ಮುಂಬಯಿ, ಸೆ. 28: ನಲಸೋಪರ ಪೂರ್ವದ ಕಾರಣಿಕ ಕ್ಷೇತ್ರ ಎಂದೇ ಪ್ರಸಿದ್ಧಿಯನ್ನು ಪಡೆದ ಶ್ರೀ ಧರ್ಮ ಮಾರಿಯಮ್ಮ ದೇವಸ್ಥಾನದಲ್ಲಿ ವಾರ್ಷಿಕ ನವರಾತ್ರಿ ಉತ್ಸವ ಮತ್ತು ದಸರಾ ಪೂಜಾ ಮಹೋತ್ಸವವು ಸೆ. 29ರಂದು ಪ್ರಾರಂಭಗೊಳ್ಳಲಿದೆ.
ಧಾರ್ಮಿಕ ಕಾರ್ಯಕ್ರಮವಾಗಿ ಸೆ. 29 ರಂದು ಬೆಳಗ್ಗೆ 10.30ರಿಂದ ಕಲಶ ಸ್ಥಾಪನೆ ನಡೆದು ವಿವಿಧ ಪೂಜಾ ವಿಧಿ-ವಿಧಾನಗಳು ನೆರವೇರಲಿದೆ.
ಸೆ. 29ರಿಂದ ಅ. 7ರವರೆಗೆ ಪ್ರತೀ ದಿನ ಸಂಜೆ 7 ರಿಂದ ರಾತ್ರಿ 8.30ರವರೆಗೆ ಭಜನಾ ಕಾರ್ಯಕ್ರಮಗಳು, ಪೂಜೆ, ಆರತಿ ನಡೆಯಲಿದೆ. ಅ. 6ರಂದು ದುರ್ಗಾಷ್ಟಮಿಯ ಅಂಗವಾಗಿ ಮಧ್ಯಾಹ್ನ 11.35ರಿಂದ ದುರ್ಗಾಹೋಮ ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅ. 8ರಂದು ದಶಮಿಯ ದಿನದಂದು ದೇವಸ್ಥಾನದಲ್ಲಿ ಮಧ್ಯಾಹ್ನ 12ರಿಂದ ಮಹಾಪೂಜೆ, ಅನ್ನಸಂತರ್ಪಣೆನೆರವೇರಲಿದೆ.ಸಂಜೆ 5ರಿಂದ ಭಜನೆ, ದೇವಿ ದರ್ಶನ, ಸಿರಿಮುಡಿ ಗಂಧಪ್ರಸಾದ ವಿತರಣೆ ನಡೆಯಲಿದೆ. ದೇವಸ್ಥಾನವುಪ್ರಸ್ತುತ ಜೀರ್ಣೋದ್ಧಾರಗೊಳ್ಳುತ್ತಿದ್ದು, ಸರ್ವ ಭಕ್ತರು ಸಹಕರಿಸುವುದರ ನವರಾತ್ರಿಯ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ದೇವಸ್ಥಾನ ಟ್ರಸ್ಟ್‌ನ ವಿಶ್ವಸ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.