Advertisement

ತವರಿಗೆ ಮರಳಿದ ನಿವೃತ್ತ ಸೇನಾನಿ ನಾಗೇಶ

03:48 PM Sep 06, 2020 | Suhan S |

ಕುಮಟಾ: ಸುದೀರ್ಘ‌ 22 ವರ್ಷ ಗಡಿ ರಕ್ಷಣಾ ದಳದಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯಾದ ತಾಲೂಕಿನ ಹೆಗಡೆಯ ಯೋಧ ನಾಗೇಶ ಪಟಗಾರ ಅವರನ್ನು ಶನಿವಾರ ತಾಲೂಕಿನ ಗಣ್ಯರು ಸೇರಿದಂತೆ ವಿವಿಧ ಸಂಘಟನೆ ವತಿಯಿಂದ ಆತ್ಮೀಯವಾಗಿ ಬರ ಮಾಡಿಕೊಳ್ಳಲಾಯಿತು.

Advertisement

1998ರಲ್ಲಿ ದೇಶದ ಗಡಿ ರಕ್ಷಣಾ ದಳಕ್ಕೆ ಆಯ್ಕೆಯಾದ ಇವರು, ಜಮ್ಮು-ಕಾಶ್ಮಿರ, ಮೇಘಾಲಯ ನಾಗಾಲ್ಯಾಂಡ್‌, ಬಾಂಗ್ಲಾದೇಶ ಗಡಿ, ತ್ರಿಪುರ, ಪಶ್ಚಿಮ ಬಂಗಾಳ, ರಾಜಸ್ಥಾನ, ಒಂದು ವರ್ಷ ದಕ್ಷಿಣಾ ಆಫ್ರಿಕಾದಲ್ಲಿ, ಗುಜರಾತ ಹಾಗೂ ಜಮ್ಮುವಿನ ಕುಪ್ಪವಾಡದಲ್ಲಿ 9 ತಿಂಗಳು ಸೇವೆ ಸಲ್ಲಿಸಿ, ನಿವೃತ್ತಿಯಾಗಿ ಸ್ವಂತ ಊರಾದ ಹೆಗಡೆಯ ಮಚಗೋಣಕ್ಕೆ ಮರಳಿದರು.

ಸ್ವಾಗತಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಹೆಗಡೆಯ ಸುಪುತ್ರ ನಾಗೇಶ ಪಟಗಾರ ಮಾತೃಭೂಮಿಯ ಸೇವೆ ಸಲ್ಲಿಸಿ, ತವರೂರಿಗೆ ಪಾದಾರ್ಪಣೆ ಮಾಡಿದ್ದಾರೆ. ಇದು ಹೆಮ್ಮೆಯ ವಿಷಯ. ಊರಿಗೆ ವಾಪಸ್ಸಾಗುವ ವೇಳೆ ಅವರನ್ನು ಸನ್ಮಾನಿಸಿ, ಬರ ಮಾಡಿಕೊಳ್ಳುವ ಸಂಪ್ರದಾಯ ಇತರರಿಗೆ ಆದರ್ಶವಾಗಿದೆ ಎಂದರು.

ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ, ಯೋಧ ನಾಗೇಶ ಪಟಗಾರ 22 ವರ್ಷ ದೇಶದ ಸೇವೆ ಸಲ್ಲಿಸಿ, ಊರಿಗೆ ಮರಳುತ್ತಿರುವುದು ಸಂತಸದ ಸಂಗತಿ ಎಂದರು. ನಿವೃತ್ತ ಸೈನಿಕ ನಾಗೇಶ ಪಟಗಾರ ಮಾತನಾಡಿ, ಪ್ರಥಮವಾಗಿ ಸೈನ್ಯಕ್ಕೆ ಸೇರ್ಪಡಯಾಗಿ ಬೆಂಗಳೂರಿನಲ್ಲಿ ತರಬೇತಿ ಪಡೆದು ದೇಶದ ಗಡಿಭಾಗಗಳಲ್ಲಿ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಸೇವೆ ಸಲ್ಲಿಸಿದ್ದೇನೆ. ನನಗೆ ನೀಡಿದ ಗೌರವವನ್ನು ಇತರ ಯೋಧರಿಗೂ ನೀಡುವ ಮೂಲಕ ಅವರನ್ನು ಸನ್ಮಾನಿಸಿ, ಗೌರವಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next