Advertisement

ನಾಗೂರು: ಟ್ಯಾಂಕರ್‌ಗೆ ಬಸ್‌ ಢಿಕ್ಕಿ; 1 ಸಾವು, ಇಬ್ಬರು ಗಂಭೀರ

03:50 AM Mar 28, 2017 | Team Udayavani |

ಕುಂದಾಪುರ/ ಉಪ್ಪುಂದ: ಓವರ್‌ಟೇಕ್‌ ಭರಾಟೆಯಲ್ಲಿ ನುಗ್ಗಿದ ಖಾಸಗಿ ಬಸ್‌ ಟ್ಯಾಂಕರ್‌ಗೆ ಢಿಕ್ಕಿ ಹೊಡೆದು ಟ್ಯಾಂಕರ್‌ ಚಾಲಕ ಸಾವಿಗೀಡಾದ ಘಟನೆ ನಾಗೂರು ಆಂಜನೇಯ ದೇವಸ್ಥಾನದ ಎದುರು ರಾ. 66ರಲ್ಲಿ  ಸೋಮವಾರ ಸಂಜೆ ಸಂಭವಿಸಿದೆ. 

Advertisement

ಶೃಂಗೇರಿ ಮೂಲದ ಚಾಲಕ ನಾರಾಯಣ ಆಚಾರ್‌ (43) ಸಾವಿಗೀಡಾಗಿದ್ದಾರೆ. ಬಸ್‌ನಲ್ಲಿದ್ದ ಇಪ್ಪತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಬಸ್‌ ಚಾಲಕ, ನಿರ್ವಾಹಕನ ಸ್ಥಿತಿ ಗಂಭೀರವಾಗಿದೆ. ಎಲ್ಲರೂ ಕುಂದಾಪುರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಂದಾಪುರದಿಂದ ಬೈಂದೂರಿನತ್ತ ಸಾಗುತ್ತಿದ್ದ ಖಾಸಗಿ ಬಸ್‌ ನಾಗೂರು ತಲುಪುತ್ತಿದ್ದಂತೆ ಓವರ್‌ಟೇಕ್‌ ಭರದಲ್ಲಿ ರಸ್ತೆಯ ತೀರಾ ಬಲಕ್ಕೆ ಸಾಗಿ ಬೈಂದೂರಿನಿಂದ ಕುಂದಾಪುರದತ್ತ ಸಾಗುತ್ತಿದ್ದ ಟ್ಯಾಂಕರ್‌ಗೆ ಢಿಕ್ಕಿ ಹೊಡೆಯಿತು. ಢಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗ ನಜ್ಜುಗುಜ್ಜಾಗಿದೆ. ಟ್ಯಾಂಕರ್‌ನ ಸ್ಟೇರಿಂಗ್‌ ಅಡಿಯಲ್ಲಿ ಸಿಲುಕಿದ್ದ ಚಾಲಕಧಿನನ್ನು ಸ್ಥಳೀಯರು ಹೊರತೆಗೆಯಲು ಹರಧಿಸಾಹಸ ಪಡಬೇಕಾಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲು ಸಾಧ್ಯಧಿವಾಗಲಿಲ್ಲ. ಅಪಘಾತದ ರಭಸಕ್ಕೆ ನಿರ್ವಾಹಕ ಸಹಿತ ಬಸ್‌ನಲ್ಲಿದ್ದ ನಾಲ್ವರು ಪ್ರಯಾಣಿಕರು ಹೊರಗೆಸೆಯಲ್ಪಟ್ಟರು. ಬಸ್‌ನಲ್ಲಿ 30ರಿಂದ 35 ಮಂದಿ ಪ್ರಯಾಣಿಸುತ್ತಿದ್ದರು. ಹೆಚ್ಚಿನವರು ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುತ್ತಿದ್ದರು.

