Advertisement

ಸಂಘಟನೆಗಳಿಂದ ಸಮಾಜ ಕಟ್ಟುವ ಕೆಲಸವಾಗಲಿ: ನಳಿನ್‌ಕುಮಾರ್‌ ಕಟೀಲು

11:29 PM Jul 10, 2019 | Sriram |

ಕಾವೂರು: ಸಮಾಜ ಕಟ್ಟುವ ಕೆಲಸ ಸಂಘಟನೆಗಳ ಮೂಲಕ ಆಗಬೇಕಿದೆ. ಈ ನಿಟ್ಟಿನಲ್ಲಿ ಕಾವೂರು ಬಂಟರ ಸಂಘವು ಮಾದರಿಯಾಗಿದೆ ಎಂದು ಸಂಸದ ನಳಿನ್‌ಕುಮಾರ್‌ ಕಟೀಲು ಹೇಳಿದರು.

Advertisement

ಕಾವೂರು ಸಹಕಾರಿ ಸಭಾಂಗಣದಲ್ಲಿ ಜರಗಿದ ಕಾವೂರು ಬಂಟರ ಸಂಘದ 18ನೇ ವಾರ್ಷಿಕ ಮಹಾಸಭೆಯಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಂಘವು ಉತ್ತಮವಾದ ಸಮಾ ಜಮುಖೀ ಚಟುವಟಿಕೆಗಳನ್ನು ಹಮ್ಮಿ ಕೊಳ್ಳುತ್ತಿರುವುದು ಶ್ಲಾಘನೀಯ. ತನ್ನ ಇತಿಮಿತಿಯೊಳಗೆ ಬಂಟರ ಸಂಘದ ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಾಮಾ ಣಿಕ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.

ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ್‌ ಶೆಟ್ಟಿ ಅಡ್ಯಾರ್‌ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ಡಾ| ಭರತ್‌ ಶೆಟ್ಟಿ ವೈ., ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್‌ ರೈ ಮಾಲಾಡಿ, ಪ್ರ. ಕಾರ್ಯದರ್ಶಿ ವಸಂತ ಶೆಟ್ಟಿ, ವರ್ಲ್ಡ್ಬಂಟ್ಸ್‌ ವೆಲ್ಫೆàರ್‌ ಟ್ರಸ್ಟ್‌ ಸಂಘಟನ ಕಾರ್ಯದರ್ಶಿ ರಾಜಗೋಪಾಲ ರೈ ಮುಖ್ಯ ಅತಿಥಿಗಳಾಗಿದ್ದರು.

Advertisement

ರಾಮಣ್ಣ ಶೆಟ್ಟಿ ಮುಗಿಪು, ಕಿಶೋರ್‌ ರೈ ಮರಕಡ, ಎಂ. ಎಸ್‌. ಶೆಟ್ಟಿ ಸರಪಾಡಿ, ಭಾಸ್ಕರ ಕೊಂಡೆ, ಕಾವೂರು ಬಂಟರ ಸಂಘದ ಉಪಾಧ್ಯಕ್ಷರಾದ ನಿಟ್ಟೆ ಶಶಿಧರ್‌ ಶೆಟ್ಟಿ, ಗಿರಿಜಾತೆ ಆರ್‌. ಭಂಡಾರಿ, ಸುಧಾ ಕರ ಶೆಟ್ಟಿ ಮುಗ್ರೋಡಿ, ವಾಮನ ಶೆಟ್ಟಿ ಉರುಂದಾಡಿ, ತುಕಾರಾಮ್‌ ಶೆಟ್ಟಿ ತೋಡ್ಲ, ಕ್ರೀಡಾ ಕಾರ್ಯದರ್ಶಿ ಚಂದ್ರರಾಜ್‌ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಗಣೇಶ್‌ ಮಲ್ಲಿ, ಸಂಘಟನ ಕಾರ್ಯದರ್ಶಿ ಸುಧಾಕರ ಆಳ್ವ, ಮಹಿಳಾ ವಿಭಾಗ ಕಾರ್ಯದರ್ಶಿ ರೇಖಾ ವಿ. ಶೆಟ್ಟಿ, ಪ್ರಭಾಕರ ಶೆಟ್ಟಿ, ಚಂದ್ರ ಶೆಟ್ಟಿ ಕೂಳೂರು ಉಪಸ್ಥಿತರಿದ್ದರು.

ಕಾವೂರು ಬಂಟರ ಸಂಘದ ಪ್ರ.ಕಾರ್ಯದರ್ಶಿ ಅವಿನಾಶ್‌ ನಾಯ್ಕ ಸ್ವಾಗತಿಸಿದರು. ಖಜಾಂಚಿ ಲಕ್ಷ್ಮೀ ನಾರಾಯಣ ಶೆಟ್ಟಿ ಲೆಕ್ಕ ಪತ್ರ ಮಂಡಿಸಿದರು. ಮಹಿಳಾ ವಿಭಾಗ ಅಧ್ಯಕ್ಷೆ ಸುಜಯಾ ಎಸ್‌. ಶೆಟ್ಟಿ ವಂದಿಸಿದರು.

ಸದಾಶಿವ ಶೆಟ್ಟಿ ಬೊಲ್ಪುಗುಡ್ಡೆ ನಿರೂಪಿಸಿದರು. ಬಳಿಕ ಬಂಟರ ಸಂಘ ಮಹಿಳಾ ವಿಭಾಗದಿಂದ ಮನೋರಂಜನೆ ಕಾರ್ಯಕ್ರಮ ಜರಗಿತು.

ವಿದ್ಯಾರ್ಥಿವೇತನ ವಿತರಣೆ
ಪ್ರತಿಭಾನ್ವಿತರಿಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿವೇತನ ವಿತರಿಸ ಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next