Advertisement

ವಿವಿಧ ರೈಲ್ವೇ ಅಭಿವೃದ್ಧಿಗೆ ಆಗ್ರಹಿಸಿ ನಳಿನ್‌ ಮನವಿ

10:28 AM Jun 28, 2019 | keerthan |

ಮಂಗಳೂರು: ಪ್ರತ್ಯೇಕ ಮಂಗಳೂರು ರೈಲ್ವೇ ವಿಭಾಗ ರಚನೆ, ಮಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ಹೊಸ ಸುಸಜ್ಜಿತ ಕಟ್ಟಡ ನಿರ್ಮಾಣ ಸೇರಿದಂತೆ ಜಿಲ್ಲೆಯಲ್ಲಿ ರೈಲ್ವೇ ಅಭಿವೃದ್ಧಿಗೆ ಸಂಬಂ ಧಿಸಿದ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ಮತ್ತು ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರಿಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಹೊಸದಿಲ್ಲಿಯಲ್ಲಿ ಗುರುವಾರ ಮನವಿ ಸಲ್ಲಿಸಿದ್ದಾರೆ.

Advertisement

ಮಂಗಳೂರು – ಬೆಂಗಳೂರು ಮಧ್ಯೆ ಪ್ರಸ್ತುತ ವಾರಕ್ಕೆ 3 ದಿನ ಸಂಚರಿಸುವ (ಮಂಗಳೂರು-ಯಶವಂತಪುರ ಎಕ್ಸ್‌ಪ್ರೆಸ್‌ 16585/86) ರೈಲನ್ನು ಪ್ರತಿನಿತ್ಯ ಓಡಿಸಬೇಕು, ಮಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ 3 ಮತ್ತು 4ನೇ ಪ್ಲಾಟ್‌ಫಾರಂ ನಿರ್ಮಾಣ ತ್ವರಿತಗೊಳಿಸಬೇಕು, ಮಂಗಳೂರು -ಮೀರಜ್‌ ಮಹಾಲಕ್ಷ್ಮೀ ಎಕ್ಸ್‌ ಪ್ರಸ್‌ ಪುನರಾರಂಭಿಸಿ ಮುಂಬಯಿ (ಎಂಸಿಎಸ್‌ಟಿ) ವರೆಗೆ ವಿಸ್ತರಿಸಬೇಕು, ಮಂಗಳೂರು -ಪುಣೆ ಮಧ್ಯೆ ಹೊಸ ರೈಲು ಸೇವೆ ಆರಂಭಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮೂಕಾಂಬಿಕಾ ರೋಡ್‌ (ಬೈಂದೂರು) -ಕಾಸರಗೋಡು ರೈಲನ್ನು ಪುನರಾರಂಭಿಸಿ ಗುರುವಾ ಯೂರುವರೆಗೆ ವಿಸ್ತರಿಸಬೇಕು, ಕಾರವಾರ -(ಮಂಗಳೂರು ಜಂಕ್ಷನ್‌ ಮೂಲಕ) ಯಶವಂತಪುರ ಮಧ್ಯೆ ಸಂಚರಿಸುವ (16515/16) ಹಗಲು ರೈಲನ್ನು ತಿರುಪತಿಯವರೆಗೆ ವಿಸ್ತರಿಸ ಬೇಕು, ಮಂಗಳೂರು -ತಿರುಪತಿ ಮಧ್ಯೆ ಹೊಸ ರೈಲು ಮಂಜೂರು ಮಾಡಬೇಕು, ಮಂಗಳೂರು -ಬೆಂಗಳೂರು ಮಧ್ಯೆ ಸಂಚರಿಸುವ ರೈಲುಗಳ ವೇಗ ಹೆಚ್ಚಿಸಬೇಕು, ಮಂಗ ಳೂರಿನಿಂದ ಉತ್ತರ ಭಾರತದ ಪವಿತ್ರ ತೀರ್ಥಕ್ಷೇತ್ರಗಳಾದ ವಾರಾಣಸಿ, ಪ್ರಯಾಗ್‌ ರಾಜ್‌, ಗೋರಖ್‌ಪುರ ಸಂಪರ್ಕಿಸುವಂತೆ ಹೊಸ ರೈಲು ಮಂಜೂರು ಮಾಡಬೇಕು, ಸುಬ್ರಹ್ಮಣ್ಯ-ಸಕಲೇಶಪುರ ಹಳಿ ದ್ವಿಪಥ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಸುಬ್ರಹ್ಮಣ್ಯ ರೋಡ್‌ ನಿಲ್ದಾಣದಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿ, ಮಂಗಳೂರು -ಪುತ್ತೂರು – ಸುಬ್ರಹ್ಮಣ್ಯ ಪ್ಯಾಸೆಂಜರ್‌ ರೈಲು ಮತ್ತು ಕಾರವಾರ-ಬೆಂಗಳೂರು ರೈಲಿನ ವೇಳೆಯಲ್ಲಿ ಬದಲಾವಣೆ ಮಾಡಬೇಕು, ಮಂಗಳೂರು -ಕೊಯಮತ್ತೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ (22609/10) ರೈಲಿಗೆ ಗುರುವಾಯೂರಿಗೆ ಪ್ರಯಾಣಿಸುವ ಯಾತ್ರಿಗಳಿಗೆ ಅನುಕೂಲವಾಗುವಂತೆ ಕುಟ್ಟಿಪುರಂ ನಿಲ್ದಾಣದಲ್ಲಿ ನಿಲುಗಡೆ ಒದಗಿಸ ಬೇಕು, ಕೊಯಮತ್ತೂರು- ಮಂಗಳೂರು ಜಂಕ್ಷನ್‌ – ಜಬಲ್ಪುರ ಎಕ್ಸ್‌ಪ್ರೆಸ್‌ ವಿಶೇಷ ರೈಲನ್ನು ಖಾಯಂ ಗೊಳಿಸಬೇಕು ಸಹಿತ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ನಳಿನ್‌ ಮನವಿ ಮಾಡಿದ್ದಾರೆ.

ಮಂಗಳೂರು- ಬೆಂಗಳೂರು ನಿತ್ಯ ರೈಲು
ಜಿಲ್ಲೆಯಲ್ಲಿ ರೈಲ್ವೇ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಬಗ್ಗೆ ಸಚಿವ ಪಿಯೂಷ್‌ ಗೋಯಲ್‌ ಭರವಸೆ ನೀಡಿದ್ದಾರೆ. ಮಂಗಳೂರು -ಬೆಂಗಳೂರು ಮಧ್ಯೆ ಪ್ರಸ್ತುತ ವಾರಕ್ಕೆ ಮೂರು ದಿನ ಸಂಚರಿಸುವ (ಮಂಗಳೂರು-ಯಶವಂತಪುರ  ಎಕ್ಸ್‌ಪ್ರೆಸ್‌ 16585/86) ರೈಲನ್ನು ಪ್ರತಿನಿತ್ಯ ಓಡಿಸುವ ಕುರಿತು ತತ್‌ಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next