ಬಸ್‌ನಲ್ಲಿದ್ದ ವಿಕ್ರಮ್‌ (32), ಸೀತಾ (40), ಚೈತ್ರಾ (26), ರಾಜು (52), ದೇವಕಿ (38), ಸಂಪ್ರೀತಾ (20), ಸುಪ್ರಿತಾ (10), ದಿವ್ಯಾ(31), ಮಂಜುನಾಥ ಆಚಾರ್ಯ (38), ಲಲಿತಾ ದೇವಾಡಿಗ (39), ದೇವೇಂದ್ರ ಗೊಂಡ (31), ದಿನೇಶ್‌ ಆಚಾರ್‌ (30), ಹಿರಿಯಣ್ಣ (37), ಸುಚಿಂದ್ರ (21), ಗೀತಾ (31), ಸುಮಾ (36), ಗಿರಿಜಾ ಬಳೆಗಾರ್‌ (45), ಈಶ್ವರ್‌(29), ಜೂಲಿಯಟ್‌ (47), ಜುಬೇರ್‌ ಭಾಷಾ (40), ಜೂಲೆಟ್‌ ಲೋಬೋ (48), ರಮೇಶ್‌ ಆಚಾರ್ಯ (27), ರವಿ (38) ಗಾಯಗೊಂಡವರು.

ಮೂರು ಆ್ಯಂಬುಲೆನ್ಸ್‌ಗಳಲ್ಲಿ ರವಾನೆ
ಅಪಘಾತ ಸಂಭವಿಸುತ್ತಿದ್ದಂತೆ ಎರಡು 108 ಆ್ಯಂಬುಲೆನ್ಸ್‌ ಹಾಗೂ ಒಂದು ಸ್ಥಳೀಯ ಆಸ್ಪತ್ರೆಯ ಆ್ಯಂಬುಲೆನ್ಸ್‌ ಸಹಿತ ಹಲವಾರು ಸ್ಥಳೀಯ ವಾಹನಗಳಲ್ಲಿ ಗಾಯಾಳುಗಳನ್ನು ಕುಂದಾಪುರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.

Advertisement

ಆಸ್ಪತ್ರೆಗೆ ದೌಡಾಯಿಸಿದ ಜನರು
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಬೈಂದೂರು ಹಾಗೂ ಸುತ್ತಮುತ್ತಲ ಜನರು ಕುಂದಾಧಿಪುರದ ಆಸ್ಪತ್ರೆಗೆ ದೌಡಾಯಿಸಿದರು. ಈ ಸಂದರ್ಭಧಿದಲ್ಲಿ ಜಿ.ಪಂ. ಸದಸ್ಯ ಶಂಕರ ಪೂಜಾರಿ ಅವರು ಆಸ್ಪತ್ರೆಗೆ ಆಗಮಿಸಿದ್ದರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವ ಉಳಿಸಿ ಜೀವ ತೆತ್ತ
ಎದುರಿನಿಂದ ಬರುತ್ತಿದ್ದ ಬಸ್‌ ಓವರ್‌ಟೇಕ್‌ ಮಾಡಿಕೊಂಡು ತೀರ ಬಲಭಾಗದಲ್ಲಿ ಬರುತ್ತಿರುವುದನ್ನು ಗಮನಿಸಿದ ಟ್ಯಾಂಕರ್‌ ಚಾಲಕ ನಾರಾಯಣ ಆಚಾರ್‌ ಮತ್ತಷ್ಟು ಬದಿಗೆ ಸರಿದರೂ ಅಲ್ಲಿ ಬೈಕ್‌ನಿಲ್ಲಿಸಿ ವ್ಯಕ್ತಿಯೋರ್ವ ಇರುವುದನ್ನು ಕಂಡು ಇನ್ನಷ್ಟು ಬದಿಗೆ ಹೋಗುವುದನ್ನು ನಿಯಂತ್ರಿಸಿಕೊಂಡರು. ಇದರಿಂದ ಬೈಕ್‌ಗೆ ಸವರಿದಂತೆ ಟ್ಯಾಂಕರ್‌ ಮುಂದಕ್ಕೆ ಹೋಗಿ ಬಸ್‌ಗೆ ಢಿಕ್ಕಿ ಹೊಡೆಯಿತು. ಬೈಕ್‌ ನಿಲ್ಲಿಸಿ ರಸ್ತೆ ಬದಿ ನಿಂತಿದ್ದ ದಿನೇಶ ಆಚಾರ್ಯ ಅವರಿಗೆ ಸಣ್ಣಪುಟ್ಟ ಏಟಾಗಿದೆ. ಬೈಕ್‌ ಸವಾರನ ಜೀವ ಉಳಿಸಿದರೂ ತನ್ನ ಜೀವವನ್ನು ಉಳಿಸಿಕೊಳ್ಳಲು ಚಾಲಕನಿಗೆ ಸಾಧ್ಯವಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next