸು, ಕ್ವಾರಂಟೈನ್ ಮುಂತಾದ ಕಟ್ಟು ನಿಟ್ಟಿನ ಕ್ರಮಗಳಿಗೆ ಒಪ್ಪಿ ಬರುವವರಿಗೆ ಮಾತ್ರ ಅವಕಾಶ ಎಂದವರು ತಿಳಿಸಿದರು.